ನಮ್ಮ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. ಹೇಗೆ ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಬ್ಯಾಂಕ್ ನಲ್ಲಿ ಸದ್ಯ ಆರ್ಥಿಕ ಸಲಹೆಗಾರ ಹುದ್ದೆ ಖಾಲಿ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಬೆಂಗಳೂರು ಜಿಲ್ಲೆಯ ದೇವನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರವರ್ತಿತ ಆರ್ಥಿಕ ಸಲಹಾ ಕೇಂದ್ರದಲ್ಲಿಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯು ಗುತ್ತಿಗೆ ಆಧಾರಿತವಾಗಿದ್ದು, ತಾತ್ಕಾಲಿಕ ಹುದ್ದೆ ಆಗಿದೆ. ಉದ್ಯೋಗದ ಅವಧಿ ಕನಿಷ್ಠ 3 ವರ್ಷ. ಕಾರ್ಯದಕ್ಷತೆ ಮತ್ತು ಬ್ಯಾಂಕ್‌ ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗ ಅವಧಿ ವಿಸ್ತರಣೆ ಮಾಡುವ ಸಾಧ್ಯತೆಗಳಿರುತ್ತದೆ.

ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಬ್ಯಾಂಕಿಂಗ್ ಬಗ್ಗೆ ತಿಳುವಳಿಕೆ, ಹಣಕಾಸಿನ ಸೇವೆಗಳ ಅಥವಾ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಜ್ಞಾನವಿರಬೇಕು. ಈ ಹುದ್ದೆಗೆ 62 ವರ್ಷದೊಳಗಿನ ಅನುಭವಿ ಪದವೀಧರರು ಹಾಗೂ ನಿವೃತ್ತ ಬ್ಯಾಂಕ್‌ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ರೂ.17,100 ಹಾಗೂ ಪ್ರಯಾಣ ಭತ್ಯೆ ರೂ.3000 ಕೊಡಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮಾರ್ಚ್ 03. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆಧಾರ್ ಕಾರ್ಡ್‌, ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು, ಇತ್ತೀಚಿನ ಭಾವಚಿತ್ರ ಹಾಗೂ ಬೇಕಾದ ಇತರೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.karnatakagraminbank.com ಗೆ ಭೇಟಿ ನೀಡಿ.

Get real time updates directly on you device, subscribe now.