ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಮಾತ್ರ ವಿಯೋಗ; ಆದರೆ ಅಂದು ಅಮ್ಮನ ಸಾವಿನ ಕುರಿತು ರವಿ ರವರು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹೌದು ಈಶ್ವರಿ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಕೆಲಸ ಕೊಟ್ಟು ಅವರ ಮನೆಯ ಅನ್ನದಾತ ರಾಗಿರುವ ವೀರಸ್ವಾಮಿ ಅವರ ಪತ್ನಿ ಅಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಮ್ಮ ಪಟ್ಟಾಲಮ್ಮ ನಿನ್ನೆ ಬೆಳಗ್ಗೆ 6:30ರ ಹೊತ್ತಿಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಇನ್ನೂ ಕೆಲವು ತಿಂಗಳುಗಳ ಹಿಂದೆ ತಮ್ಮ ತಾಯಿಯವರ ಕುರಿತಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿರುವ ಮಾತುಗಳನ್ನು ಈಗ ನಾವು ನೆನಪಿಸಿಕೊಳ್ಳಬಹುದಾಗಿದೆ.
ತಮ್ಮ ತಂದೆ-ತಾಯಿಯನ್ನು ರವಿಚಂದ್ರನ್ ರವರು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆ ಎನ್ನುವುದು ಇಡೀ ಕರ್ನಾಟಕದ ಜನತೆಗೆ ಗೊತ್ತಿದೆ. ಅವರು ಹೊರಗಡೆ ಹೋಗುವಾಗ ಎಂದಿಗೂ ಕೂಡ ತಮ್ಮ ತಾಯಿಯವರ ಆಶೀರ್ವಾದ ಹಾಗೂ ತಂದೆಯವರ ಫೋಟೋವನ್ನು ನೋಡಿದ ಹೊರಗೆ ಹೋಗುತ್ತಿರಲಿಲ್ಲ. ಪ್ರತಿಯೊಂದು ಸಂದರ್ಶನದಲ್ಲಿ ಕೂಡ ನನ್ನ ತಂದೆ ಇಲ್ಲದಿದ್ದರೆ ನಾನು ಎಂದು ಹೀಗೆ ಆಗುತ್ತಿರಲಿಲ್ಲ ಕ್ರೇಜಿಸ್ಟಾರ್ ಆಗುತ್ತಿರಲಿಲ್ಲ ನಿಮ್ಮ ಪ್ರೀತಿಗೆ ಪಾತ್ರನಾಗುತ್ತಿರಲಿಲ್ಲ ಎಂಬುದಾಗಿ ಪದೇಪದೇ ಹೇಳುತ್ತಲೇ ಇರುತ್ತಾರೆ. ತಾಯಿ ಪಟ್ಟಾಲಮ್ಮ ರವರನ್ನು ಕೂಡ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲೇ ಮಗುವಿನಂತೆ ತಾವೇ ತಮ್ಮ ಕೈಯ್ಯಾರೆ ಸಾಕುತ್ತಿದ್ದರು.
ನನ್ನ ತಾಯಿ ಮಗುವಿನಂತೆ ಯಾವುದೇ ಕಲ್ಮಶ ಇಲ್ಲದವರು. ವೈದ್ಯರು ನನ್ನ ತಾಯಿ ಹೆಚ್ಚು ದಿನ ಉಳಿಯುವುದಿಲ್ಲ ಅವರ ಬ್ರೈನ್ ಡೆಡ್ ಆಗುತ್ತಾ ಬರುತ್ತಿದೆ ಎಂಬುದಾಗಿ ಹೇಳಿದ್ದರು. ಇದಕ್ಕಾಗಿ ನನ್ನ ಪತ್ನಿ ತಾಯಿಯನ್ನು ಮನೆಯಲ್ಲಿನ ಮುಂದುವರಿಸಿಕೊಂಡು ಮಗುವಿನಂತಹ ಸಾಕೋಣ ಎಂಬುದಾಗಿ ಹೇಳಿ ಸಾಕುತ್ತಿದ್ದರು. ನನ್ನ ಮಕ್ಕಳು ಕೂಡ ನಮ್ಮ ತಾಯಿಯೊಂದಿಗೆ ಪದೇಪದೇ ಒಳ್ಳೆಯ ಸಮಯಗಳನ್ನು ಕಳೆಯಲು ಪ್ರಯತ್ನಿಸುತ್ತಿದ್ದರು. ಇದಕ್ಕಾಗಿಯೇ ನಮ್ಮ ತಾಯಿ ನಮ್ಮೊಂದಿಗೆ ಸಂತೋಷವಾಗಿ ಇನ್ನೂ ಇದ್ದಾರೆ ಎಂಬುದಾಗಿ ಕೆಲವು ತಿಂಗಳುಗಳ ಹಿಂದೆ ಹೇಳಿದ್ದರು.
ದುರದೃಷ್ಟವೆಂಬಂತೆ ಕೆಲವು ಸಮಯಗಳಿಂದ ಪಟ್ಟಾಲಮ್ಮ ನವರ ಆರೋಗ್ಯದಲ್ಲಿ ಏರುಪೇರು ತೀವ್ರವಾಗಿ ಕಂಡು ಬರುತ್ತಿತ್ತು. ಹೀಗಾಗಿ ಆಸ್ಪತ್ರೆಗೆ ಹೋಗಿ ಬರುವುದನ್ನು ಮಾಡಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದ ಏರುಪೇರು ಮಟ್ಟ ತೀವ್ರವಾಗಿದ್ದ ಕಾರಣದಿಂದಾಗಿ ಹತ್ತಿರದಲ್ಲೇ ಇರುವ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶತಾಯಗತಾಯ ಪ್ರಯತ್ನದ ನಂತರವೂ ಕೂಡ ನಿನ್ನೆ ಬೆಳಗ್ಗೆ 6.30 ರ ನಸುಕಿನ ಸಮಯದಲ್ಲಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಮಾತ್ರ ವಿಯೋಗ ಸಂಭವಿಸಿದೆ. ಈಗಾಗಲೇ ರವಿಚಂದ್ರನ್ ರವರ ಮನೆಯಲ್ಲಿ ಅಂತಿಮದರ್ಶನ ನಡೆಯುತ್ತಿದ್ದು ಸಂಜೆ ವೇಳೆಗೆ ಕೊನೆಯ ಸಂಸ್ಕಾರಗಳು ಕೂಡ ವಿಧಿವತ್ತಾಗಿ ಮುಗಿಯಲಿದೆ.
ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಹೊಂದಿದ ದಿನದಂದೇ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ತಾಯಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಪ್ರಾಣವನ್ನು ಉಳಿಸಲು ಸಾಧ್ಯವಾಗಿದ್ದರೆ ನನ್ನ ತಾಯಿಯ ಬಳಿ ನಿನ್ನ ಪ್ರಾಣವನ್ನು ಪುನೀತ್ಗೆ ನೀಡು ಆತ ಇನ್ನೂ ಬದುಕಿ ಬಾಳಬೇಕಾದ ಹುಡುಗ ಎಂಬುದಾಗಿ ಕೇಳುತ್ತಿದೆ ಎಂಬುದನ್ನು ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು ಆಗಿದೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕೆಲವೇ ಸಮಯಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ತಮ್ಮ ತಾಯಿಯನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಮತ್ತಷ್ಟು ದುಃಖವನ್ನು ತಂದುಕೊಟ್ಟಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ರವರ ತಾಯಿಯಾಗಿರುವ ಪಟ್ಟಾಲಮ್ಮ ನವರ ಅಂತಿಮದರ್ಶನಕ್ಕೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಈಗಾಗಲೇ ಆಗಮಿಸಿದ್ದು ರವಿಚಂದ್ರನ್ ರವರಿಗೆ ಸಾಂತ್ವನವನ್ನು ಹೇಳಿದ್ದಾರೆ ಹಾಗೂ ಪಟಾಲಮ್ಮ ನವರ ಮರಣಕೆ ಕಂಬನಿಯನ್ನು ಕೂಡ ಮಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಸಂಬಂಧಿತ ವ್ಯಕ್ತಿಗಳು ಸಾಲುಸಾಲಾಗಿ ಇಹಲೋಕವನ್ನು ತ್ಯಜಿಸುತ್ತಿರುವುದು ನಿಜಕ್ಕೂ ಕೂಡ ಈ ಜಗತ್ತು ಯಾರೇ ಆಗಿರಲಿ ಅವರ ಅವಧಿ ಮುಗಿದ ನಂತರ ಕರೆದುಕೊಂಡು ಹೋಗಿ ಬಿಡುತ್ತದೆ ಎಲ್ಲಾ ನಶ್ವರ ಎಂಬ ಭಾವನೆಯನ್ನು ಮತ್ತೊಮ್ಮೆ ಮೂಡಿಸುವಂತೆ ಮಾಡಿದೆ. ಕಾಮೆಂಟ್ ಬಾಕ್ಸ್ನಲ್ಲಿ ಪಟ್ಟಾಲಮ್ಮ ನವರ ಆತ್ಮಕ್ಕೆ ಶಾಂತಿ ಕೋರೋಣ.