ಕೊನೆಗೂ ಬಯಲಾಯಿತು ಜೇಮ್ಸ್ ಚಿತ್ರದಲ್ಲಿ ರಾಘಣ್ಣ ಹಾಗೂ ಶಿವಣ್ಣನವರ ಪಾತ್ರ, ತಮ್ಮನ ಕೊನೆ ಸಿನಿಮಾದಲ್ಲಿ ಅಣ್ಣಂದಿರು ಏನು ಮಾಡಿದ್ದಾರೆ ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಜೇಮ್ಸ್ ಚಿತ್ರ ದಾಖಲೆಗಳ ಮಾಡುವಲ್ಲಿ ನಿರತವಾಗಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಂದು ಜೀವಂತವಾಗಿದ್ದಿದ್ದರೆ ಖಂಡಿತವಾಗಿ ಅಭಿಮಾನಿಗಳ ಹಾಗೂ ಕನ್ನಡ ಸಿನಿಮಾ ರಸಿಕರ ಸೆಲೆಬ್ರೇಶನ್ ಅನ್ನು ನೋಡಿ ಖಂಡಿತವಾಗಿ ಖುಷಿಗೊಳ್ಳುತ್ತಿದ್ದರು.

ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿರುವುದರಿಂದಾಗಿ ಜೇಮ್ಸ್ ಚಿತ್ರ ಕನ್ನಡಿಗರ ಪಾಲಿಗೆ ನೋಡಲೇಬೇಕಾದಂತಹ ಚಿತ್ರವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಎಲ್ಲಾ ಕಡೆಗಳಲ್ಲಿ ಜೇಮ್ಸ್ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೂಡ ಭರ್ಜರಿಯಾಗಿ ಕಲೆಕ್ಷನ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಬಾಲಿವುಡ್ ಟಾಲಿವುಡ್ ಸಿನಿಮಾಗಳ ರೇಂಜಿಗೆ ಪರಭಾಷೆಗಳಲ್ಲಿ ಕೂಡ ದೊಡ್ಡ ಮೊತ್ತದ ಕಲೆಕ್ಷನ್ ಅನ್ನೇ ಜೇಮ್ಸ್ ಕಬಳಿಸಿದ್ದಾರೆ.

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಜೇಮ್ಸ್ ಚಿತ್ರದಲ್ಲಿ ದೊಡ್ಡಮಟ್ಟದ ತಾರಾಬಳಗವೇ ಅಡಕವಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಟನಾಗಿರುವ ಶರತ್ ಕುಮಾರ್ ತೆಲುಗು ಚಿತ್ರರಂಗದ ಖ್ಯಾತ ನಟನಾಗಿರುವ ಶ್ರೀಕಾಂತ್ ರಂಗಾಯಣ ರಘು ಅವಿನಾಶ್ ಚಿಕ್ಕಣ್ಣ ಸಾಧುಕೋಕಿಲ ಶೈನ್ ಶೆಟ್ಟಿ ಹಲವಾರು ಖ್ಯಾತನಾಮರು ನಟಿಸಿದ್ದಾರೆ. ನಾಯಕಿಯಾಗಿ ಬಹುಭಾಷಾ ತಾರೆ ಪ್ರಿಯಾ ಆನಂದ್ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಹಲವಾರು ವರ್ಷಗಳಿಂದಲೂ ಕೂಡ ಅಭಿಮಾನಿಗಳು 3 ಸಹೋದರರು ಜೊತೆಯಾಗಿ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬುದಾಗಿ ಪ್ರಾರ್ಥಿಸಿ ಕೊಳ್ಳುತ್ತಿದ್ದರು. ಕೊನೆಗೂ ಕೂಡ ಆಸೆ ಎನ್ನುವುದು ಭಾಗಶಃವಾಗಿ ಈಡೇರಿದೆ ಎಂದು ಹೇಳಬಹುದಾಗಿದೆ. ಹೌದು ಜೇಮ್ಸ್ ಚಿತ್ರದಲ್ಲಿ ಶಿವಣ್ಣ ಅಪ್ಪು ರಾಘಣ್ಣ ಮೂವರು ಕೂಡ ನಟಿಸಿದ್ದಾರೆ ಆದರೆ ಇದರಲ್ಲಿ ಮತ್ತೊಂದು ಬೇಸರದ ವಿಚಾರವೂ ಕೂಡ ಇದೆ. ಹೌದು ಅದೇನೆಂದರೆ ಶಿವಣ್ಣ ಹಾಗೂ ರಾಘಣ್ಣ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಆದರೆ ಇವರಿಬ್ಬರ ಜೊತೆಗೆ ಅಪ್ಪು ಕಾಣಿಸಿಕೊಂಡಿಲ್ಲ ಎನ್ನುವುದೇ ಬೇಸರದ ವಿಚಾರ.

ಇನ್ನು ಶಿವಣ್ಣ ಹಾಗೂ ರಾಘಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಿಜ ಆದರೆ ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಕಥೆಯ ಕುರಿತಂತೆ ಹೇಳುವುದಾದರೆ ಮೈಸೂರಲ್ಲಿ ನಡೆದಿರುವಂತಹ ಪ್ರವಾಹದಲ್ಲಿ ಅಪ್ಪು ರವರು ಸೇರಿದಂತೆ ಐದು ಜನ ಮಕ್ಕಳು ಅನಾಥ ರಾಗಿರುತ್ತಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಇರುವಂತಹ ಗಂಜಿ ಕೇಂದ್ರ ಒಂದರಲ್ಲಿ ಅವರು ಆಶ್ರಯ ಪಡೆದಿರುತ್ತಾರೆ.

ಅಲ್ಲಿ ಶಿವಣ್ಣ ಕೂಡ ಆರ್ಮಿ ಆಫೀಸರ್ ಆಗಿ ಇರುತ್ತಾರೆ. ಅವರು ಈ ಮಕ್ಕಳಿಗೆ ಬುದ್ಧಿಯನ್ನು ಹೇಳಿ ಸಮಾಧಾನ ಮಾಡಿ ಆ ದೇವರು ಒಳ್ಳೆಯವರನ್ನು ಬೇಗ ಕರೆದುಕೊಳ್ಳುತ್ತಾನೆ ಎಂಬುದಾಗಿ ಹೇಳಿ ಅವರನ್ನು ಸಂತೈಸುತ್ತಾರೆ. ನಂತರ ಅಲ್ಲೇ ಆಶ್ರಮದ ಪ್ರಮುಖರಾಗಿರುವ ರಾಘಣ್ಣನವರಿಗೆ ಮಕ್ಕಳನ್ನು ಒಪ್ಪಿಸುತ್ತಾರೆ. ಇಬ್ಬರು ಕೂಡ ನಟಿಸಿದ್ದು ಕೆಲವೇ ಕ್ಷಣಗಳಾದರೂ ಕೂಡ ಇಬ್ಬರನ್ನು ಕೂಡ ದೊಡ್ಡ ಪರದೆ ಮೇಲೆ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಮೂಲಗಳ ಪ್ರಕಾರ ಈ ದೃಶ್ಯವನ್ನು ಅಪ್ಪು ಅವರ ಮರಣಾನಂತರ ಚಿತ್ರೀಕರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ನಿರ್ದೇಶಕ ಬಹದ್ದೂರ್ ಚೇತನ್ ರವರು ಈ ದೃಶ್ಯವನ್ನು ಹೆಣೆದಿರುವ ರೀತಿ ನಿಜಕ್ಕೂ ಕೂಡ ಪ್ರಶಂಸಾರ್ಹ. ಅದರಲ್ಲೂ ಅಪ್ಪು ಅಭಿಮಾನಿಗಳಿಗೆ ಈ ದೃಶ್ಯ ಹಾಗೂ ಪಾತ್ರಗಳು ಭಾವನಾತ್ಮಕವಾಗಿ ಮನಸ್ಸಿಗೆ ಹತ್ತಿರವಾದದ್ದಂತೂ ಸುಳ್ಳಲ್ಲ. ಜೇಮ್ಸ್ ಚಿತ್ರನೋಡಿದ ನಂತರ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.