ಎರಡು ಅಥವಾ ಎರಡಕ್ಕಿಂತ ಹೆಚ್ಚು ಮದುವೆಯಾಗಿರುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರು ಯಾರು ಗೊತ್ತಾ??

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗದ ಸೆಲೆಬ್ರಿಟಿಗಳು ಏನೇ ಮಾಡಿದರು ಕೂಡ ಅದು ಸುದ್ದಿಯಾಗುತ್ತದೆ. ಇಂದು ನಾವು ಕೂಡ ಮಾತನಾಡಲು ಹೊರಟಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಬಹುದಾದಂತ ವಿಚಾರದಂತೆ. ಅದೇನೆಂದರೆ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಮದುವೆಯಾಗಿರುವ ನಟರ ಕುರಿತಂತೆ ಹೇಳಲು ಹೊರಟಿರುವುದು. ಹಾಗಿದ್ದರೆ ಯಾವೆಲ್ಲ ಸ್ಟಾರ್ ನಟರು ಈ ಸಾಲಿನಲ್ಲಿ ಸೇರಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ನಂದಿನಿ ಎನ್ನುವವರನ್ನು ಮದುವೆಯಾಗುತ್ತಾರೆ. 2008 ರಲ್ಲಿ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದು 2009 ರಲ್ಲಿ ನಟಿ ರೇಣು ದೇಸಾಯಿ ರವರನ್ನು ವಿವಾಹವಾಗುತ್ತಾರೆ. ಇವರಿಬ್ಬರಿಗೂ ಮೂರು ಮಕ್ಕಳಿದ್ದಾರೆ. ನಂತರ ಇವರಿಬ್ಬರ ನಡುವೆ ಕೂಡ ವೈಮನಸ್ಯ ಮೂಡಿಬಂದು ವಿವಾಹ ವಿಚ್ಛೇದನವನ್ನು ಬರೆದು 2013 ರಲ್ಲಿ ರಷ್ಯಾದ ಮಹಿಳೆಯನ್ನು ಮದುವೆಯಾಗಿದ್ದಾರೆ. ಇವರಿಗೆ ಎರಡು ಮಕ್ಕಳು ಇದ್ದಾರೆ.

ಪ್ರಕಾಶ್ ರೈ; ಬಹುಭಾಷಾ ನಟ ಆಗಿರುವ ಪ್ರಕಾಶ್ರವರು 1994 ರಲ್ಲಿ ನಟಿ ಲಲಿತಾ ಕುಮಾರಿ ರವರನ್ನು ಮದುವೆಯಾಗುತ್ತಾರೆ. ಇವರಿಗೆ ಮೂರು ಮಕ್ಕಳಿದ್ದು ಇವರು ಕೂಡ 2009 ರಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. 2010 ರಲ್ಲಿ ಪ್ರಕಾಶ್ ರೈ ರವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರುವ ಪೋನಿ ವರ್ಮಾರನ್ನು ಮದುವೆಯಾಗುತ್ತಾರೆ. ಇನ್ನು ಇವರಿಗೆ ವೇದಾಂತ್ ಎನ್ನುವ ಮಗನಿದ್ದಾನೆ.

ಶರತ್ ಕುಮಾರ್; ತಮಿಳು ಚಿತ್ರರಂಗದ ಖ್ಯಾತ ನಟನಾಗಿರುವ ಶರತ್ ಕುಮಾರ್ ಅವರನ್ನು ಮದುವೆಯಾಗಿ ವರಲಕ್ಷ್ಮಿ ಹಾಗೂ ಪೂಜ ಎನ್ನುವ ಇಬ್ಬರು ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ. 2000ರಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ನಟಿ ರಾಧಿಕಾ ರವರನ್ನು ವಿವಾಹವಾಗುತ್ತಾರೆ. ಇವರಿಗೆ ಒಬ್ಬ ಮಗ ನಿದ್ದಾನೆ.

ಪ್ರಭುದೇವ; ನಟ ನಿರ್ದೇಶಕ ಪ್ರಭುದೇವ ರವರು ಮೊದಲಿಗೆ ರಾಮಲತಾ ರವರನ್ನು ಮದುವೆಯಾಗುತ್ತಾರೆ. ಇವರಿಗೆ ಮೂರು ಮಕ್ಕಳಿದ್ದಾರೆ. ಇವರಿಬ್ಬರ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಪ್ರಭುದೇವ ರವರು ನಟಿ ನಯನತಾರ ರವರ ಜೊತೆಗೆ ಲಿವ್ ಇನ್ ಸಂಬಂಧದಲ್ಲಿದ್ದರು. ಇವರಿಬ್ಬರು ಮದುವೆಯಾಗುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಇವರು 2012 ನೇ ತಮ್ಮ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುತ್ತಾರೆ.

ದುನಿಯಾ ವಿಜಯ್; ದುನಿಯಾ ವಿಜಯ್ ಅವರು ಮೊದಲಿಗೆ ನಾಗರತ್ನ ರವರನ್ನು ಮದುವೆಯಾಗಿ ಮೂರು ಮಕ್ಕಳನ್ನು ಪಡೆಯುತ್ತಾರೆ. ನಂತರ ಇವರಿಬ್ಬರ ವಿವಾಹ ವಿಚ್ಛೇದನವನ್ನು ಪಡೆದುಕೊಂಡು 2016 ರಲ್ಲಿ ನಟಿ ಕೀರ್ತಿ ರವರನ್ನು ದುನಿಯಾ ವಿಜಯ್ ಎರಡನೇ ಮದುವೆಯಾಗುತ್ತಾರೆ. ನಾಗರ್ಜುನ್; ಮೊದಲಿಗೆ ನಾಗಾರ್ಜುನರ ವರಲಕ್ಷ್ಮಿ ದಗ್ಗುಬಾಟಿ ರವರನ್ನು ಮದುವೆಯಾಗುತ್ತಾನೆ ಇವರಿಗೆ ನಾಗಚೈತನ್ಯ ಎನ್ನುವ ಮಗನಿದ್ದಾನೆ. ನಂತರ ಅವರಿಂದ ವಿಚ್ಛೇದನವನ್ನು ಪಡೆದುಕೊಂಡು ನಾಗಾರ್ಜುನ ಅಮಲ ರವರನ್ನು ಮದುವೆಯಾಗುತ್ತಾರೆ. ಇವರಿಗೆ ಅಖಿಲ್ ಎನ್ನುವ ಮಗನಿದ್ದಾನೆ.

ರಘು ಮುಖರ್ಜಿ; ಇವರ ಮೊದಲಿಗೆ ಭಾವನಯನ್ನುವವರನ್ನು ಮದುವೆಯಾಗುತ್ತಾರೆ. 2014 ರಲ್ಲಿ ಇವರಿಬ್ಬರ ನಡುವೆ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ನಂತರ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಅನುಪ್ರಭಾಕರ್ ಅವರನ್ನು ಎರಡನೇ ಮದುವೆ ಆಗುತ್ತಾರೆ ಇವರಿಗೆ ಒಬ್ಬ ಹೆಣ್ಣುಮಗಳು ಕೂಡ ಜನಿಸಿದ್ದಾಳೆ.

ಕಮಲ್ ಹಾಸನ್; ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ವಾಣಿ ರವರನ್ನು ಕಮಲಹಾಸನ್ ರವರು ಮೊದಲಿಗೆ ಮದುವೆಯಾಗುತ್ತಾರೆ. ವಾಣಿ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಕಮಲಹಾಸನ್ ಅವರು ನಂತರ ನಟಿ ರಾಧಿಕಾ ರವರನ್ನು ಮದುವೆಯಾಗುತ್ತಾರೆ ಅವರಿಂದ ಅಕ್ಷರ ಹಾಸನ್ ಹಾಗೂ ಶೃತಿಹಾಸನ್ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ. ಇವರಿಂದಲೇ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಕಮಲಹಾಸನ್ ರವರು 2005 ರಲ್ಲಿ ಗೌತಮಿ ಅವರನ್ನು ಮದುವೆಯಾಗುತ್ತಾರೆ.

ಟೈಗರ್ ಪ್ರಭಾಕರ್; ಮೇರಿ ಅಲ್ಫೋನ್ಸೋ ಎನ್ನುವವರನ್ನು ಮೊದಲಿಗೆ ಮದುವೆಯಾಗಿರುವ ಇವರು ವಿನೋದ್ ಪ್ರಭಾಕರ್ ಸೇರಿದಂತೆ ಮೂರು ಮಕ್ಕಳನ್ನು ಪಡೆಯುತ್ತಾರೆ. ಇವರ ನಂತರ ನಟಿ ಜಯಮಾಲಾ ರವರನ್ನು ಮದುವೆಯಾಗುತ್ತಾರೆ. ಇವರಿಂದ ಸೌಂದರ್ಯ ಎನ್ನುವ ಮಗಳನ್ನು ಕೂಡ ಪಡೆದಿದ್ದಾರೆ. ಕೊನೆಗೆ ಮಲಯಾಳಂ ನಟಿ ಅಂಜೂ ಅವರನ್ನು ಮದುವೆಯಾಗುತ್ತಾರೆ. ಇವರಿಗೆ ಅರ್ಜುನ್ ಎನ್ನುವ ಮಗನಿದ್ದಾನೆ. ಇವರೇ ಎರಡು ಅಥವಾ ಎರಡಕ್ಕಿಂತ ಅಧಿಕ ಮದುವೆಯಾಗಿರುವ ದಕ್ಷಿಣ ಭಾರತದ ಖ್ಯಾತ ನಟರು.

Get real time updates directly on you device, subscribe now.