ಬಿಗ್ ಬಾಸ್ ನಿಂದ ಹೊರಬಂದ ಸ್ಟಾರ್ ನಟ, ಅಧಿಕೃತ ಘೋಷಣೆ ಮಾಡಿದ ನಟ, ಅಭಿಮಾನಿಗಳಲ್ಲಿ ಮತ್ತೊಂದು ನಿರಾಸೆ. ಯಾಕೆ ಗೊತ್ತೇ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವಿದೇಶದಿಂದ ಭಾರತಕ್ಕೆ ಬಂದು ಈಗ ಕಿರುತೆರೆಯಲ್ಲಿ ರಾಜನಂತೆ ಮೆರೆಯುತ್ತಿರುವ ಕಾರ್ಯಕ್ರಮವೆಂದರೆ ಬಿಗ್ ಬಾಸ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇದು ಈಗಾಗಲೇ ಹಿಂದಿ ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂನಲ್ಲಿ ಕೂಡ ಪ್ರಸಾರವಾಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದಿಯಲ್ಲಿ ಈಗ ಮೆಗಾಸ್ಟಾರ್ ಸಲ್ಮಾನ್ ಖಾನ್ ರವರು ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮೊದಲ ಸೀಸನ್ ಕೂಡ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ.

ಇನ್ನು ತಮಿಳಿನಲ್ಲಿ ಉಳಗನಯನನ್ ಖ್ಯಾತಿಯ ಹಿರಿಯ ನಟ ಕಮಲ್ ಹಾಸನ್ ರವರು ನಿರೂಪಣೆ ಮಾಡುತ್ತಿದ್ದಾರೆ. ತೆಲುಗಿನ ಬಿಗ್ ಬಾಸ್ ನಲ್ಲಿ ಈಗಾಗಲೇ ನಾನಿ ಜೂನಿಯರ್ ಎನ್ಟಿಆರ್ ಹಾಗೂ ನಾಗಾರ್ಜುನ ರವರು ನಿರೂಪಣೆ ಮಾಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದಾಗಿ ಈಗ ಹಲವಾರು ಸ್ಪರ್ಧಿಗಳು ಮುಖ್ಯ ನೆಲೆಗೆ ಬಂದು ಜನಪ್ರಿಯರಾಗಿದ್ದಾರೆ. ಇದಕ್ಕಾಗಿಯೇ ಬಿಗ್ ಬಾಸ್ ಕಾರ್ಯಕ್ರಮ ಎಲ್ಲರಿಗೂ ಇಷ್ಟ ಆಗೋದು ಹಾಗೂ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆಯುವುದು. ಇನ್ನು ಬಿಗ್ ಬಾಸ್ ನಿಂದ ಈಗ ಹೊರ ನಡೆಯುವುದಾಗಿ ಒಬ್ಬ ಖ್ಯಾತ ಸ್ಟಾರ್ ನಟ ಘೋಷಿಸಿಕೊಂಡಿದ್ದಾರೆ. ಹಾಗಿದ್ದರೆ ಅವರು ಯಾರು ಹಾಗೂ ಅವರು ಹೊರನಡೆಯಲು ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಾವು ಮಾತನಾಡುತ್ತಿರುವುದು ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಅವರ ಕುರಿತಂತೆ. ಕಮಲ್ ಹಾಸನ್ ಅವರು ಓಟಿಟಿ ಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಅಲ್ಟಿಮೇಟ್ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. ಇದಕ್ಕೆ ಕಾರಣವೂ ಕೂಡ ನ್ಯಾಯ ಸಮ್ಮತವಾಗಿದೆ. ಬಿಗ್ ಬಾಸ್ ಚಿತ್ರೀಕರಣದ ಕಾರಣದಿಂದಾಗಿ ಕಮಲ್ ಹಾಸನ್ ರವರು ಲೋಕೇಶ್ ಕನಗರಜ್ ನಿರ್ದೇಶನದ ಬಹುನಿರೀಕ್ಷಿತ ವಿಕ್ರಂ ಚಿತ್ರದ ಚಿತ್ರೀಕರಣಕ್ಕಾಗಿ ಡೇಟ್ಸ್ ನೀಡಲು ಸಾಧ್ಯವಾಗುತ್ತಿಲ್ಲ. ಎರಡು ತಂಡಗಳು ಬಹಳಷ್ಟು ಪರಿಶ್ರಮದಿಂದ ಕಾರ್ಯಕ್ರಮದ ಯಶಸ್ವಿಗಾಗಿ ಹಗಲು-ರಾತ್ರಿಯೆನ್ನದೇ ದುಡಿಯುತ್ತಿವೆ. ಇದಕ್ಕಾಗಿ ನಾನು ಕಾರ್ಯಕ್ರಮದಿಂದ ಹೊರ ಬಂದಿದ್ದು ವಿಕ್ರಂ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂಬುದಾಗಿ ಸ್ವತಹ ಕಮಲ್ ಹಾಸನ್ ರವರೆ ಬಿಚ್ಚಿಟ್ಟಿದ್ದಾರೆ. ಕಮಲ್ ಹಾಸನ್ ಒಬ್ಬ ನಿರ್ಮಾಪಕ ನಿರ್ದೇಶಕ ನಟ ಹಾಗೂ ರಾಜಕಾರಣಿಯಾಗಿ ಸಾಕಷ್ಟು ಬ್ಯುಸಿ ಆಗಿದ್ದು ಅವರ ಈ ನಿರ್ಧಾರ ಖಂಡಿತವಾಗಿ ಅವರಿಗೆ ನ್ಯಾಯಸಮ್ಮತವಾಗಿ ಇರುವಂತದ್ದಾಗಿದೆ.

Get real time updates directly on you device, subscribe now.