ಸತತ ನಾಲ್ಕು ಪಂದ್ಯಗಳನ್ನು ಸೋತ ಮುಂಬೈ, ತಂಡದ ಅಭಿಮಾನಿಗಳೆ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವುದೇನು ಗೊತ್ತಾ ??

28

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಐಪಿಎಲ್ ಸಾಕಷ್ಟು ಅದ್ದೂರಿಯಾಗಿ ಪ್ರಾರಂಭವಾಗಿದ್ದು ಪ್ರತಿಯೊಂದು ಪಂದ್ಯಗಳು ಕೂಡ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ರೋಚಕವಾಗಿ ಮೂಡಿ ಬರುತ್ತಿವೆ. ಪ್ರತಿಬಾರಿ ಕ್ವಾಲಿಫೈಯರ್ ಹಂತಕ್ಕೆ ತಲುಪುವಂತಹ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖಂಡಿತವಾಗಿ ಇದ್ದೇ ಇರುತ್ತಿದ್ದವು‌. ಆದರೆ ಈ ಬಾರಿ ಎರಡು ತಂಡಗಳು ಕೂಡ ಆಡಿದ ಎಲ್ಲಾ ಮ್ಯಾಚನ್ನು ಸೋಲುತ್ತಾ ಬಂದಿವೆ ಎನ್ನುವುದು ನಿಜಕ್ಕೂ ಕೂಡ ಆಯ್ಕೆ ಅಭಿಮಾನಿಗಳಿಗೆ ದುಃಖವನ್ನು ತರಿಸಿದೆ.

ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಕೂಡ ಗೆದ್ದು ಬೀಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ನಿನ್ನೆ 7 ವಿಕೆಟ್ ಗಳ ಗೆಲುವಿನಿಂದ ಹೀನಾಯವಾಗಿ ಸೋಲಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಮಾಡಿರುವ ಕಾರ್ಯ ಈಗ ತಂಡದ ಮಾನಸಿಕ ಸ್ಥಿತಿಯನ್ನು ಹಿನ್ನಡೆಗೆ ತರುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಹೌದು ನೆಚ್ಚಿನ ತಂಡ ಗೆದ್ದಾಗ ಖುಷಿ ಪಡುವ ಅಭಿಮಾನಿಗಳು ಸೋತಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹ ಮಾಡಲು ಬರುವುದಿಲ್ಲ. ಇಲ್ಲಿ ಕೂಡ ಐದು ಬಾರಿ ಚಾಂಪಿಯನ್ ಆಗಿರುವ ತಂಡದ ಗೆಲುವಿನ ಸಂದರ್ಭದಲ್ಲಿ ಖುಷಿಯಿಂದ ಕುಣಿದಾಡುತ್ತಿದ್ದ ಅಭಿಮಾನಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ ತೋರಿಸಿದ ಹಾಗೆ ರೋಹಿತ್ ಶರ್ಮ ಸೇರಿದಂತೆ ಮುಂಬೈ ತಂಡವನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ಒಂದು ಪಂದ್ಯವನ್ನಾದರೂ ಗೆಲ್ಲಿ ಎಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ದ್ವೇಷಿ ಗಳಂತೆ ಟೀಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಬಂದು ಆಡಿ ಇಲ್ಲದಿದ್ದರೆ ಅವರಿಂದ ಒಂದು ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ ಎಂಬುದಾಗಿ ಇನ್ನೊಂದು ರೀತಿಯಲ್ಲಿ ಬಾಯಿಗೆ ಬಂದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಈ ವರ್ತನೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.