ಕೇವಲ ಎರಡು ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 5 ಲಕ್ಷ ಗಳಿಸಿ, ಮೊದಲ ದಿನದಿಂದಲೇ ಲಾಭ ಆರಂಭ. ಯಾವುದು ಮತ್ತು ಹೇಗೆ ಆರಂಭಿಸಬೇಕು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ನಾವು ಇಂದು ಒಂದು ಲಾಭ ತಂದು ಕೊಡುವಂತ ತಿಂಗಳಿಗೆ ಹೆಚ್ಚು ಆದಾಯ ಗಳಿಸುವಂಥ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನಿಮ್ಮದೇ ಆದ ಹೊಸ ಉದ್ದಿಮೆ ಶುರು ಮಾಡುವ ಉದ್ದೇಶ ನಿಮಗಿದ್ದರೆ, ಅಮೂಲ್ ಕಂಪನಿ ಡೈರಿ ಉತ್ಪನ್ನ ಮಾರಾಟಕ್ಕೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ನೀವು ಒಮ್ಮೆ ಹೂಡಿಕೆ ಮಾಡಿದ್ರೆ ಮತ್ತೆ ತಿಂಗಳಿಗೆ ಎಷ್ಟು ಹಣ ಗಳಿಸಬಹುದು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಕೆಲವೊಮ್ಮೆ ಸಿಕ್ಕಾಪಟ್ಟೆ ಹಣ ಹೂಡಿಕೆ ಮಾಡಿ ಸ್ವ ಉದ್ಯೋಗ ಶುರು ಮಾಡುವುದು ಕಷ್ಟವಾಗುತ್ತದೆ. ಅಂತ ಸಂದರ್ಭದಲ್ಲಿ ಈಗಾಗಲೇ ಹೆಸರು ಮಾಡಿರುವಂಥ ಬ್ರ್ಯಾಂಡ್ ಜೊತೆ ಸೇರಿ ನೀವು ಉದ್ಯೋಗವನ್ನು ಶುರು ಮಾಡಬಹುದು. ಹೌದು. ಹಾಗೆ ಫ್ರಾಂಚೈಸಿಗಳನ್ನು ನೀಡುತ್ತಿರುವ ಒಂದು ಕಂಪನಿ ಅಂದ್ರೆ ಅಮೂಲ್. ಅಮುಲ್, ಯಾವುದೇ ರಾಯಲ್ಟಿ ಅಥವಾ ಲಾಭ ಹಂಚಿಕೆ ಇಲ್ಲದೆ ಫ್ರಾಂಚೈಸಿಗಳನ್ನು ನೀಡುತ್ತಿದೆ. ಈ ಫ್ರಾಂಚೈಸಿಗಳನ್ನು ನಡೆಸಲು ನೀವು 2 ರಿಂದ 6 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ರೆ ಸಾಕು. ಕೆಲವೇ ತಿಂಗಳುಗಳಲ್ಲಿ ನೀವು ಹೂಡಿಕೆ ಮಾಡಿದ ಹಣ ನಿಮಗೆ ಹಿಂತಿರುಗಿ ಸಿಗತ್ತೆ.

ಈ ಉದ್ಯಮದಲ್ಲಿ ನೀವು ಹೂಡಿಕೆ ಮಾಡಿದ ಆರಂಭದಿಂದಲೇ ಅಂದರೆ ಮೊದಲನೇ ಮಾಸದಲ್ಲಿಯೇ 5 ರಿಂದ 10 ಲಕ್ಷ ರೂಪಾಯಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ ಇದು ನೀವು ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಿರಾ ಎಂಬುದನ್ನು ಅವಲಂಬಿಸಿದೆ. ಇನ್ನು ಅಮೂಲ್ ನೀಡುತ್ತಿರುವ ಫ್ರಾಂಚೈಸಿಗಳು ಹೀಗಿವೆ. ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ ಫ್ರಾಂಚೈಸಿ ಮತ್ತು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ.

ನೀವು ಮೊದಲನೆ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಲು 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ನೀವು ಇನ್ನೊಂದು ಫ್ರಾಂಚೈಸ್ ತೆಗೆದುಕೊಳ್ಳಲು 5 ಲಕ್ಷಗಳನ್ನು ಹೂಡಿಕೆ ಮಾಡಬೇಕು. ಇದರಲ್ಲಿ 25 ರಿಂದ 50 ಸಾವಿರ ರೂಪಾಯಿಗಳನ್ನು ಬ್ರ್ಯಾಂಡ್ ಭದ್ರತೆಯಾಗಿ ಇಡಬೇಕು ಹಾಗೂ ಇದನ್ನು ಪರುಪಾವತಿಸಲಾಗುವುದಿಲ್ಲ.

ಅಮುಲ್ ಔಟ್ಲೆಟ್ ಮಾರಾಟವನ್ನು ನೀವು ತೆಗೆದುಕೊಂಡರೆ ಅಮುಲ್ ಉತ್ಪನ್ನಗಳ ಎಂ ಆರ್ ಪಿ ಕಮಿಷನ್ ಅನ್ನು ಕಂಪನಿ ಪಾವತಿಸುತ್ತದೆ. ಒಂದು ಹಾಲಿನ ಪ್ಯಾಕೆಟ್ ಮೇಲೆ ಶೇ.2.5, ಹಾಲಿನ ಉತ್ಪನ್ನಗಳ ಮೇಲೆ ಶೇ.10 ಮತ್ತು ಐಸ್ ಕ್ರೀಂ ಮೇಲೆ ಶೇ.20 ಕಮಿಷನ್ ದೊರೆಯುತ್ತದೆ.

ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ನ ಫ್ರಾಂಚೈಸಿಯನ್ನು ತೆಗೆದುಕೊಂಡರೆ ಐಸ್ ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್‌ವಿಚ್, ಹಾಟ್ ಚಾಕೊಲೇಟ್ ಪಾನೀಯಗಳ ಮೇಲೆ ಶೇ. 50ರಷ್ಟು ಕಮಿಷನ್ ಸಿಗುತ್ತದೆ. ಇನ್ನು ಕಂಪನಿಯು, ಪ್ಯಾಕ್ ಮಾಡಿದ ಐಸ್ ಕ್ರೀಮ್ ಮೇಲೆ ಶೇ. 20 ಪ್ರತಿಶತ ಮತ್ತು ಅಮುಲ್ ಉತ್ಪನ್ನಗಳ ಮೇಲೆ ಶೇ. 10 ಕಮಿಷನ್ ನೀಡುತ್ತದೆ.

ಇನ್ನು ಫ್ರಾಂಚೈಸಿ ತೆಗೆದುಕೊಳ್ಳುವುದಾದರೆ ಜಾಗ ಹೇಗಿರಬೇಕು ಎಷ್ಟಿರಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೂ ಇಲ್ಲಿದೆ ಉತ್ತರ. ನೀವು ಅಮುಲ್ ಔಟ್ಲೆಟ್ ಅನ್ನು ತೆಗೆದುಕೊಂಡರೆ, 150 ಚದರ ಅಡಿ ಜಾಗವನ್ನು ಹಾಗೂ ಅಮುಲ್ ಐಸ್ ಕ್ರೀಮ್ ಪಾರ್ಲರ್‌ನ ಫ್ರಾಂಚೈಸಿಗೆ, ಕನಿಷ್ಠ 300 ಚದರ ಅಡಿ ಜಾಗ ನಿಮ್ಮಲ್ಲಿ ಇರಬೇಕು. ಸ್ನೇಹಿತರೆ, ನೀವು ಫ್ರ್ಯಾಂಚೈಸ್‌ಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ retail@amul.coop ಗೆ ಮೇಲ್ ಮಾಡಿ. ಸ್ಕೂಪಿಂಗ್ ಪಾರ್ಲರ್‌ಗಳಿಗಾಗಿ http://amul.com/m/amul ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Get real time updates directly on you device, subscribe now.