ಕನ್ನಡದ ಅದೆಷ್ಟೋ ನಟರು 20 ಸಿನೆಮಾಗೆ ಪಡೆಯುವ ಸಂಭಾವನೆಯನ್ನು ಒಂದು ಸಿನೆಮಾಗೆ ಕೇಳಿದ ವಿಜಯ್, ಒಂದು ಸಿನೆಮಾಗೆ ಎಷ್ಟು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ತಮಿಳು ಚಿತ್ರರಂಗದ ಇಳಯ ದಳಪತಿ ವಿಜಯ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ವಯಸ್ಸು 47 ಆದರೂ ಸಹ ಇನ್ನು ಕಾಲೇಜ್ ಹುಡುಗನಂತೆ ಕಾಣುವ ದಳಪತಿ ವಿಜಯ್ ಗೆ ಬಹುದೊಡ್ಡದಾದ ಅಭಿಮಾನಿ ಬಳಗವಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾಲ. ತಮು ಮಾತ್ರವಲ್ಲದೇ ಕನ್ನಡ,ತೆಲುಗು, ಹಿಂದಿ , ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲಿಯೂ ಸಹ ವಿಜಯ್ ಅಭಿಮಾನಿಗಳು ಹೆಚ್ಚಿದ್ದಾರೆ. ಸದ್ಯ ವೃತ್ತಿ ಬದುಕಿನ ಅತ್ಯುತ್ತಮ ಘಟ್ಟದಲ್ಲಿರುವ ವಿಜಯ್ ತಮ್ಮ ಸಂಭಾವನೆಯನ್ನು ದಾಖಲೆಯ ಮಟ್ಟದಲ್ಲಿ ಏರಿಸಿಕೊಂಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ಬಹು ದೊಡ್ಡ ಹಿಟ್ ಆಗಿತ್ತು.ಆ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 80 ಕೋಟಿ ಸಂಭಾವನೆ ಪಡೆದಿದ್ದರಂತೆ. ಈಗ ಆ ಸಿನಿಮಾ ಸೂಪರ್ ಹಿಟ್ ನಂತರ ಹೊಸ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರಂತೆ. ಈ ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದರೇ, ವಂಶಿಯವರು ನಿರ್ದೇಶಿಸುತ್ತಿದ್ದಾರಂತೆ.

ಈ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇದರ ಬಜೆಟ್ ದಾಖಲೆಯಾಗುತ್ತದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿಜಯ್ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂದು.ಕೇಳಿದರೇ ನಿಮ್ಮ ತಲೆ ತಿರುಗುವುದು ಗ್ಯಾರೆಂಟಿ. ಈ ಒಂದು ಸಿನಿಮಾಕ್ಕೆಂದೇ ನಟ ವಿಜಯ್ ಬರೋಬ್ಬರಿ 120 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ನೂರು ಕೋಟಿ ಸಂಭಾವನೆಯ ಕ್ಲಬ್ ಸೇರಿಕೊಳ್ಳುತ್ತಾರೆ. ಈ ಚಿತ್ರದ ಬಜೆಟ್ ಸಾವಿರ ಕೋಟಿ ತಲುಪಿದರೂ ತಲುಪಬಹುದು. ಒಟ್ಟಿನರ್ಲಿ ಇಳಯ ದಳಪತಿ ವಿಜಯ್ ವೃತ್ತಿ ಜೀವನದ ಬಹುದೊಡ್ಡ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.