ಈ ಬಾರಿಯ ಐಪಿಎಲ್ ನೋಡುತ್ತಿದ್ದರೆ, ಐಪಿಎಲ್ ನಂತರ ಈತನೇ ಭಾರತ ತಂಡದ ನಾಯಕ ಎಂದ ಶೋಯೆಬ್ ಅಖ್ತರ್, ಆ ಯುವ ಆಟಗಾರ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಐಪಿಎಲ್ ಭಾರತ ಕ್ರಿಕೆಟ್ ಜಗತ್ತಿನ ಹೊಸಹುಟ್ಟು. ಅವಕಾಶಗಳೇ ಸಿಗದ ಹಲವಾರು ಜನ ಐಪಿಎಲ್ ನಲ್ಲಿ ಮಿಂಚಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಕೆಲವು ಪ್ರಸಿದ್ಧಿ ಗಳಿಸಿದ್ದ ಆಟಗಾರರು ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ತೋರಿ ತಂಡದಿಂದಲೇ ಹೊರಬಿದ್ದಿರುವ ಸಂಗತಿಗಳು ಸಹ ಗತಿಸಿವೆ. ಇನ್ನು ಈ ಭಾರಿಯ ಐಪಿಎಲ್ ಬಹಳ ತುರುಸಿನ ಸ್ಪರ್ಧೆಗೆ ಹೆಸರಾಗಿದೆ. ಹತ್ತರಲ್ಲಿ ಏಳು ತಂಡಗಳು ಮೊದಲ ನಾಲ್ಕು ಸ್ಥಾನಕ್ಕೆ ತೀವ್ರ ಪೈಪೋಟಿ ನೀಡುತ್ತಿವೆ.
ಆದರೇ ಚಾಂಪಿಯನ್ ತಂಡಗಳಾಗಿದ್ದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮೂರು ಪಂದ್ಯಗಳನ್ನು ಆಡಿದರೂ, ಇದುವರೆಗೂ ಗೆಲುವಿನ ಖಾತೆ ತೆರೆದಿಲ್ಲ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೇಲೆ ಈಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ ಸುರಿಯುತ್ತಿದೆ. ಇನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮಾತನಾಡಿ, ಐಪಿಎಲ್ ನಂತರ ಈ ಆಟಗಾರ ಭಾರತ ತಂಡದ ನಾಯಕತ್ವದ ರೇಸ್ ಗೆ ಮುಂದೆ ಬರಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ. ಬನ್ನಿ ಆ ಆಟಗಾರ ಯಾರು ಎಂದು ತಿಳಿಯೋಣ.
ಸದ್ಯ 34 ವರ್ಷದ ರೋಹಿತ್ ಶರ್ಮಾ ವಯಸ್ಸಿನ ಕಾರಣ ಇನ್ನು ಹೆಚ್ಚು ದಿನಗಳ ಕಾಲ ಭಾರತ ತಂಡದ ನಾಯಕನಾಗಲು ಆಗುವುದಿಲ್ಲ. ಅವರು ಭವಿಷ್ಯದ ನಾಯಕನಿಗೆ ಜಾಗ ಬಿಟ್ಟು ಕೊಡಬೇಕಾಗುತ್ತದೆ. ಈಗಾಗಲೇ ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗಿ ರಿಷಭ್ ಪಂತ್, ಜಸಪ್ರಿತ್ ಬುಮ್ರಾ, ಕೆ.ಎಲ್.ರಾಹುಲ್ ಹೆಸರು ಕೇಳಿ ಬಂದಿದೆ. ಆದರೇ ಅಖ್ತರ್ ಪ್ರಕಾರ ಈ ಮೂವರು ಹೆಸರು ನಾಯಕನ ಸ್ಥಾನಕ್ಕೆ ಹಿಂದೆ ಹೋಗಲಿದೆಯಂತೆ. ಅಖ್ತರ್ ಪ್ರಕಾರ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಭಾರತ ತಂಡದ ಮುಂದಿನ ನಾಯಕರಾಗುವುದಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. ಕೋಲ್ಕತಾ ತಂಡವನ್ನು ಅದ್ಭುತವಾಗಿ ಮುನ್ನಡಸುತ್ತಿದ್ದಾರೆ. ಅದು ಅವರಲ್ಲಿರುವ ಉತ್ತಮ ನಾಯಕತ್ವದ ಗುಣಲಕ್ಷಣಗಳನ್ನು ತಿಳಿಸುತ್ತದೆ. ಹಾಗಾಗಿ ಅವರು ಮುಂದಿನ ಭಾರತ ತಂಡದ ನಾಯಕನಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.