ಖಡಕ್ ಐಪಿಎಸ್ ಅಧಿಕಾರಿ ಬ್ಯಾಗ್ ಅನ್ನು ಏರ್ಪೋರ್ಟ್ ನಲ್ಲಿ ಚೆಕ್ ಮಾಡಿದಾದ ಸಿಕ್ಕಿದ್ದೇನು ಗೊತ್ತೇ? ಬ್ಯಾಗ್ ಓಪನ್ ಮಾಡಿದ ಏರ್ಪೋರ್ಟ್ ಸಿಬ್ಬಂದಿಗೆ ಶಾಕ್.
ನಮಸ್ಕಾರ ಸ್ನೇಹಿತರೇ, ಒಬ್ಬ ಐಪಿಎಸ್ ಅಧಿಕಾರಿ ಅಂದರೆ ಅವರದ್ದೇ ಆದ ಗೌರವ, ಗತ್ತು ಗಾಂಭೀರ್ಯ ಇರುತ್ತೆ. ಹಾಗಾಗಿ ಅವರನ್ನ ಜನರು ಕೂಡ ಅಷ್ಟೇ ಗೌರವಿಸುತ್ತಾರೆ ಭಯವೂ ಪಡ್ತಾರೆ. ಜನರೊಂದಿಗೆ ಕೆಲವು ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಅಪರೂಪ. ಆದರೆ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಜೈಪುರ್ ಏರ್ಪೋರ್ಟ್ ನಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಜೈಪುರ್ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳು ಐಪಿಎಸ್ ಅಧಿಕಾರಿ ಅರುಣ್ ಬೋತ್ರ ಅವರನ್ನು ಅವರ ಬ್ಯಾಗ್ ನ್ನೂ ಓಪನ್ ಮಾಡುವಂತೆ ಹೇಳಿದ್ದಾರೆ. ಅದನ್ನು ಓಪನ್ ಮಾಡಿ ನೋಡಿದಾಗ ಸಿಬ್ಬಂದಿಗಳು ದಂಗಾಗಿದ್ದಾರೆ. ಹೌದು ಆ ಬ್ಯಾಗ್ ನಲ್ಲಿ ಏನಿದೆ ಎಂಬುದನ್ನು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಒಡಿಶಾದ ಸಾರಿಗೆ ಆಯುಕ್ತರಾದ ಅರುಣ್ ಬೋತ್ರಾ ವಿಮಾನದಲ್ಲಿ ಪ್ರಯಾಣಿಸಲು ಚೆಕ್ ಇನ್ ಆಗುವಾಗ ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಅವರಿಗೆ ಸೂಟ್ಕೇಸ್ ಓಪನ್ ಮಾಡಿ ತೋರಿಸಲು ಹೇಳಿದರು. ಅದರೊಳಗೆ ಏನಿತ್ತು ಎಂಬುದನ್ನು ನೀವು ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಆ ಸೂಟ್ಕೇಸ್ ತುಂಬ ತುಂಬಿತ್ತು ಪ್ರೆಶ್ ಹಸಿರು ಬಟಾಣಿಗಳು!
ಸ್ಕ್ಯಾನರ್ ನಲ್ಲಿ ಬೇರೇನೋ ವಸ್ತು ಇದ್ದಂತೆ ಕಂಡು, ಸಿಬ್ಬಂದಿಗಳು ಅರುಣ್ ಅವರ ಸೂಟ್ಕೇಸ್ ತೆರೆದಾಗ ಅದರ ತುಂಬ ತುಂಬಿತ್ತು ತಾಜಾ ಹಸಿರು ಬಟಾಣಿ! ಕೆಜಿಗೆ 40 ರೂ. ಕೊಟ್ಟು ಸೂಟ್ಕೇಸ್ ತುಂಬುವಷ್ಟು ಬಟಾಣಿಯನ್ನು ಖರೀದಿಸಿ ತಂದಿದ್ದರು. ಇದನ್ನು ನೋಡಿ ಸಿಬ್ಬಂದಿಗಳಿಗೂ ಆಶ್ಚರ್ಯವಾಗಿದೆ. ಇನ್ನು ಈ ಘಟನೆಯನ್ನು ಫೋಟೋ ಜೊತೆಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅಧಿಕಾರಿ ಅರುಣ್ ತಮಾಷೆಯಾಗಿ ಈ ಪೋಸ್ಟ್ ಹಾಕಿಕೊಂಡಿದ್ದಾರೆ. 2.3 ಲಕ್ಷ ಅನುಯಾಯಿಗಳನ್ನು ಹೊಂದಿರುವ ಅರುಣ್ ಬೊತ್ರಾ ಅವರ ಈ ಪೋಸ್ಟ್ ಗೆ 60 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.