ಭರ್ಜರಿಯಾಗಿ ಮಿಂಚುತ್ತಿರುವ ಭಾರತ ಎಬಿಡಿ ಆಯುಷ್ ಬದೋನಿ ರವರನ್ನು ಕನ್ನಡಿಗ ಕ್ಯಾಪ್ಟನ್ ರಾಹುಲ್ ಏನೆಂದು ಕರೆಯುತ್ತಾರೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ಐಪಿಎಲ್ 2022 ಆರಂಭವಾಗಿ ಎರಡು ವಾರ ಕಳೆದಿದೆ. ಬಲಿಷ್ಠ ತಂಡ ಎಂದು ಕರೆಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದರೂ, ಈವರೆಗೆ ಗೆಲುವಿನ ಖಾತೆಯನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಈ ಐಪಿಎಲ್ ನ ವಿಶೇಷತೆಯೆಂದರೇ,ಭಾರತದ ಯುವ ಆಟಗಾರರು ಮಿಂಚುತ್ತಿರುವುದು.
ಆರ್ಸಿಬಿಯ ಅನುಜ್ ರಾವತ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಯುಷ್ ಬದೋನಿ, ಗುಜರಾತ್ ಟೈಟಾನ್ಸ್ ನ ಅಭಿನವ್ ಮನೋಹರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲಲಿತ್ ಯಾದವ್ ಹೀಗೆ ಯುವ ಆಟಗಾರರು ಮಿಂಚುತ್ತಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಮಿಂಚುತ್ತಿರುವ ಅಂಡರ್ 19 ತಂಡದ ಆಟಗಾರ ಆಯುಷ್ ಬದೋನಿ , ಈಗ ತಮ್ಮ ತಂಡದ ನಾಯಕ ಕೆ.ಎಲ್.ರಾಹುಲ್ ಬಗ್ಗೆ ವಿಶೇಷವಾದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಬನ್ನಿ ಆ ಮಾಹಿತಿ ಏನೆಂಬುದನ್ನು ನಾವು ತಿಳಿಯೋಣ.
ಆಯುಷ್ ಬದೋನಿ ತಂಡವನ್ನು ಕೂಡಿಕೊಂಡು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ , ರಾಹುಲ್ ಆಯುಷ್ ಬಳಿ ಬಂದರಂತೆ. ನೀವು ಯಾವ ಕ್ರಿಕೇಟರ್ ನಿಂದ ಸ್ಪೂರ್ತಿ ಗೆ ಒಳಗಾಗಿದ್ದಿರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಆಯುಷ್, ನೇರವಾಗಿ ನನ್ನ ಇಷ್ಟದ ಕ್ರಿಕೇಟಿಗ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಎಂದರಂತೆ. ಅಂದಿನಿಂದ ರಾಹುಲ್ ಆಯುಷ್ ರವರನ್ನು ಎಬಿ ಎಂದೇ ಕರೆಯಲು ಆರಂಭಿಸಿದರಂತೆ. ಮೈದಾನದಲ್ಲಿಯೂ ಸಹ ಎಬಿ ಎಂದೇ ಕರೆಯುತ್ತಾರಂತೆ. ಇನ್ನು ಅವರು ಹಾಗೆ ಕರೆದ ಪರಿಣಾಮವೋ ಏನೋ, ಆಯುಷ್ ಬದೋನಿ ಸಹ ಎಬಿ ಡಿ ವಿಲಿಯರ್ಸ್ ರೀತಿಯೇ ಬ್ಯಾಟ್ ಬೀಸಿ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಎರಡು ಭಾರಿ ಗೆಲುವನ್ನು ತಂದು ಕೊಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.