ತಮಗಿಂತ ವಯಸಿನಲ್ಲಿ ದೊಡ್ಡವರನ್ನು ಮದುವೆಯಾಗಿರುವ ಭಾರತೀಯ ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಿನಿಮಾದಷ್ಟೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಹೊಂದಿರುವ ಇನ್ನೊಂದು ಕ್ಷೇತ್ರ ಎಂದರೆ ಅದು ಕ್ರಿಕೆಟ್ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಕ್ಷೇತ್ರದ ಆಟಗಾರರು ಚಿತ್ರರಂಗದ ಸೆಲೆಬ್ರಿಟಿಗಳಷ್ಟೇ ದೊಡ್ಡ ಮಟ್ಟದಲ್ಲಿ ಭಾರತ ದೇಶದಲ್ಲಿ ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಹೊಂದಿರುತ್ತಾರೆ. ಇಂದಿನ ವಿಷಯದಲ್ಲಿ ನಾವು ಮಾತನಾಡಲು ಹೊರಟಿರುವುದು ತಮ್ಮ ಪತ್ನಿಯರಿಗಿಂತ ವಯಸ್ಸಿನಲ್ಲಿ ಕಿರಿಯರಾಗಿರುವ ಕ್ರಿಕೆಟಿಗರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲ ಕ್ರಿಕೆಟಿಗರು ಕಾಣಸಿಗುತ್ತಾರೆ ಎಂಬುದನ್ನು ತಿಳಿಯೋಣ.

ಸಚಿನ್ ತೆಂಡೂಲ್ಕರ್; ಕ್ರಿಕೆಟ್ ನ ದಂತಕಥೆ ಹಾಗೂ ದೇವರು ಎಂದು ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರು ಅಂಜಲಿ ರವರನ್ನು ಮದುವೆಯಾಗಿರುತ್ತಾರೆ. ಇವರಿಬ್ಬರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದಾರೆ. ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ಅಂಜಲಿ ಆರು ವರ್ಷ ದೊಡ್ಡವರು. ಅನಿಲ್ ಕುಂಬ್ಳೆ; ಭಾರತೀಯ ಕ್ರಿಕೆಟ್ ತಂಡದ ಜಂಬು ಎಂದೇ ಖ್ಯಾತರಾಗಿರುವ ಕರ್ನಾಟಕ ಮೂಲದ ಅನಿಲ್ ಕುಂಬ್ಳೆ ಅವರು ತಮ್ಮ ಪತ್ನಿ ಚೇತನ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.

ವಿರಾಟ್ ಕೊಹ್ಲಿ; ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ರವರು ಹೇಗೆಲ್ಲಾ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಇತ್ತೀಚಿಗಷ್ಟೇ ಹೆಣ್ಣು ಮಗುವಿನ ಪೋಷಕರು ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರಿಗಿಂತ ಅನುಷ್ಕಾ ಶರ್ಮಾ ವಯಸ್ಸಿನಲ್ಲಿ ನೋಡುವುದಾದರೆ ಆರು ತಿಂಗಳು ದೊಡ್ಡವರು. ಸುರೇಶ್ ರೈನಾ; ಮಿಸ್ಟರ್ ಐಪಿಎಲ್ ಎಂದೇ ಬಿರುದಾಂಕಿತರಾಗಿ ರುವ ಸುರೇಶ್ ರೈನಾ ರವರು ಅಂಕಿತ ಚೌಧರಿ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ವಯಸ್ಸಿನ ಅಂತರವನ್ನು ನೋಡುವುದಾದರೆ ಅಂಕಿತ ಚೌಧರಿ ತನ್ನ ಪತಿ ರೈನಾ ಅವರಿಗಿಂತ ವಯಸ್ಸಿನಲ್ಲಿ ಐದು ತಿಂಗಳು ದೊಡ್ಡವರು.

ಜಸ್ಪ್ರೀತ್ ಬುಮ್ರಾ; ಮುಂಬೈ ತಂಡದಲ್ಲಿ ಮಿಂಚುವ ಮೂಲಕ ಭಾರತೀಯ ತಂಡಕ್ಕೆ ಆಯ್ಕೆಯಾಗಿರುವ ಹಾಗೂ ಈಗ ಭಾರತೀಯ ತಂಡದ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ನಿರೂಪಕಿ ಸಂಜನ ಗಣೇಶನ್ ರವರನ್ನು ಮದುವೆಯಾಗಿದ್ದಾರೆ. ಇನ್ನು ಸಂಜನಾ ಅವರು ತಮ್ಮ ಪತಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಹಾಗೂ ಏಳು ತಿಂಗಳು ದೊಡ್ಡವರು. ಇವರಿಬ್ಬರು ಇತ್ತೀಚಿಗಷ್ಟೇ ಮದುವೆಯಾಗಿದ್ದಾರೆ. ಶಿಖರ್ ಧವನ್; ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಿಖರ್ ಧವನ್ ಅವರು ಈಗಾಗಲೇ ಮೊದಲ ಮದುವೆಯಾಗಿರುವ ಹಾಗೂ ವಿಚ್ಛೇದಿತ ಮಹಿಳೆ ಯಾಗಿರುವ ಆಯೇಷಾ ಮುಖರ್ಜಿಯವರನ್ನು ಮದುವೆಯಾಗಿದ್ದರು. ಕೆಲವು ಸಮಯಗಳ ಹಿಂದಷ್ಟೇ ಇವರಿಬ್ಬರ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಇವರಿಬ್ಬರ ವಯಸ್ಸಿನ ಅಂತರವನ್ನು ನೋಡುವುದಾದರೆ ಶಿಖರ್ ಧವನ್ ರವರು ತಮ್ಮ ಪತ್ನಿಗಿಂತ 10 ವರ್ಷ ಚಿಕ್ಕವರು.

ರಾಬಿನ್ ಉತ್ತಪ್ಪ; ಕರ್ನಾಟಕ ಮೂಲದ ಆಟಗಾರನಾಗಿರುವ ರಾಬಿನ್ ಉತ್ತಪ್ಪ ರವರು ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ರವರನ್ನು ಮದುವೆಯಾಗಿದ್ದಾರೆ. ಇನ್ನು ಇವರಿಬ್ಬರಿಗೂ ಒಬ್ಬ ಗಂಡುಮಗ ಕೂಡ ಇದ್ದಾನೆ. ರಾಬಿನ್ ಉತ್ತಪ್ಪ ತಮ್ಮ ಪತ್ನಿಗಿಂತ ನಾಲ್ಕು ವರ್ಷ ಚಿಕ್ಕವರು. ನಿತೀಶ್ ರಾಣ; ಕೊಲ್ಕತ್ತಾ ನೈಟ್ ರೈಡರ್ಸ್ ಆಗು ಭಾರತೀಯ ತಂಡದಲ್ಲಿ ಈಗಾಗಲೇ ಆಡಿರುವ ನಿತೀಶ್ ರಾಣ ಸಚಿ ಮಾರ್ವ ಎನ್ನುವವರನ್ನು ಮದುವೆಯಾಗಿದ್ದಾರೆ. ಇನ್ನು ನಿತೀಶ್ ರಾಣ ತಮ್ಮ ಪತ್ನಿಗಿಂತ ವಯಸ್ಸಿನಲ್ಲಿ ಕೇವಲ ಇಪ್ಪತ್ತು ದಿನ ಚಿಕ್ಕವರು.

ಹಾರ್ದಿಕ್ ಪಾಂಡ್ಯ; ಹಾರ್ದಿಕ್ ಪಾಂಡ್ಯ ರವರ ಮದುವೆ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದೆ. ಬಾಲಿವುಡ್ ಮಾಡೆಲ್ ಹಾಗೂ ನಟಿಯಾಗಿರುವ ನತಾಶಾ ಸ್ಟಾಂಕೋವಿಕ್ ರವರನ್ನು ಮದುವೆಯಾಗಿ ಈಗಾಗಲೇ ಅಗಸ್ತ್ಯ ಎನ್ನುವ ಮಗನನ್ನು ಕೂಡ ಪಡೆದಿದ್ದಾರೆ. ಇನ್ನು ಹಾರ್ದಿಕ್ ಪಂಡಿತನ ಪತ್ನಿಗಿಂತ ಒಂದು ವರ್ಷ 7 ತಿಂಗಳು ಚಿಕ್ಕವರು. ಶಿವಂ ದುಬೆ; ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅದ್ಭುತವಾಗಿ ಆಡುತ್ತಿರುವ ಜೂನಿಯರ್ ಯುವರಾಜ್ ಸಿಂಗ್ ಎಂದೇ ಖ್ಯಾತರಾಗಿರುವ ಶಿವಂ ದುಬೆ ಅವರು ತಮ್ಮ ಗೆಳತಿ ಆಗಿರುವ ಅಂಜುಮ್ ಖಾನ್ ಅವರನ್ನು ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಇನ್ನು ಇವರು ತಮ್ಮ ಪತ್ನಿಗಿಂತ ಆರು ವರ್ಷ ಚಿಕ್ಕವರು.

ಮೊಹಮ್ಮದ್ ಶಮಿ; ವೇಗಿ ಮೊಹಮ್ಮದ್ ಶಮಿ ರವರು ಹಸೀನ ಜಹಾನ್ ಪರ್ ಅವರನ್ನು ಮದುವೆಯಾಗಿದ್ದಾರೆ ಈಗಾಗಲೇ ಇವರು ವಿವಾಹ ವಿಚ್ಛೇದನದ ಮೂಲಕ ಬೇರೆ ಬೇರೆ ಕೂಡ ಆಗಿದ್ದಾರೆ. ಇನ್ನು ಇವರು ತಮ್ಮ ಪತ್ನಿಗಿಂತ ಹತ್ತು ವರ್ಷ ಚಿಕ್ಕವ ರಾಗಿದ್ದಾರೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.