ಬಿಗ್ ನ್ಯೂಸ್: ಶಿವಣ್ಣನವರ ಜೊತೆಗೆ ಅಂಡರ್ವರ್ಲ್ಡ್ ಕಥೆ ಮಾಡಿ ಗೆದ್ದಿದ್ದ ಪ್ರೇಮ್, ಇದೀಗ ಮತ್ತೊಂದು ಕಥೆ. ಈ ಸಿನಿಮಾದ ನಾಯಕ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದ ಮಟ್ಟಿಗೆ ನಿರ್ದೇಶಕರಲ್ಲಿ ಟ್ರೈನ್ ಹುಟ್ಟುಹಾಕಿರುವುದು ಎಂದರೆ ರಿಯಲ್ ಸ್ಟಾರ್ ಉಪೇಂದ್ರ ಬಿಟ್ಟರೆ ಅದು ನಮ್ಮ ಜೋಗಿ ಪ್ರೇಮ್ ರವರೇ. ಪ್ರೇಮ್ ರವರ ಸಿನಿಮಾಗಳು ಎಂದರೆ ಅದರಲ್ಲಿ ಯಾವುದೇ ಸ್ಟಾರ್ ನಟ ಇರಲಿ ಬಿಡಲಿ ಚಿತ್ರಗಳಂತೂ ಸದ್ದು ಮಾಡಿಯೇ ಮಾಡುತ್ತದೆ. ಈ ಹಿಂದೆ ಕರುನಾಡ ಚಕ್ರವರ್ತಿ ಶಿವಣ್ಣನವರನ್ನು ಇಟ್ಟುಕೊಂಡು ಜೋಗಿ ಚಿತ್ರವನ್ನು ಇಟ್ಟುಕೊಂಡು ಎಂದು ಅಳಿಸಲಾಗದ ಅಂತಹ ದಾಖಲೆಯನ್ನು ಕನ್ನಡ ಚಿತ್ರರಂಗದಲ್ಲಿ ಮಾಡಿದ್ದರು.
ಭೂ’ಗತಲೋಕದ ಸಿನಿಮಾಗಳಿಗೆ ಭಗವದ್ಗೀತೆ ಆಗಿತ್ತು ಜೋಗಿ ಚಿತ್ರ. ಜೋಗಿ ಚಿತ್ರ ಇಂದಿಗೂ ಕೂಡ ಬಿಡುಗಡೆಯಾಗಿ ಹಲವಾರು ವರ್ಷಗಳು ಕಳೆದರೂ ಮರುಬಿಡುಗಡೆ ಆಗುತ್ತಲೇ ಇದೆ. ಪ್ರೇಮ್ ರವರು ನಿಮಗೆಲ್ಲ ಗೊತ್ತಿರುವಂತೆ ಹಲವಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ನಂತರ ದಿ ವಿಲನ್ ಚಿತ್ರದ ಮೂಲಕ ವಾಪಸ್ಸಾಗುತ್ತಾರೆ. ಗಳಿಕೆಯಲ್ಲಿ ಯಶಸ್ಸನ್ನು ಕಂಡರು ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗುತ್ತದೆ. ಇನ್ನು ತಮ್ಮ ಬಾಮೈದ ರಾಣಾ ರವರ ಜೊತೆಗೆ ಏಕ್ ಲವ್ ಯಾ ಚಿತ್ರದ ಮೂಲಕ ಈಗ ವಾಪಸಾಗಿದ್ದಾರೆ. ಆದರೆ ಈ ಚಿತ್ರವು ಕೂಡ ಈಗ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.
ಶಿವಣ್ಣನವರ ನಂತರ ಮತ್ತೊಮ್ಮೆ ಈಗ ಕನ್ನಡದ ಸ್ಟಾರ್ ನಟರೊಬ್ಬರ ಜೊತೆಗೆ ಭೂ’ಗತಲೋಕದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ನಮ್ಮ ಪ್ರೇಮ್. ಹಾಗಿದ್ದರೆ ಆ ನಟ ಯಾರು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಭೂ’ಗತಲೋಕದ ಕಥೆಯನ್ನಿಟ್ಟುಕೊಂಡು ಪ್ರೇಮ್ ರವರು ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಹೀರೋ ಇನ್ಯಾರು ಅಲ್ಲ ನಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಹೌದು ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಶಿವಣ್ಣನವರ ಜೊತೆಗೆ ಇಂತಹ ಚಿತ್ರವನ್ನು ಮಾಡಿ ಇತಿಹಾಸವನ್ನು ನಿರ್ಮಿಸಿರುವ ಪ್ರೇಮ್ ರವರು ಈಗ ಮತ್ತೊಮ್ಮೆ ಧ್ರುವಸರ್ಜಾ ರವರ ಜೊತೆಗೆ ಯಶಸ್ಸನ್ನು ಕಾಣುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಮೂಲಗಳಿಂದ ಕೇಳಿಬಂದಿರುವ ಸುದ್ದಿಗಳ ಪ್ರಕಾರ ಈ ಚಿತ್ರ ಎಪ್ಪತ್ತರ ದಶಕದಲ್ಲಿ ಇರುವಂತಹ ಕಥೆಯನ್ನಾಧರಿಸಿದೆ ಎಂಬುದಾಗಿ ತಿಳಿದುಬಂದಿದೆ.