ವಿರಾಟ್ ಜೊತೆ ಬ್ಯಾಟಿಂಗ್ ಮಾಡಲು ನನ್ನ ಕೈಯಲ್ಲಿ ಸಾಧ್ಯವೇ ಇಲ್ಲ ಎಂದ ಮ್ಯಾಕ್ಸಿ, ಕಾರಣವೇನಂತೆ ಗೊತ್ತೇ?? ವಿರಾಟ್ ಹೀಗಾ ಮಾಡೋದು??
ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 5ರಲ್ಲಿ ಸೋತು 12 ಅಂಕಗಳೊಂದಿಗೆ ಟಾಪ್ 4ರಲ್ಲಿ ಕುಳಿತಿದೆ. ಆದರೆ ಟಾಪ್ ನಾಲ್ಕರಲ್ಲಿ ಕುಳಿತಿದೆ ಎಂದಮಾತ್ರಕ್ಕೆ ಸೇಫ್ ಎಂಬ ಮನೋಭಾವನೆಗೆ ಇಳಿಯುವಂತಿಲ್ಲ. ಯಾಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉಳಿದಿರುವ ಮೂರು ಪಂದ್ಯಗಳಲ್ಲಿ ಮೂರನ್ನು ಕೂಡ ಗೆಲ್ಲಲೇ ಬೇಕಾದಂತಹ ಒತ್ತಡ ದಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಮತ್ತೆ ತನ್ನ ಗೆಲುವಿನ ಮರಳಿ ಬಂದಿದೆ ಎಂದು ಹೇಳಬಹುದಾಗಿದೆ. ಇನ್ನು ಆರ್ಸಿಬಿ ತಂಡದಲ್ಲಿ ಮೊದಲು ಗೆಳೆತನಕ್ಕೆ ಸಾಕ್ಷಿಯಾಗಿದ್ದಿದ್ದು ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್. ಆದರೆ ಈಗ ವಿರಾಟ್ ಕೊಹ್ಲಿ ರವರ ಜೊತೆಗೆ ಅದೇ ಸ್ನೇಹವನ್ನು ಮುಂದುವರಿಸುತ್ತಿರುವುದು ಗ್ಲೆನ್ ಮ್ಯಾಕ್ಸ್ವೆಲ್ ಎಂದು ಹೇಳಬಹುದಾಗಿದೆ. ಆರ್ಸಿಬಿ ತಂಡದ ಯುಟ್ಯೂಬ್ ಚಾನೆಲ್ ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರು ವಿರಾಟ್ ಕೊಹ್ಲಿ ರವರಿಗೆ ಹೇಳಿರುವಂತಹ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ರವರಿಗೆ ಗ್ಲೆನ್ ಮ್ಯಾಕ್ಸ್ವೆಲ್ ರವರು ನಿನ್ನೊಂದಿಗೆ ಆಡಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಅರೆ ಹೀಗೆಂದ ತಕ್ಷಣ ನೀವು ಅನ್ಯತಾ ಬೇರೆ ಭಾವಿಸಬೇಡಿ.
ಇದನ್ನು ಗ್ಲೆನ್ ಮ್ಯಾಕ್ಸ್ವೆಲ್ ರವರು ಹೇಳಿದ್ದು ತಮಾಷೆಯಾಗಿ. ಹೌದು ಗೆಳೆಯರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ಆನ್ ಫೀಲ್ಡ್ ಸಖತ್ ಸ್ಪೀಡಾಗಿ ಓಡಾಡುತ್ತಾರೆ. ಇನ್ನು ರನ್ನಿಂಗ್ ನಲ್ಲಿ ಕೂಡ ವಿರಾಟ್ ಕೊಹ್ಲಿ ರವರು ಚಿರತೆಯ ರೀತಿಯಲ್ಲಿ ಓಡುತ್ತಾರೆ. ಅದೇ ರೀತಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ರವರು ಗ್ಲೆನ್ ಮ್ಯಾಕ್ಸ್ವೆಲ್ ರವರು ನಾನ್ ಸ್ಟ್ರೈಕ್ ನಲ್ಲಿ ಇದ್ದಾಗ ರನೌಟ್ ಆಗಿದ್ದರು. ಅದಕ್ಕೆ ನಿಮ್ಮ ಹಾಗೆ ಓಡಲು ನನಗೆ ಸಾಧ್ಯವಿಲ್ಲ ನೀವು ಅತಿ ಸುಲಭವಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ಗಳನ್ನು ತೆಗೆದುಕೊಳ್ಳುತ್ತೀರಿ ಆದರೆ ಓಟದಲ್ಲಿ ನಾನು ನಿಮಗೆ ಸರಿಸಾಟಿಯಲ್ಲ ಎಂಬುದಾಗಿ ವಿರಾಟ್ ಕೊಹ್ಲಿ ರವರ ಗುಣಗಾನ ಮಾಡಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ರವರ ಈ ಮಾತಿನ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.