ಜೇಮ್ಸ್ ಚಿತ್ರವನ್ನು ನೋಡಲ್ಲ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಣ್ಣೀರಿಟ್ಟಿದ್ದು ಯಾಕೆ ಗೊತ್ತಾ?? ಈಗ್ಯಾಕೆ ಮಾಡಿದ್ದಾರೆ ಗೊತ್ತೇ?

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ಈಗಾಗಲೇ ಅದ್ದೂರಿಯಾಗಿ ಬಿಡುಗಡೆಯಾಗಿ ಭರ್ಜರಿಯಾಗಿ ಬಾಕ್ಸಾಫೀಸ್ ಕಲೆಕ್ಷನ್ ಕಲೆ ಹಾಕುತ್ತಿದೆ. 4000 ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ರಾಜ್ಯದ ಮೂಲೆ ಮೂಲೆಯಲ್ಲಿ ಕೂಡ ನೋಡಿದರೆ ಹೌಸ್ಫುಲ್ ಬೋರ್ಡ್ ಗಳಲ್ಲಿ ಮಿನುಗುತ್ತಿದೆ. ಇನ್ನು ದೊಡ್ಡ ಮನೆಯವರು ರಾತ್ರಿ ಅಭಿಮಾನಿಗಳೊಂದಿಗೆ ಸಮಾಧಿಯ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಬೆಳಗ್ಗೆ ಸಿನಿಮಾವನ್ನು ಕೂಡ ಅಭಿಮಾನಿಗಳೊಂದಿಗೆ ರಾಘಣ್ಣ ಹಾಗೂ ಶಿವಣ್ಣನವರು ನೋಡಿದ್ದಾರೆ. ದೇಶ-ವಿದೇಶಗಳಲ್ಲಿ ಕೂಡ ಜೇಮ್ಸ್ ಚಿತ್ರದ ಜೇಂಕಾರ ದೊಡ್ಡಮಟ್ಟದಲ್ಲಿ ಪಸರಿಸುತ್ತಿದೆ. ಜೇಮ್ಸ್ ಚಿತ್ರದ ಇತ್ತೀಚೆಗೆ ನಡೆದಿರುವ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಮಕ್ಕಳೊಂದಿಗೆ ಹಾಜರಾಗಿದ್ದರು. ಆದರೆ ಜೇಮ್ಸ್ ಚಿತ್ರವನ್ನು ನೋಡಲು ಮಾತ್ರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೋಗಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ಕೂಡ ಅವರು ತಿಳಿಸಿದ್ದಾರೆ.

21ವರ್ಷಗಳಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೀವನದ ಭಾಗವಾಗಿ ನಾನು ಇದ್ದೇನೆ. ಅದರ ಕುರಿತಂತೆ ನಾನು ಯಾರಿಗೂ ಹೇಳಬೇಕಾಗಿಲ್ಲ. ಜೇಮ್ಸ್ ಚಿತ್ರ ಇಂದು ಬಿಡುಗಡೆ ಯಾಗಿದ್ದು ಚೆನ್ನಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ. ನಮ್ಮ ಕುಟುಂಬದವರೆಲ್ಲ ಸಿನಿಮಾವನ್ನು ನೋಡಿಕೊಂಡು ಬಂದಿದ್ದಾರೆ ನನಗೆ ಮಾತ್ರ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ ಎಂಬುದಾಗಿ ಭಾವುಕರಾಗಿ ನುಡಿದಿದ್ದಾರೆ. ಹಲವಾರು ವರ್ಷಗಳಿಂದ ಆಗಿ ಸತಿ ಪತಿಯಾಗಿ ಜೊತೆಯಾಗಿ ಇದ್ದವರು ಹೇಗೆ ತಾನೇ ಅವರನ್ನು ಪರದೆ ಮೇಲೆ ನೋಡಲು ಸಾಧ್ಯ ಎಂಬುದು ನಾವು ಕೂಡ ಅರ್ಥಮಾಡಿಕೊಳ್ಳಬೇಕಾದ ಅಂಶ.

Get real time updates directly on you device, subscribe now.