Kannada News: ಮನೆಯಲ್ಲಿ ಸಾಂಬರ್ ರುಚಿಯಾಗಿಲ್ಲ ಎಂದ ಮಾತ್ರಕ್ಕೆ ಇಲ್ಲೊಬ್ಬ ತಾಯಿ ಹಾಗೂ ತಂಗಿಯನ್ನು ಎಂತಹ ಪರಿಸ್ಥಿತಿಗೆ ತಂದಿದ್ದಾನೆ ಗೊತ್ತೇ??
Kannada News: ಈಗ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದರೆ.. ಮನುಷ್ಯರು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ, ಇವರು ನಿಜಕ್ಕೂ ಮನುಷ್ಯರಾ ಎಂದು ಪ್ರಶ್ನೆ ಮೂಡುತ್ತದೆ. ಸಂಪ್ರದಾಯಗಳನ್ನು ಮರೆತು ಮಾನವೀಯತೆಯನ್ನು ಬಿಟ್ಟು, ದ್ವೇಷ ಕ್ರೌರ್ಯ ಸೃಷ್ಟಿಸುತ್ತಿದ್ದಾರೆ. ಕೆಲವೊಮ್ಮೆ ಇವರ ದ್ವೇಷಕ್ಕೆ ಕ್ರೌರ್ಯಕ್ಕೆ ಕಾರಣಗಳನ್ನು ಕೇಳಿದರೆ ಆಶ್ಚರ್ಯ ಆಗುತ್ತದೆ. ಇದು ಅತ್ಯಂತ ಕೆಟ್ಟ ವಿಷಯ ಎಂದು ಅನ್ನಿಸುತ್ತದೆ. ಇತ್ತೀಚೆಗೆ ಬುದ್ದಿವಂತ ಒಬ್ಬ ಮಾಡಿರುವ ಕೆಲಸ ಎಲ್ಲರು ಬೆಚ್ಚಿ ಬೀಳಿಸುವ ಹಾಗೆ ಮಾಡಿದೆ.
ಸಾಂಬಾರ್ ರುಚಿಯಾಗಿರಲಿಲ್ಲ ತನ್ನ ತಾಯಿ ಹಾಗೂ ಸ್ವಂತ ತಂಗಿಯನ್ನೇ ಮುಗಿಸಿಬಿಟ್ಟಿದ್ದಾನೆ. ಕೇಳಲು ವಿಚಿತ್ರ ಎನ್ನಿಸಿದರು ಸಹ ಇದೇ ಸತ್ಯ. ಇಂತಹ ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಕೆಲಸ ಮಾಡಿದ್ದಾನೆ. ಈ ಭೀಕರ ಘಟನೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಈ ಜಿಲ್ಲೆಯ ಕಾಡುಗೋಡು ಗ್ರಾಮದಲ್ಲಿ ವಾಸವಾಗಿರುವ ಮಂಜುನಾಥ ಎನ್ನುವ ವ್ಯಕ್ತಿ ಕುಡಿತದ ಚಟದಿಂದ ಮನೆಯಲ್ಲಿ ತೊಂದರೆ ಕೊಡುತ್ತಿದ್ದ. ಪ್ರತಿದಿನ ಕುಡಿಯುತ್ತಿದ್ದ. ಒಂದು ದಿನ ಕುಡಿದು ಮನೆಯಲ್ಲಿ ಊಟ ಮಾಡುವಾಗ, ರುಚಿ ಚೆನ್ನಾಗಿಲ್ಲ ಎಂದು ಅಮ್ಮ ಪಾರ್ವತಿ ಹಾಗೂ ತಂಗಿ ರಮ್ಯಾಗೆ, ಈ ಥರ ಯಾಕೆ ಮಾಡಿದ್ದೀರಿ ಎಂದು ಕೇಳಿದ್ದಾನೆ. ಇದನ್ನು ಓದಿ.. Kannada News: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ರೊಚ್ಚಿಗೆದ್ದು ಡಾನ್ಸ್ ಮಾಡಿದ ಹುಡುಗಿ: ಏನೇ ಆದರೂ ಈ ರೇಂಜ್ ಗೆ ಮಾಡೋದ? ವಿಡಿಯೋ ಹೇಗಿದೆ ಗೊತ್ತೇ?

ಅವರಿಬ್ಬರು ಏನು ಉತ್ತರ ಕೊಡದೆ ಸುಮ್ಮನೆ ನಿಂತಿದ್ದಾರೆ, ಆಗ ಇಬ್ಬರ ಮೇಲು ಸಿಟ್ಟಿ ಮಾಡಿಕೊಂಡು ಅರೆ ಕ್ಷಣದಲ್ಲಿ ಗುಂಡು ಹಾರಿಸಿ ಇಬ್ಬರನ್ನು ಮುಗಿಸಿಬಿಟ್ಟಿದ್ದಾನೆ. ಮನೆಯ ಒಳಗೆ ಒದ್ದಾಡಿ ಅಮ್ಮ ಮಗಳು ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಈ ರೀತಿ ಮಾಡಿದ ಮಂಜುನಾಥ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ವಿಚಾರ ಈಗ ಹಲವೆಡೆ ವೈರಲ್ ಆಗುತ್ತಿದೆ. ಇಂತಹ ಕೆಲಸ ಮಾಡಿದ ವ್ಯಕ್ತಿಯನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ಸಣ್ಣ ವಿಷಯಕ್ಕೆ ಎರಡು ಪ್ರಾಣ ಹೋಯಿತು ಎಂದು ನೆಟ್ಟಿಗರು ಆತನ ಮೇಲೆ ಶಾಪ ಹಾಕುತ್ತಿದ್ದಾರೆ. ಇದನ್ನು ಓದಿ..Health Tips: ನೀರಿನಲ್ಲಿ ನಿಂಬೆಹಣ್ಣನ್ನು ಕುದಿಸಿ ತಿಂದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಕುಡಿಯೋಕೆ ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?