ಅತಿ ಕಡಿಮೆ ಬೆಲೆಗೆ, ಮಾಧ್ಯಮ ವರ್ಗದವರಿಗೂ ಕೈಗೆ ಎಟುಗುವಂತಹ ಬೆಲೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಬಿಡುಗಡೆ, ಎಷ್ಟು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸ್ಯಾಮ್ ಸಂಗ್ ವಿವಿಧ ಶ್ರೇಣಿಯ ಸ್ಮಾರ್ಟ್ ಪೋನ್ ಗಳನ್ನು ಬಿಡುಗಡೆಗೊಳಿಸಿದೆ. ಆದರೆ ಸ್ಯಾಮ್ ಸಂಗ್ ನ ಉತ್ತಮ ಫೋನ್ ಗಳು ಹೆಚ್ಚು ದುಬಾರಿಯಾಗಿರುತ್ತವೆ. ಅದರಲ್ಲೂ ಹೆಚ್ಚು ಹೆಚ್ಚು ಫೀಚರ್ಸ್ ಬೇಕು ಅಂದ್ರೆ ಇನ್ನೂ ಹೆಚ್ಚುನ ಹಣವನ್ನು ವ್ಯಯಿಸಬೇಕು. ಹಾಗಾಗಿ ಸ್ಯಾಮ್ ಸಂಗ್ ಎಲ್ಲರ ಕೈಗೆಟುಕುವ ಫೋನ್ ಆಗಿರಲಿಲ್ಲ. ಆದರೆ ಈ ಬಾರಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ03 ಉತ್ತಮ ಬೆಲೆಯಲ್ಲಿ ಮಾರುಕಟ್ಟೆಗೆ ಲಕ್ಕೆ ಇಟ್ಟಿದೆ.

ಹೌದು ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ 03 ಅತ್ಯಂತ ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಿದೆ. ಬನ್ನಿ ಈ ಫೋನ್ ನ ವಶಿಷ್ಟ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈ ಸ್ಮಾರ್ಟ್ ಫೋನ್ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್ ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಯುನಿಸೊಕ್ ಟಿ606 ಎಸ್ಒಸಿ ಪ್ರೊಸೆಸರ್‌ ನ್ನು ಹೊಂದಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 11 ನಲ್ಲಿ ಒಂದು ಯುಐ ಕೋರ್ 3.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ನ ಕ್ಯಾಮರಾ ಬಗ್ಗೆ ನೋಡುವುದಾದರೆ, ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ 4ಜಿಬಿ ರಾಮ್ ಮತ್ತು 64ಜಿಬಿ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಈ ಫೋನ್ ಒಳಗೊಂಡಿದೆ. ಹಾಗೆಯೇ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1ಟಿಬಿ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ವಿಶೇಷ. ಇದೀಗ ಗ್ರಾಹಕರಿಗೆ ಹೆಚ್ಚಾಗಿ ಕ್ಯಾಮರಾ ಬಗ್ಗೆ ಒಲವಿರುತ್ತೆ. ಹಾಗಾಗಿ ಇದರಲ್ಲಿ ಉತ್ತಮ ರೆಸಲ್ಯೂಶನ್ ಹೊಂದಿರುವ ಫೋಟೊ ತೆಗೆಯುವ ಆಯ್ಕೆ ನೀಡಲಾಗಿದೆ. ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್ ಹೊಂದಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಈ ಫೋನ್ ಸ್ಮಾರ್ಟ್ ಸೆಲ್ಫಿ ಆಂಗಲ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಅಂದಹಾಗೆ ಎ 03 ಸ್ಮಾರ್ಟ್‌ಫೋನ್‌ 5,000ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ದಿನವಿಡಿ ಬಳಕೆ ಮಾಡಬಹುದು. ದೇಶದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ 3ಜಿಬಿ ರಾಮ್ ಮತ್ತು 32ಜಿಬಿ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು ಇದರ ಬೆಲೆ ಕೇವಲ 10,499ರೂ. ಗಳು. 4ಜಿಬಿ + 64ಜಿಬಿ ಸ್ಟೋರೆಜ್ ಫೋನ್ ನ ಆಯ್ಕೆಯ ಬೆಲೆ 11,999. ರೂ ಆಗಿದೆ. ಹಾತು ಕೆಂಪು ಬಣ್ಣಗಳಲ್ಲಿ ಈ ಫೋನ್ ಆಯ್ಕೆಗಳು ಲಭ್ಯ. ಇನ್ನು ಈ ಫೋನ್ ಮಾರುಕಟ್ಟೆಗೆ ಬರುವ ದಿನಾಂಕ ಸ್ಪಷ್ಟವಾಗಿಲ್ಲದಿದ್ದರೂ, ಮುಂದಿನ ವಾರಗಳಲ್ಲಿ ರಿಟೇಲ್ ಶಾಂಪ್ ಮತ್ತು ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಖರೀದಿ ಮಾಡಬಹುದು.

Get real time updates directly on you device, subscribe now.