ಸ್ವಂತ ಅಕ್ಕ ತಮ್ಮ ಮನೆಯ ರೂಮಿನಲ್ಲಿ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದ ಅಪ್ಪ ಅಮ್ಮ, ಚಿಕ್ಕ ವಯಸ್ಸಿಗೆ ಮಕ್ಕಳು ತುಳಿಯುತ್ತಿರುವ ದಾರಿ. ಈಗ್ಯಾಕೆ ಆಯಿತು ಗೊತ್ತೇ??
ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಸಂಬಂಧಗಳಿಗೆ ಎಲ್ಲರೂ ಕೂಡ ಬೆಲೆ ನೀಡುತ್ತಿದ್ದರು. ಮೊದಲು ಕೂಡುಕುಟುಂಬ ಇದ್ದ ಕಾರಣದಿಂದಾಗಿ ಎಲ್ಲರೂ ಕೂಡ ಒಟ್ಟಿಗೆ ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಗಳ ಅರಿವು ಎಲ್ಲರಲ್ಲೂ ಕೂಡ ಇತ್ತು. ಆದರೆ ಈಗ ಚಿಕ್ಕ ಫ್ಯಾಮಿಲಿ ವಾತಾವರಣದ ಕಾರಣದಿಂದಾಗಿ ಮಕ್ಕಳ ನಡುವೆ ಹಾಗೂ ಹಿರಿಯರ ನಡುವೆ ಕೂಡ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಹೋಗಿಬಿಟ್ಟಿದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವ ವಿಚಾರದಲ್ಲಿ ಸಹೋದರ ಹಾಗೂ ಸಹೋದರಿ ಮಾಡಿಕೊಂಡಿರುವ ಕೆಲಸವನ್ನು ನೋಡಿದರೆ ನೀವು ಕೂಡ ಬೆಚ್ಚಿಬೀಳ್ತಿರಾ.
ಒಂದು ಕಾಲದಲ್ಲಿ ಮನೆಯಲ್ಲಾಗಲಿ ಹೊರಗೆ ಆಗಲಿ ಸಹೋದರ ಹಾಗೂ ಸಹೋದರಿಯರಿಗೂ ಎಷ್ಟೇ ಚಿಕ್ಕ ವಯಸ್ಸಿನಲ್ಲಿ ಕಿತ್ತಾಡಿಕೊಂಡರು ಕೂಡ ಕಷ್ಟ ಅಥವಾ ಅಪಾಯದ ಸನ್ನಿವೇಶಗಳು ಬಂದಾಗ ತನ್ನ ಸಹೋದರಿಗೆ ಸಹೋದರ ರಕ್ಷಣೆಯಾಗಿ ನಿಲ್ಲುತ್ತಿದ್ದ. ತನ್ನ ಸಹೋದರನನ್ನು ಕೂಡ ಸಹೋದರಿ ಎರಡನೇ ತಾಯಿಯಂತೆ ಪ್ರೀತಿಯಿಂದ ಕಾಣುತ್ತಿರುತ್ತಾಳೆ. ಒಂದು ಕಾಲದಲ್ಲಿ ಇಂತಹ ಮುಗ್ಧ ಪ್ರೀತಿ ವಾತ್ಸಲ್ಯ ಎನ್ನುವುದು ಮಕ್ಕಳ ನಡುವೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಸೌಲಭ್ಯ ಸಿಕ್ಕ ಕಾರಣದಿಂದಾಗಿ ಮಕ್ಕಳ ಮನಸ್ಸಿನ ದಾರಿ ಅನ್ನುವುದು ನಿಜಕ್ಕೂ ಕೂಡ ಕೆಟ್ಟ ಕಡೆಗೆ ಹೋಗುತ್ತಿದೆ.
ಹೌದು ನಾವು ಇಂದು ಮಾತನಾಡಲು ಹೊರಟಿರುವುದು ಕೂಡ ಸಹೋದರ ಹಾಗೂ ಸಹೋದರಿಯ ಕುರಿತಂತೆ. ತಮ್ಮನ ಹೆಸರು ನಾಗರಾಜ ಎಂದು 16 ವರ್ಷ ವಯಸ್ಸು. ಅಕ್ಕ ಭಾಗ್ಯಶ್ರೀ ಗೆ 18 ವರ್ಷ ವಯಸ್ಸು. ಇಬ್ಬರೂ ಕೂಡ ಹಾವೇರಿ ಜಿಲ್ಲೆಯವರು. ಅಕ್ಕನಾಗಿ ತಮ್ಮನಿಗೆ ತಮ್ಮ ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ತಿಳಿದ ನಂತರ ನೀನು ಚೆನ್ನಾಗಿ ಶಾಲೆಗೆ ಹೋಗಿ ಕಲಿತು ದೊಡ್ಡ ಆಫೀಸರ್ ಆದರೆ ನಮಗೆಲ್ಲ ಎಷ್ಟು ಖುಷಿಯಾಗುತ್ತದೆ ಗೊತ್ತಾ ಎಂಬುದಾಗಿ ಪ್ರೀತಿಯಿಂದ ಬುದ್ಧಿಮಾತನ್ನು ಹೇಳಿದ್ದಾಳೆ. ಆದರೆ ಆ ಹುಡುಗ ಇದನ್ನು ಯಾವ ರೀತಿ ತೆಗೆದುಕೊಂಡನೋ ಗೊತ್ತಿಲ್ಲ.
ಮಾರನೇ ದಿನ ಬೆಳಗ್ಗೆ ತನ್ನ ರೂಮಿನಲ್ಲಿ ತನ್ನ ಜೀವನವನ್ನು ಕಳೆದುಕೊಂಡುಬಿಟ್ಟಿದ್ದಾನೆ. ನಿಜಕ್ಕೂ ಕೂಡ ಇಂದಿನ ಕಾಲದ ಮಕ್ಕಳ ಸೂಕ್ಷ್ಮತೆ ಎನ್ನುವುದು ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಈ ಘಟನೆಯನ್ನು ನೋಡಿ ನಾವು ತಿಳಿದುಕೊಳ್ಳಬಹುದಾಗಿದೆ. ಇನ್ನು ಇಷ್ಟು ಮಾತ್ರವಲ್ಲದೆ ತಮ್ಮ ಈ ರೀತಿ ಮಾಡಿಕೊಂಡಿರುವ ವಿಚಾರವನ್ನು ರೂಮಿಗೆ ಬಂದು ನೋಡಿದ ನಂತರ ಅಕ್ಕನ ಕೂಡ ಅವಳ ರೂಮಿಗೆ ಹೋಗಿ ತನ್ನ ಜೀವನವನ್ನು ಕಳೆದುಕೊಂಡುಬಿಟ್ಟಿದ್ದಾಳೆ. ಒಂದೇ ದಿನ ಒಂದೇ ಮನೆಯಲ್ಲಿ ಸಹೋದರ-ಸಹೋದರಿ ಇಬ್ಬರು ಕೂಡ ತಮ್ಮ ಜೀವನವನ್ನು ಕಳೆದುಕೊಂಡುಬಿಟ್ಟಿದ್ದಾರೆ. ಅದು ಕೂಡ ಚಿಕ್ಕ ವಿಷಯಕ್ಕಾಗಿ.
ಈ ಮಕ್ಕಳು ಮಾಡಿಕೊಂಡಿರುವ ಕೆಲಸ ಈಗ ಅವರ ಮನೆಯವರಿಗೆ ಜೀವನ ಪರ್ಯಂತ ಕಣ್ಣೀರನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಈ ಘಟನೆಯ ನಂತರ ನಮ್ಮ ಸಮಾಜ ಯಾವ ರೀತಿ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವೇ ನಮ್ಮ ಕಣ್ಣಾರೆ ನೋಡಬಹುದಾಗಿದೆ. ನಿಜಕ್ಕೂ ಕೂಡ ಪೋಷಕರು ತಮ್ಮ ಮಕ್ಕಳು ಚೆನ್ನಾಗಿರಲಿ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರಲಿ ಎಂಬುದಾಗಿ ಹಾರೈಸುತ್ತಾರೆ. ಈ ಆಸೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಹಿರಿಯವರು ಎಂದು ಅನಿಸಿಕೊಂಡವರು ಖಂಡಿತವಾಗಿ ಕೆಲವೊಮ್ಮೆ ಬುದ್ಧಿ ಮಾತನ್ನು ಹೇಳುತ್ತಾರೆ.
ಆದರೆ ಆ ಮಕ್ಕಳು ಅದನ್ನು ಇಷ್ಟೊಂದು ಮನಸ್ಸಿಗೆ ನಾಟುವ ಹಾಗೆ ದೊಡ್ಡ ತಪ್ಪು ಮಾಡಿದ್ದೇವೆ ಎಂಬ ರೀತಿಯಲ್ಲಿ ತೆಗೆದುಕೊಂಡು ಜೀವನವನ್ನು ಕಳೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ. ನಿಜಕ್ಕೂ ಕೂಡ ಮೊಬೈಲ್ ಫೋನ್ ಗಳಿಗೆ ಅಂಟಿಕೊಂಡಿರುವ ಮಕ್ಕಳಿಗೆ ಸಾಮಾಜಿಕ ಮೌಲ್ಯ ಹಾಗೂ ಸಂಬಂಧದ ನಡುವಿನ ಮಹತ್ವವನ್ನು ತಿಳಿಯುವ ಗೊಡವೆಗೆ ಕೂಡ ಹೋಗುತ್ತಿಲ್ಲ ಎನ್ನುವುದು ಮತ್ತೊಂದು ವಿಷಾದನೀಯ ವಿಚಾರ. ಈ ಘಟನೆಯನ್ನು ಕೇಳಿದರೆ ಪ್ರತಿಯೊಬ್ಬರಿಗೂ ಕೂಡ ಮಕ್ಕಳ ಮೇಲೆ ಕೋಪ ಹಾಗೂ ಅವರು ಬೆಳೆದು ಬಂದಂತಹ ರೀತಿಯ ಮೇಲೆ ಅಸಹನೆ ಮೂಡುವುದು ಸಹಜ. ಯಾಕೆಂದರೆ ಒಂದು ಚಿಕ್ಕ ಮಾತಿಗೆ ಇಷ್ಟೊಂದು ದೊಡ್ಡ ನಿರ್ಧಾರವನ್ನು ತೆಗೆದು ಕೊಳ್ಳುವ ಅಗತ್ಯವಾದರೂ ಏನಿತ್ತು.
ಇದು ನಮ್ಮ ಸಮಾಜದಲ್ಲಿರುವ ಇನ್ನಷ್ಟು ಸೂಕ್ಷ್ಮ ಮಕ್ಕಳಿಗೆ ಪಾಠವಾಗಲಿ ಯಾಕೆಂದರೆ ಪ್ರತಿಯೊಂದು ಚಿಕ್ಕ ತಪ್ಪಿಗೂ ದೊಡ್ಡಮಟ್ಟದ ಶಿಕ್ಷೆಯನ್ನು ಅನುಭವಿಸುವ ಮನೋಭಾವನೆ ಯಾರಲ್ಲಿ ಕೂಡ ಬರಬಾರದು. ಜೀವನವನ್ನು ನಿಮಗಾಗಿ ಯೋಚಿಸುವ ಮೊದಲು ನಿಮಗಾಗಿ ಜೀವನವನ್ನೇ ಮುಡಿಪಾಗಿರುವ ನಿಮ್ಮ ಪೋಷಕರ ಬಗ್ಗೆ ಮೊದಲು ಯೋಚಿಸಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.