ಕನ್ನಡಿಗರ ಕ್ರಶ್ ರಶ್ಮಿಕಾ ಜೊತೆ ಮದುವೆ ಎಂಬ ಸುದ್ದಿ ಬಹಿರಂಗ ವಾಗುತ್ತಿದ್ದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ವಿಜಯ್, ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸುದ್ದಿಗೆ ಒಳಗಾಗುತ್ತಿರುವ ಜೋಡಿ ಗಳೆಂದರೆ ಅದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಗೀತ ಗೋವಿಂದಂ ಚಿತ್ರದ ಮೂಲಕ ಇವರಿಬ್ಬರು ತಮ್ಮ ಜರ್ನಿ ಯನ್ನು ಒಟ್ಟಿಗೆ ಆರಂಭಿಸಿದ್ದರು. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಜೊತೆಯಲ್ಲಿ ನಟಿಸುತ್ತಾರೆ. ಗೀತಾ ಗೋವಿಂದನ್ ಹಾಗೂ ಡಿಯರ್ ಕಾಮ್ರೇಡ್ ಎರಡು ಚಿತ್ರಗಳು ಕೂಡಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ. ಸಹಜವಾಗಿ ಇವರ ನಡುವೆ ಸ್ನೇಹ ಸಂಬಂಧ ಎನ್ನುವುದು ಹೆಚ್ಚಾಗಿದೆ.
ಒಟ್ಟಿಗೆ ತಿರುಗಾಡುವುದು ಒಟ್ಟಿಗೆ ಕಾಣಿಸಿಕೊಳ್ಳುವುದು ಅಗತ್ಯಕ್ಕಿಂತ ಹೆಚ್ಚಾಗಿದ್ದರಿಂದ ಎಲ್ಲರೂ ಕೂಡ ಇವರಿಬ್ಬರು ಮದುವೆಯಾಗಿದ್ದಾರೆ ಅಥವಾ ಮದುವೆಯಾಗಲಿದ್ದಾರೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂಬುದಾಗಿ ಸುದ್ದಿಗಳನ್ನು ಹರಿದಾಡಿ ಸುವಂತೆ ಮಾಡುತ್ತದೆ. ಇಷ್ಟೇ ಏಕೆ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಕೂಡ ರಶ್ಮಿಕ ಮಂದಣ್ಣ ನವರು ವಿಜಯ್ ದೇವರಕೊಂಡ ರವರ ಕುಟುಂಬದ ಜೊತೆಗೆ ಅವರ ಮನೆಯಲ್ಲಿ ಆಚರಿಸಿದರು. ಕೇಳಿದಾಗಲೆಲ್ಲ ನಾವಿಬ್ಬರೂ ಕೇವಲ ಸ್ನೇಹಿತರಷ್ಟೇ ಎಂಬುದಾಗಿ ಹೇಳುತ್ತಾರೆ. ಹಲವಾರು ಬಾರಿ ಪ್ರವಾಸಕ್ಕೂ ಕೂಡ ಜೊತೆಯಾಗಿ ಹೋಗಿದ್ದಾರೆ. ಒಟ್ಟಾಗಿ ರೆಸ್ಟೋರೆಂಟ್ ಗಳಲ್ಲಿ ಕೂಡ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ರಶ್ಮಿಕ ಮಂದಣ್ಣ ನವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದು ನಿಮಗೆಲ್ಲ ಗೊತ್ತಿದೆ. ಈ ಕಡೆ ನೋಡುವುದಾದರೆ ವಿಜಯ್ ದೇವರಕೊಂಡ ರವರ ಪಂಚಭಾಷಾ ಚಿತ್ರವಾಗಿರುವ ಲೈಗರ್ ಕೂಡ ಇದೆ ಅಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಅವರ ಹಾಗೂ ರಶ್ಮಿಕ ಮಂದಣ್ಣ ನವರ ಕುರಿತಂತೆ ಓಡಾಡುತ್ತಿರುವ ಗಾಳಿಸುದ್ದಿಗಳು ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಹೌದು ತಮ್ಮಿಬ್ಬರ ನಡುವೆ ಓಡಾಡುತ್ತಿರುವ ಗಾಳಿಸುದ್ದಿಯ ಕುರಿತಂತೆ ಪ್ರತಿಕ್ರಿಯಿಸುತ್ತ ವಿಜಯ್ ದೇವರಕೊಂಡ ರವರು ಮಾಮೂಲಿನಂತೆ ಇದು ಕೂಡ ಅಸಂಬದ್ಧ ಎನ್ನುವುದಾಗಿ ಟ್ವೀಟ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇಂತಹ ಸುದ್ದಿಗಳನ್ನು ನಾವು ಇಷ್ಟಪಡುವುದಿಲ್ಲವೇ ಎಂಬುದಾಗಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆಯಾಗಿ ಇಂತಹ ಸಿದ್ಧಿಯನ್ನು ಹಬ್ಬಿಸಿರುವ ಸುದ್ದಿ ಸಂಸ್ಥೆಗಳ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ಮಾಡಿದಂತಿದೆ.