ಮನಸಿನ ನೋವನ್ನು ಹೇಳಿಕೊಂಡು ಕಣ್ಣೀರಿಟ್ಟ ನಟಿ ಶ್ವೇತಾ ಚಂಗಪ್ಪ, ಉಕ್ರೇನ್ ನಲ್ಲಿ ಸಿಕ್ಕಿ ಬಿದ್ದಿರುವ ಈ ಹೆಣ್ಣು ಮಗಳು ಯಾರು ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವ ಏನೆಲ್ಲ ಕಷ್ಟಗಳನ್ನು ಅನುಭವಿಸಿದೆ ಎಂಬುದನ್ನು ನಿಮಗೆ ವಿಶೇಷವಾಗಿ ಹೇಳುವ ಅಗತ್ಯತೆ ಇಲ್ಲ. ಹೌದು ಈಗಾಗಲೇ ನಾವು ಮಹಾಮಾರಿಯನ್ನು ಎದುರಿಸಿ ಬಂದಿದ್ದೇವೆ. ಈ ಹಿನ್ನೆಲೆಯಲ್ಲೇ ಮತ್ತೊಂದು ಕಷ್ಟ ಕೂಡ ಜಾಗತಿಕವಾಗಿ ತಲೆದೋರುತ್ತಿದೆ. ಅದು ಇನ್ನೇನು ಅಲ್ಲ ಈಗಾಗಲೇ ಪ್ರಾರಂಭವಾಗಿರುವ ರಷ್ಯಾ ಹಾಗೂ ಉಕ್ರೇನ್ ಸಮರ. ರಷ್ಯಾ ಹಾಗೂ ಉಕ್ರೇನ್ ದೇಶಗಳ ಆಂತರಿಕ ಬಿಕ್ಕಟ್ಟು ಈಗ ಸಮರದ ಮೂಲಕ ಇನ್ನೊಂದು ಹಂತಕ್ಕೆ ಹೋಗಿದೆ.

ಈಗಾಗಲೇ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ದೇಶದ ಮೇಲೆ ಸಮರವನ್ನು ಸಾರಿದ್ದು ನಾಲ್ಕು ಪ್ರಮುಖ ಪಟ್ಟಣ ಗಳನ್ನು ವಶಕ್ಕೆ ಪಡೆದಿದೆ. ಉಕ್ರೇನಿನ ಸೇನೆ ರಷ್ಯಾದ ಸಮರವನ್ನು ತಡೆಯಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಷ್ಯಾದಂತಹ ಶಕ್ತಿಶಾಲಿ ದೇಶವನ್ನು ತಡೆಯುವ ಅಷ್ಟರಮಟ್ಟಿಗೆ ಸಂಪನ್ಮೂಲ ಉಕ್ರೇನ್ ದೇಶದ ಬಳಿ ಇಲ್ಲ. ಈ ಕಾರಣದಿಂದಲೇ ಭಾರತ ದೇಶ ಹಾಗೂ ಇತರ ರಾಷ್ಟ್ರಗಳ ಬಳಿ ಉಕ್ರೇನ್ ದೇಶ ರಷ್ಯಾದ ಬಳಿ ಶಾಂತಿ ಮಾತುಕತೆ ನಡೆಸುವಂತೆ ಮನವೊಲಿಸುತ್ತಿದೆ. ಈಗ ಅಲ್ಲಿನ ನಾಗರಿಕರು ಮಾತ್ರವಲ್ಲದೆ ಇನ್ನೊಂದು ವಿಚಾರವೂ ಕೂಡ ಈಗ ನಮ್ಮವರು ಚಿಂತೆ ಪಡುವಂತಾಗಿದೆ. ಹೌದು ನಮ್ಮ ಭಾರತ ದೇಶದ ಹಲವಾರು ವಿದ್ಯಾರ್ಥಿಗಳು ಕೂಡ ಅಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೋಗಿದ್ದಾರೆ. ಹಲವಾರು ದಿನಗಳಿಂದ ಇಲ್ಲಿ ವಾಪಸಾಗುವ ವಿಮಾನಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಕುಟುಂಬದ ಸದಸ್ಯರೊಬ್ಬರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ನಟಿ ಶ್ವೇತಾ ಚೆಂಗಪ್ಪ ರವರ ಕುಟುಂಬದ ಸದಸ್ಯರೊಬ್ಬರ ಕುರಿತಂತೆ. ನಟಿ ಶ್ವೇತಾ ಚೆಂಗಪ್ಪ ರವರ ಸಂಬಂಧಿ ಅಂದರೆ ಸಂಬಂಧದಲ್ಲಿ ತಂಗಿ ಆಗಿರುವ ಸುಹಾನಿ ರವರು ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಈಗ ಅವರ ಕುರಿತಂತೆ ಶ್ವೇತ ಚಂಗಪ್ಪ ಸೇರಿದಂತೆ ಅವರ ಕುಟುಂಬದ ಸದಸ್ಯರು ಚಿಂತಿತರಾಗಿದ್ದಾರೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಆಗಿರುವ ಬಸವರಾಜ ಬೊಮ್ಮಾಯಿ ಅವರು ಹೇಳುವಂತೆ ಉಕ್ರೇನ್ ನಲ್ಲಿ ಕರ್ನಾಟಕದ ಹತ್ತು ಜನ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರಿಗೂ ಕೂಡ ಸುರಕ್ಷಿತ ಸ್ಥಳವನ್ನು ಈಗಾಗಲೇ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಗೊಂಡ ಮೇಲೆ ಎಲ್ಲರೂ ಕೂಡ ಸುರಕ್ಷಿತ ರಾಗಿ ವಾಪಾಸ್ ಭಾರತಕ್ಕೆ ಆಗಮಿಸಲಿ ಎಂಬುದೇ ಎಲ್ಲರ ಹಾರೈಕೆ.

Get real time updates directly on you device, subscribe now.