ತಾವು ನಟಿಸಿ ಯಶಸ್ಸು ಕಂಡಿರುವ ಸಿನಿಮಾ ಗಳಲ್ಲಿ ಹಲವನ್ನು ನಾನೇ ನೋಡಿಲ್ಲ ಎಂದ ಶಾರುಖ್, ಯಾಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಸೂಪರ್ಸ್ಟಾರ್ ಯಾರು ಎಂದರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ನಾವು ಶಾರುಖ್ ಖಾನ್ ಅವರ ಹೆಸರನ್ನು ಹೇಳಬಹುದಾಗಿದೆ. ಶಾರುಖ್ ಖಾನ್ ರವರು ಯಾವ ಸಪೋರ್ಟ್ ಇಲ್ಲದೆ ತನ್ನ ಸ್ವಂತ ಪರಿಶ್ರಮದಲ್ಲಿ ಹಲವಾರು ದೊಡ್ಡ ದೊಡ್ಡ ಸ್ಟಾರ್ ನಟರ ಎದುರು ಕಷ್ಟಪಟ್ಟು ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್ ಚಿತ್ರರಂಗದ ಕಿಂಗ್ ಆದವರು.
ಇತ್ತೀಚಿನ ದಿನಗಳಲ್ಲಿ ಶಾರುಖ್ ಖಾನ್ ರವರು ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡಿದರೂ ಕೂಡ ಇಂದಿಗೂ ಅವರ ಮಾರ್ಕೆಟ್ ವ್ಯಾಲ್ಯೂ ಕಡಿಮೆಯಾಗಿಲ್ಲ. 2018 ರಲ್ಲಿ ಅವರ ಕೊನೆಯ ಸಿನಿಮಾ ಜೀರೋ ಬಿಡುಗಡೆಯಾಗಿತ್ತು. ಇದಾದ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕೂಡ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಆದರೂ ಅಭಿಮಾನಿಗಳಿಗೆ ಕಿಂಗ್ ಖಾನ್ ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ಕಾಣುವ ತವಕ ಇನ್ನು ಕೂಡ ಕಡಿಮೆಯಾಗಿಲ್ಲ. ಇನ್ನು ಶಾರುಕ್ ಖಾನ್ ಅವರ ಕುರಿತಂತೆ ಒಂದು ವಿಚಿತ್ರವಾದ ವರದಿ ಈಗ ಸುದ್ದಿ ಮಾಡುತ್ತಿದೆ.
ಅದು ಖುಲಾಸೆ ಆಗಿರುವುದು ಕೂಡ ಜೀ ಟಿವಿಯ ಯಾರೋನ್ ಕಿ ಬರಾತ್ ನಮ್ಮ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ ರಿತೇಶ್ ದೇಶಮುಖ್ ರವರ ಎದುರುಗಡೆ. ಕನ್ನಡ ಚಿತ್ರರಂಗ ಸೇರಿದಂತೆ ಹಲವಾರು ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆಯಾದಾಗ ಅಭಿಮಾನಿಗಳ ಜೊತೆಗೆ ಹೋಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ವಾಡಿಕೆ ಆಗಿದೆ. ಆದರೆ ನಿಮಗೆ ಗೊತ್ತಾ ಗೆಳೆಯರೇ ಇದುವರೆಗೂ ಶಾರುಖ್ ಖಾನ್ ರವರು ಸಿನಿಮಾಗಳನ್ನು ಇದುವರೆಗೂ ಕೂಡ ಚಿತ್ರಮಂದಿರಗಳಲ್ಲಿ ಹೋಗಿ ಅಭಿಮಾನಿಗಳ ಜೊತೆಗೆ ನೋಡಿಲ್ಲವಂತೆ. ಇದನ್ನು ಕೇಳಲು ವಿಚಿತ್ರ ಎಂದೆನಿಸಿದರೂ ಕೂಡ ನಿಜವಾದ ಮಾತು ಇದನ್ನು ಸ್ವತಃ ಶಾರುಖ್ ಖಾನ್ ರವರೆ ಖುದ್ದಾಗಿ ಹೇಳಿಕೊಂಡಿದ್ದಾರೆ.