ತೆಲುಗಿನ ಟಾಪ್ ನಟರಿಗೂ ಖ್ಯಾರೇ ಎನ್ನದ ಬಾಲಿವುಡ್ ಬೆಡಗಿ ಜಾಹ್ನವಿ, ವಿಜಯ್ ಹಾಗೂ ಎನ್‌ಟಿಆರ್ ಗೆ ಶಾಕ್ ನೀಡಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಯುವನಟಿ ಎಂದರೆ ಅದು ಶ್ರೀದೇವಿ ಹಾಗೂ ಬೋನಿಕಪೂರ್ ಅವರ ಮಗಳಾಗಿರುವ ಜಾಹ್ನವಿ ಕಪೂರ್ ಅವರು. ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿ ಜಾಹ್ನವಿ ಕಪೂರ್ ಅವರು ಈಗಾಗಲೇ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜಾಹ್ನವಿ ಕಪೂರ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಕೇವಲ ಸಿನೆಮಾಗಳಿಗಾಗಿ ಮಾತ್ರವಲ್ಲದೆ ಆಗಾಗ ಹಲವಾರು ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹ್ನವಿ ಕಪೂರ್ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಇತ್ತೀಚಿಗೆ ಜಾನವಿ ಕಪೂರ್ ಅವರ ಕುರಿತಂತೆ ಕೆಲವು ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಗಾಳಿಸುದ್ದಿಯ ಹಾಗೆ ಓಡಾಡುತ್ತಿದ್ದವು. ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸಿರುವ ನಟಿ ಜಾಹ್ನವಿ ಕಪೂರ್ ಅವರು ತೆಲುಗು ಚಿತ್ರರಂಗಕ್ಕೂ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಅಭಿಮಾನಿಗಳು ನಂಬಿಕೊಂಡಿದ್ದ ಆ ಸುದ್ದಿಗೂ ಕೂಡ ದೊಡ್ಡಮಟ್ಟದ ಶಾ’ಕ್ ಸಿಕ್ಕಿದೆ. ಇನ್ನು ಈ ಸುದ್ದಿ ಕೂಡ ಗಾಳಿಸುದ್ದಿ ಅಲ್ಲ ಬದಲಾಗಿ ಅವರ ತಂದೆಯವರು ಅಧಿಕೃತವಾಗಿ ಹೇಳಿಕೊಂಡಿರುವುದು.
ಹೌದು ವದಂತಿಗಳ ಪ್ರಕಾರ ಜಾಹ್ನವಿ ಕಪೂರ್ ಅವರು ತೆಲುಗಿನಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ವಿಜಯ್ ದೇವರಕೊಂಡ ರವರ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬುದಾಗಿ ಕೇಳಿಬಂದಿತ್ತು. ಆದರೆ ಈ ಕುರಿತಂತೆ ಅವರ ತಂದೆ ಬೋನಿಕಪೂರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುಳ್ಳು ಸುದ್ದಿಗಳ ವದಂತಿ ಹರಿದಾಡುತ್ತಿರುತ್ತದೆ ಇದು ಕೂಡ ಅದೇ ಪಟ್ಟಿಗೆ ಸೇರುತ್ತದೆ ಎಂಬುದಾಗಿ ಎಲ್ಲ ಗಾಳಿ ಮಾತುಗಳನ್ನು ನಿರಾಕರಿಸಿದ್ದಾರೆ. ವಿಜಯ್ ದೇವರಕೊಂಡ ರವರ ಲೈಗರ್ ಚಿತ್ರಕ್ಕೆ ಕೂಡ ಮೊದಲಿಗೆ ಜಾಹ್ನವಿ ಕಪೂರ್ ಅವರನ್ನು ರಿಕ್ವೆಸ್ಟ್ ಮಾಡಲಾಗಿತ್ತು. ನಂತರ ಹಲವಾರು ವಿಚಾರಗಳು ಸರಿಹೊಂದದ ಕಾರಣದಿಂದಾಗಿ ಅನನ್ಯ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಕೂಡ ತಾಯಿ ಶ್ರೀದೇವಿ ಅವರಂತೆ ಮಗಳು ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಬೇಕು ಎನ್ನುವ ಆಸೆಯಿಂದ ಕಾಯುತ್ತಿದ್ದಾರೆ.