ದಕ್ಷಿಣ ಭಾರತದ ಖ್ಯಾತ ನಟ ಸುಮನ್ ರವರಿಂದ 117 ಎಕರೆ ಭೂಮಿ ಸೈನ್ಯಕ್ಕೆ ದಾನ ಸುದ್ದಿ ಕುರಿತಂತೆ ಮೊದಲ ಬಾರಿಗೆ ಸುಮನ್ ಹೇಳಿದ್ದೇನು ಗೊತ್ತೇ??

89

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಜನರನ್ನು ಕಾಪಾಡ ಬೇಕಾಗಿರುವ ಜನ ನಾಯಕರಿಗಿಂತ ಹೆಚ್ಚಾಗಿ ಸಿನಿಮಾ ಪರದೆ ಮೇಲೆ ಜನರಿಗೆ ಮನೋರಂಜನೆಯನ್ನು ನೀಡುವಂತಹ ನಾಯಕನಟರ ಒಳ್ಳೆಯ ಕೆಲಸಗಳ ಮೂಲಕ ಅವರಿಗೆ ದೇವ ಸ್ವರೂಪವಾಗಿ ಇರುತ್ತಾರೆ. ಹೌದು ಗೆಳೆಯರೆ ನೀವು ಹಲವಾರು ಬಾರಿ ಸಿನಿಮಾ ನಾಯಕ ನಟರು ಬಡಜನರಿಗೆ ಸಹಾಯ ಮಾಡಿದ್ದನ್ನು ಸುದ್ದಿಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೇಳಿರುತ್ತೀರಿ. ಇಂದು ಕೂಡ ನಾವು ಮಾತನಾಡಲು ಹೊರಟಿರುವುದು ಅದೇ ರೀತಿಯ ನಟ ಒಬ್ಬರ ಕುರಿತಂತೆ.

ಇಂತಹ ಸುದ್ದಿಗಳಲ್ಲಿ ಕೆಲವೊಮ್ಮೆ ಸತ್ಯವೂ ಕೂಡ ಇರುತ್ತವೆ ಕೆಲವೊಮ್ಮೆ ಸುಳ್ಳು ಸುದ್ದಿಗಳು ಕೂಡ ಹರಡಲಾಗುತ್ತದೆ. ಕರ್ನಾಟಕ ಮೂಲದ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಟರಾಗಿ ಇದ್ದಂತಹ ಸುಮನ್ ರವರ ಬಗ್ಗೆ ನಿಮಗೆ ತಿಳಿದಿರುತ್ತದೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗಿಂತ ಅತ್ಯಂತ ಹೆಚ್ಚು ಬೇಡಿಕೆ ಹಾಗೂ ಸಂಭಾವನೆಯನ್ನು ಪಡೆಯುತ್ತಿದ್ದ ನಟರಾಗಿ ಜನಪ್ರಿಯತೆಯನ್ನು ಹೊಂದಿದ್ದರು. ಇವರ ಕುರಿತಂತೆ ಒಂದು ಸುದ್ದಿ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿತ್ತು. ಅದೇನೆಂದರೆ ಸುಮನ್ ರವರು ಸೇವೆಗಾಗಿ ತಮ್ಮ ಬೆಲೆಬಾಳುವ 117 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ ಎಂಬುದಾಗಿ.

ಕೊನೆಗೂ ಈ ವಿಚಾರದ ಕುರಿತಂತೆ ಖುದ್ದಾಗಿ ಸುಮನ್ ರವರೆ ಮಾತನಾಡಿದ್ದಾರೆ. ಹಾಗಿದ್ದರೆ ಸುಮನ್ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಾನು ನನ್ನ ಯಡಾದ್ರಿಯ 117 ಎಕರೆಯ ಜಮೀನನ್ನು ಸೇನೆಗೆ ದಾನ ಮಾಡಿದ್ದೇನೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಿವೆ. ಇದು ಸುಳ್ಳು ಸುದ್ದಿಯಾಗಿದ್ದು ನಾನು ಹೀಗೆ ಮಾಡಿಲ್ಲ. ಯಾಕೆಂದರೆ ಜಮೀನು ಈಗಾಗಲೇ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಸಿಲುಕಿದ್ದು ವಿವಾದಿತ ಪ್ರದೇಶದ ಸಮಸ್ಯೆ ಪರಿಹಾರವಾದ ಮೇಲೆ ಈ ಕುರಿತಂತೆ ನಾನು ಮಾತನಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಒಂದು ಕಾಲದಲ್ಲಿ ಅಷ್ಟೊಂದು ಜನಪ್ರಿಯತೆ ಹೊಂದಿದ್ದ ಸುಮನ್ ರವರು ನೀಲಿ ಚಿತ್ರದ ಕೇಸ್ ಗೆ ಸಂಬಂಧಿತ ವಿಚಾರದಲ್ಲಿ ಐದು ತಿಂಗಳು ಕಾಲ ಜೈಲುವಾಸ ಅನುಭವಿಸಿದ ಮೇಲೆ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Get real time updates directly on you device, subscribe now.