ಇವರು ಅಂತಿಂತ ಚೆಲುವೆಯಲ್ಲ, ಮತ್ತಷ್ಟು ಫೋಟೋ ಬಿಡುಗಡೆ ಮಾಡಿ, ಸದ್ದು ಮಾಡಿದ ಅಪ್ರತಿಮ ಸುಂದರಿ. ಹೇಗಿದೆ ಗೊತ್ತಾ ಫೋಟೋಗಳು??
ನಮಸ್ಕಾರ ಸ್ನೇಹಿತರೇ, ಸದ್ಯ ಸಿನಿಮಾ ರಂಗದಲ್ಲಿ ಸಮಂತಾ ಹೈಲೈಟ್. ಒಂದಲ್ಲಾ ಒಂದು ಕಾರಣಕ್ಕೆ ಸಮಂತಾ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಪಾನೀಯದ ಜಾಹೀರಾತಿನೊಂದರಲ್ಲಿ ಸಮಂತಾ ತೊಟ್ಟ ಬಟ್ಟೆಗೆ ನಕಾರಾತ್ಮಕ ಕಮೆಂಟ್ ಗಳು ಬಂದಿದ್ದವು. ಅದರ ಬೆನ್ನಲ್ಲೇ ಸಮಂತಾ ಬಟ್ಟೆ ಬ್ಯುಸನೆಸ್ ಗೆ ಕೈಜೋಡಿಸಿದ್ದು ಸಾಕಷ್ಟು ಹಾರೈಕೆಗಳನ್ನೂ ಗಿಟ್ಟಿಸಿಕೊಂಡಿತ್ತು. ಇದೀಗ ಸಮಂತಾ ತಮ್ಮ ಗ್ರೇಡ್ ಲುಕ್ ನಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು, ಸಮಂತಾ ರುತ್ ಪ್ರಭು ಅವರು ಬಿಳಿ ಬಣ್ಣದ ಕಾರ್ಸೆಟ್ ಮತ್ತು ಪ್ಯಾಂಟ್ ಸೆಟ್‌ನಲ್ಲಿ ಅವರ ಇತ್ತೀಚಿನ ಚಿತ್ರವನ್ನು ಪೋಸ್ಟ್ ಮಾಡುವುದರ ಮೂಲಕ ಅಭಿಮಾನಿಗಳ ಕನಸನ್ನು ಕದ್ದಿದ್ದಾರೆ. ಪ್ರೀತಮ್ ಜುಕಾಲ್ಕರ್ ಅವರ ವಿನ್ಯಾಸದ ಈ ಬಟ್ಟೆ, ಮುಂಭಾಗದಲ್ಲಿ ಕಪ್ಪು ಡ್ರಾಸ್ಟ್ರಿಂಗ್ ನೊಂದಿಗೆ ಬಸ್ಟಿಯರ್ ಕಾರ್ಸೆಟ್ ಟಾಪ್ ಅನ್ನು ಹೊಂದಿದೆ. ಲೇಬಲ್ ಪೊಲೈಟ್ ಸೊಸೈಟಿಯಿಂದ ಕಾಂಟ್ರಾಸ್ಟ್ ಪ್ಯಾನೆಲಿಂಗ್‌ನೊಂದಿಗೆ ಕಚ್ಚಾ ಹತ್ತಿ ಡೆನಿಮ್‌ನೊಂದಿಗೆ ತಯಾರಾದ ಈ ಪೋಷಾಕಿನಲ್ಲಿ ಸ್ಯಾಮ್ ಸಕ್ಕತ್ ಗ್ಲಾಮರ್ ಆಗಿಯೂ ಕಾಣಿಸುತ್ತಾರೆ.
ಈ ಫೋಟೋ ಶೂಟ್ ನಲ್ಲಿ ಅತ್ಯಂತ ಸೊಗಸಾದ ಅಮಾಮಾ ಜ್ಯುವೆಲ್ಸ್‌ನ ಕ್ಯೂರೇಟೆಡ್ ಕಿವಿಯೋಲೆಗಳೊಂದಿಗೆ ಕಂಗೊಳಿಸಿದ್ದಾರೆ ಸ್ಯಾಮ್. ಸಮಂತಾ ತನ್ನ ಕೂದಲನ್ನು ಎತ್ತರದ ಪಾಂಟಿ-ಟೈಲ್‌ನಲ್ಲಿ ಅಚ್ಚುಕಟ್ಟಾಗಿ ಕಟ್ಟಿದ್ದರಿಂದ ಅವರ ಲುಕ್ ಇನ್ನೂ ಶಾರ್ಪ್ ಆಗಿದೆ. ಇನ್ನು ಸಮಂತಾ ಯಾವ ಸಂದರ್ಭಕ್ಕೆ ಬೇಖಾದರೂ ಅದಕ್ಕೆ ತಕ್ಕ ಉಡುಗೆ ತೊಡುತ್ತಾರೆ ಎನ್ನುವುದಕ್ಕೆ ಅವರು ಭಾಗವಹಿಸಿದ ಹಲವಾರು ಕಾರ್ಯಕ್ರಮಗಳು ಸಾಕ್ಷಿ ಒದಗಿಸುತ್ತವೆ.
ಅಂದಹಾದೆ ಸ್ಯಾಮ್ ತಮ್ಮ ಮುಂಬರುವ ಬಹುಭಾಷಾ ಚಿತ್ರ ಯಶೋದಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಹೊಸ ಯುಗದ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಉನ್ನಿ ಮುಕುಂದನ್ ಜೊತೆಗೆ ಪರದೆ ಹಂಚಿಕೊಂಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಬಹು ನಿರೀಕ್ಷಿತ ಬಹುಭಾಷಾ ಸಿನಿಮಾವಾಗಿದ್ದು, ನಿರ್ದೇಶಕರ ಜೋಡಿ ಹರಿ ಶಂಕರ್ ಮತ್ತು ಹರೀಶ್ ಅವರು ಆಕ್ಶನ್ ಕಟ್ ಹೇಳಿದ್ದಾರೆ.