ಮೊದಲಬಾರಿಗೆ ರಶ್ಮಿಕ ರವರ ಜೊತೆಗೆ ಕೀರ್ತಿ ಹಾಗೂ ಸಾಯಿ ಪಲ್ಲವಿ, ಯಾಕೆ ಈ ವಿಶೇಷತೆ ಗೊತ್ತೇ?? ವಿಷಯ ಕೇಳಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು.

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ರಶ್ಮಿಕಾ ಮಂದಣ್ಣ ನವರು ನಿಂತರೂ ಸುದ್ದಿ ಕುಂತರೂ ಸುದ್ದಿ. ನಿಜವಾಗಿ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಟೀಕೆಗೆ ಒಳಗಾಗಿರುವ ಹಾಗೂ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಸೆಲೆಬ್ರಿಟಿ ಕೂಡ ಅವರೇ ಆಗಿದ್ದಾರೆ.

ಅದರಲ್ಲೂ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾದಂತಹ ಪಂಚಭಾಷೆ ಚಿತ್ರವಾಗಿರುವ ಪುಷ್ಪ ದೊಡ್ಡಮಟ್ಟದ ಹೆಸರನ್ನು ರಶ್ಮಿಕ ಮಂದಣ್ಣ ಅವರಿಗೆ ತಂದುಕೊಟ್ಟಿತ್ತು. ಈಗಾಗಲೇ ರಶ್ಮಿಕ ಮಂದಣ್ಣ ನವರು ದಕ್ಷಿಣ ಭಾರತದ ಚಿತ್ರರಂಗ ಸೇರಿದಂತೆ ಬಾಲಿವುಡ್ನಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಈಗಾಗಲೇ ಭಾಗವಾಗಿದ್ದಾರೆ. ಅವರು ಈಗ ಚಿತ್ರರಂಗದಲ್ಲಿ ಸೃಷ್ಟಿಸಿರುವ ಹವಾ ಹಾಗೂ ಕ್ರೇಜ್ ನೋಡಿದರೆ ಖಂಡಿತವಾಗಿ ಕನಿಷ್ಠ ಪಕ್ಷ ಐದು ವರ್ಷಗಳವರೆಗೆ ಆದರೂ ಕೂಡ ಇಡೀ ಭಾರತೀಯ ಚಿತ್ರರಂಗವನ್ನು ಅವರು ನಾಯಕ ನಟಿಯಾಗಿ ಅಳುತ್ತಾರೆ ಎಂಬುದು ಖಚಿತವಾಗಿದೆ.

ಇನ್ನು ಅವರ ಮುಂಬರುವ ಚಿತ್ರಗಳ ಕುರಿತಂತೆ ಕೂಡ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಅತಿಶೀಘ್ರದಲ್ಲಿ ಅವರ ಅಡವಾಳ್ಳು ಮೀಕು ಜೋಹಾರ್ಲು ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದಲ್ಲಿ ನಾಯಕ ನಟನಾಗಿ ಶರ್ವಾನಂದ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರದ ಪ್ರಿ ರಿಲೀಸ್ ಇವೆಂಟ್ ಫೆಬ್ರವರಿ 27 ರಂದು ಶಿಲ್ಪಕಲಾ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೊತ್ತಮೊದಲ ಬಾರಿಗೆ ರಶ್ಮಿಕ ಮಂದಣ್ಣ ನವರ ಜೊತೆಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಿಬ್ಬರು ವಿಶೇಷ ಅತಿಥಿಗಳಾಗಿ ಬರಲಿದ್ದಾರೆ. ಹೌದು ಅಡವಾಳ್ಳು ಮೀಕು ಜೋಹಾರ್ಲು ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಾಗಿರುವ ಕೀರ್ತಿ ಸುರೇಶ್ ಹಾಗೂ ಸಾಯಿ ಪಲ್ಲವಿಯವರು ರಶ್ಮಿಕಾ ಮಂದಣ್ಣ ನವರ ಜೊತೆಗೆ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಮೂವರನ್ನು ಒಂದೇ ವೇದಿಕೆಯಲ್ಲಿ ನೋಡಬೇಕೆಂಬ ಅಭಿಮಾನಿಗಳ ಇಚ್ಚೆ ಕೂಡ ಈ ಮೂಲಕ ಪೂರ್ಣಗೊಳ್ಳಲಿದೆ.

Get real time updates directly on you device, subscribe now.