ಕನ್ನಡದ ಟಾಪ್ ನಟಿ, ಬಾಲಿವುಡ್ ಬೆಡಗಿ ರಶ್ಮಿಕಾ ಯಾವಾಗಲು ಖುಶಿಯಾಗಿರುತ್ತಾರೆ, ಯಾಕೆ ಗೊತ್ತೇ?? ಅವರ ಖುಷಿಯ ಸೀಕ್ರೆಟ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕೊಡಗಿನ ಕುವರಿ ಆಗಿರುವ ರಶ್ಮಿಕಾ ಮಂದಣ್ಣನ ಅವರು ಹಲವಾರು ವಿಚಾರಗಳಿಗಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಒಳ್ಳೆಯ ವಿಚಾರಕ್ಕಾಗಿ ಸುದ್ದಿಯಾದರೆ ಇನ್ನು ಕೆಲವೊಮ್ಮೆ ಟೀಕಾಪ್ರಹಾರದ ಆಹಾರವಾಗಿ ಸುದ್ದಿಯಾಗುತ್ತಾರೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಜನರಿಂದ ಎಷ್ಟು ಮಟ್ಟದ ಪ್ರೀತಿಯನ್ನು ಪಡೆಯುತ್ತಾರೋ ಅಷ್ಟೇ ಮಟ್ಟದ ಟೀಕೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ರಶ್ಮಿಕ ಮಂದಣ್ಣ. ಆದರೂ ಕೂಡ ಎರಡನ್ನು ಸಮನಾಗಿ ಬ್ಯಾಲೆನ್ಸ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ.
ಈಗಾಗಲೇ ಪುಷ್ಪ ಚಿತ್ರದ ಯಶಸ್ಸಿನಿಂದಾಗಿ ರಶ್ಮಿಕ ಮಂದಣ್ಣ ನವರ ಬೇಡಿಕೆಯನ್ನು ವುದು ಭಾರತೀಯ ಚಿತ್ರರಂಗದಲ್ಲಿ ಪೆಟ್ರೋಲ್ ದರದಂತೆ ಏರಿಕೆಯಾಗಿದೆ. ನೆಗೆಟಿವಿಟಿ ಹಾಗೂ ಪಾಸಿಟಿವಿಟಿ ಎರಡನ್ನು ಕೂಡ ಸಮನಾಗಿ ಸ್ವೀಕಾರ ಮಾಡುವುದರಿಂದಾಗಿ ಅವರನ್ನು ನ್ಯಾಷನಲ್ ಕೃಷ್ ಎಂದು ಕರೆಯಲಾಗುತ್ತದೆ. ರಶ್ಮಿಕ ಮಂದಣ್ಣ ನಟನೆಯ ಅಡವಾಳ್ಳು ಮೀಕು ಜೋಹರ್ಲು ಚಿತ್ರ ಅತಿಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ನವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಜನರು ರಶ್ಮಿಕ ಮಂದಣ್ಣ ನವರನ್ನು ನೀವು ಹೇಗೆ ಯಾವಾಗಲೂ ಖುಷಿಯಾಗಿರುತ್ತೀರಿ ಎಂಬುದಾಗಿ ಕೇಳುತ್ತಾರೆ. ಅದಕ್ಕೆ ರಶ್ಮಿಕ ಮಂದಣ್ಣ ನವರ ಉತ್ತರ ವಿಡಿಯೋ ಮೂಲಕ ಬಂದಿದೆ.

ಹೌದು ಇದು ನಿಜಾಂಶ ಕೂಡ ಹೌದು. ಇಷ್ಟೊಂದು ಟೀಕೆಗಳ ನಡುವೆ ಕೂಡ ರಶ್ಮಿಕ ಮಂದಣ್ಣ ನವರು ಸಂತೋಷವಾಗಿರುವುದು ಹೇಗೆ ಎನ್ನುವ ಪ್ರಶ್ನೆಗೆ ವಿಡಿಯೋದಲ್ಲಿ ಹಾಡೊಂದರ ಮೂಲಕ ಉತ್ತರ ನೀಡಿದ್ದಾರೆ. ಹೌದು ರಶ್ಮಿಕ ಮಂದಣ್ಣ ನವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮೈಂಡ್ ಮೈ ಬಿಸಿನೆಸ್ ಹಾಡಿದೆ. ಅಂದರೆ ಅವರ ಕೆಲಸವನ್ನು ಅವರ ಪಾಡಿಗೆ ಅವರು ಮಾಡಿಕೊಳ್ಳುತ್ತಾರೆ ಏನು ಅರ್ಥ ಆಗಿಲ್ಲ. ಯಾರು ಎಷ್ಟೇ ಟೀಕೆ ಮಾಡಲಿ ಸ್ನೇಹಿತರೆ ಕನ್ನಡ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗದ ವರೆಗೂ ಕೂಡ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕ ಮಂದಣ್ಣ ನವರ ಸಿನಿಮಾ ಜರ್ನಿ ನಿಜಕ್ಕೂ ಸ್ಪೂರ್ತಿ ದಾಯಕ ವಾದದ್ದು.