ಮೊದಲ ದಿನವೇ ಮೊದಲ ಶೋ ನೋಡಿದ ಡಿ ಬಾಸ್ ಹಾಗೂ ರಾಕಿಬಾಯ್ ಜೇಮ್ಸ್ ಚಿತ್ರದ ಬಗ್ಗೆ ಹೇಳಿದ್ದೇನು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರದ ಬಿಡುಗಡೆ ನಡೆದಿದ್ದು ಪ್ರೇಕ್ಷಕರು ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಪ್ರಪಂಚದಾದ್ಯಂತ ಬರೋಬ್ಬರಿ ನಾಲ್ಕು ಸಾವಿರಕ್ಕೂ ಅಧಿಕ ಸಿನಿಮಾ ಥಿಯೇಟರ್ ಗಳಲ್ಲಿ ಜೇಮ್ಸ್ ಅಬ್ಬರಿಸಿದ್ದಾನೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್ ಕೂಡ ಆಗಿದೆ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಬೆಳಗಿನ ಜಾವದಿಂದಲೇ ಪ್ರದರ್ಶನಗಳು ಆರಂಭವಾಗಿದ್ದವು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವುದರಿಂದಾಗಿ ಜೇಮ್ಸ್ ಚಿತ್ರವನ್ನು ಶಿವಣ್ಣ ದಂಪತಿಗಳು ರಾಘಣ್ಣ ದಂಪತಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಟರು ವೀಕ್ಷಿಸಿದ್ದಾರೆ. ಸೆಲೆಬ್ರಿಟಿಗಳು ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಾರೆ ಎಂದರೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯಾವ ಮಟ್ಟಿಗೆ ಪ್ರೀತಿ ಗೌರವಗಳನ್ನು ಸಂಪಾದಿಸಿ ರಬಹುದು ನೀವೇ ಅಂದಾಜು ಮಾಡಿಕೊಳ್ಳಿ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ತಮ್ಮ ಅತ್ಯುತ್ತಮ ಗೆಳೆಯ ನಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ವೀಕ್ಷಿಸಿ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ನಟನೆ ಹಾಗೂ ಆಕ್ಷನ್ ತುಂಬಾ ಚೆನ್ನಾಗಿದೆ ವಿ ಮಿಸ್ ಯು ಅಪ್ಪು ಸರ್ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ದೂರ ದೂರದ ಹಳ್ಳಿಗಳಿಂದ ಬಂದಿರುವಂತಹ ಅದೆಷ್ಟು ಅಭಿಮಾನಿಗಳಿಗೆ ಅನ್ನದಾನವನ್ನು ಕೂಡ ಮಾಡಿ ತಮ್ಮ ದೊಡ್ಡಸ್ತಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೆರೆದಿದ್ದಾರೆ ಎಂದು ಹೇಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ದರ್ಶನ್ ರವರ ಅಭಿಮಾನಿಗಳು ಕೂಡ ಗುಂಪುಗುಂಪಾಗಿ ಬಂದು ಅಪ್ಪು ರವರ ಕೊನೆಯ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಕೂಡ ತಮ್ಮ ಮಾಡದೇ ಆಗಿರುವ ರಾಧಿಕಾ ಪಂಡಿತ್ ರವರೊಂದಿಗೆ ವೀರೇಶ್ ಚಿತ್ರಮಂದಿರಕ್ಕೆ ಹೋಗಿ ಜೇಮ್ಸ್ ಚಿತ್ರವನ್ನು ವೀಕ್ಷಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ನಾವು ರಾಕಿಂಗ್ ಸ್ಟಾರ್ ಯಶ್ ರವರು ಕೂಡ ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ಸಂದರ್ಭದಲ್ಲಿ ಯಾವ ರೀತಿಯ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳ ಬಹುದಾಗಿದೆ.

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡುತ್ತಾ ರಾಕಿಂಗ್ ಸ್ಟಾರ್ ಯಶ್ ರವರು ಅಪ್ಪು ಸರ್ ಅವರನ್ನು ನೋಡಿಕೊಂಡು ನಾನು ಸಿನಿಮಾ ರಂಗಕ್ಕೆ ಬಂದವನು. ಒಂದು ಕಡೆ ಸಿನಿಮಾ ನೋಡೋದಕ್ಕೆ ಖುಷಿಯಾಗುತ್ತದೆ ಇನ್ನೊಂದು ಕಡೆ ಪವರ್ ಇಲ್ಲವಲ್ಲ ಎನ್ನುವ ದುಃಖ ಬೆಂಬಿಡದೆ ಕಾಡುತ್ತದೆ ಎಂಬುದಾಗಿ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೂಡ ಸಿನಿಮಾವನ್ನು ನೋಡಿದ ನಂತರ ಮೆಚ್ಚಿ ಪುನೀತ್ ರಾಜಕುಮಾರ್ ಅವರನ್ನು ಹೊಗಳಿದ್ದಾರೆ.

ಸಿನಿಮಾ ಕೇವಲ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಇವುಗಳಿಂದ ನಾವು ನೋಡಿ ತಿಳಿದುಕೊಳ್ಳಬಹುದಾಗಿದೆ. ಅಪ್ಪು ಅವರ ಕೊನೆಯ ಸಿನಿಮಾಗೆ ಅತ್ಯಂತ ದೊಡ್ಡ ಗೆಲುವು ಸಿಗಲಿ ಎಂದು ಹಾರೈಸೋಣ ಹಾಗೂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡೋಣ. ಚಿತ್ರದ ಕುರಿತಂತೆ ನಮ್ಮ ಸ್ನೇಹಿತರಿಗೂ ಕೂಡ ಹೇಳಿ ಅವರನ್ನು ಕೂಡ ಸಿನಿಮಾ ಥಿಯೇಟರುಗಳಲ್ಲಿ ಹೋಗಿ ಜೇಮ್ಸ್ ಚಿತ್ರವನ್ನು ನೋಡುವಂತೆ ಪ್ರೇರೇಪಿಸೋಣ.

Get real time updates directly on you device, subscribe now.