ಸಲಗ ಖ್ಯಾತಿಯ ಸಂಜನಾ ಆನಂದ್ ಬದುಕಲ್ಲಿ ದೊಡ್ಡ ತಿರುವು, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರತಿಭೆಗಳು ಕಾಲಿಡುತ್ತಿದ್ದು ಪ್ರೇಕ್ಷಕರು ಕೂಡ ಅವರನ್ನು ಅವರ ಪ್ರತಿಭೆಯ ಆಧಾರದಿಂದಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬೇಡಿಕೆಯಲ್ಲಿರುವ ಕನ್ನಡದ ಯುವ ನಟಿಯರಲ್ಲಿ ಸಂಜನ ಆನಂದ್ ರವರು ಅಗ್ರಗಣ್ಯರಾಗಿ ಕಾಣಸಿಗುತ್ತಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಿಂದ ನಟಿಸಿಕೊಂಡು ಬಂದಂತಹ ಸಂಜನ ಆನಂದ್ ರವರು ಈಗಾಗಲೇ ಹಲವಾರು ಸಿನಿಮಾಗಳ ಆಫರ್ ಅನ್ನು ಪಡೆದುಕೊಂಡಿದ್ದಾರೆ.
ಇತ್ತೀಚಿಗಷ್ಟೇ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರದ ಮೂಲಕ ತಮ್ಮ ಬೇಡಿಕೆಯನ್ನು ಕೇವಲ ಕನ್ನಡ ಭಾಷೆಗಳಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡಾ ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ನಿರೂಪ್ ಭಂಡಾರಿ ನಟಿಸುತ್ತಿರುವ ವಿಂಡೋಸೀಟ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಲಗ ಚಿತ್ರ ಸಂಜನ ಆನಂದ್ ರವರಿಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ತ್ರೂ ನೀಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.
ಇತ್ತೀಚೆಗಷ್ಟೇ ಸಂಜನಾ ಆನಂದ್ ರವರು ಸಂತೋಷದ ಸುದ್ದಿಯೊಂದು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಆ ಗುಡ್ ನ್ಯೂಸ್ ಯಾವುದು ಎಂದು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಸಂಜನಾ ಆನಂದ್ ರವರ ನಟನೆ ಹಾಗೂ ಜನಪ್ರಿಯತೆಯನ್ನು ನೋಡಿರುವ ತೆಲುಗು ಚಿತ್ರರಂಗದಿಂದಲೂ ಕೂಡ ಈಗ ಅವರಿಗೆ ಆಫರ್ ಹುಡುಕಿಕೊಂಡು ಬಂದಿದೆ. ಸಂಜನ ಆನಂದ್ ರವರು ನೇನು ಮೀಕು ಬಾಗ ಕಾವಾಲ್ಸಿನವಾಡಿನಿ ಎನ್ನುವ ತೆಲುಗು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಸಂಜನ ಆನಂದ್ ರವರು ನಾಯಕ ನಟಿಯಾಗಿ ನಟಿಸಿರುವ ಕೃಷ್ಣ ಅಜಯ್ ರಾವ್ ನಟನೆಯ ಶೋಕಿವಾಲ ಚಿತ್ರವು ಕೂಡ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ಸಂತೋಷಕರ ಸುದ್ದಿಯಾಗಿದೆ.