Cricket News: ನಾಯಕನಾದ ಪಂದ್ಯದಲ್ಲಿ ದೇಶದ ಮನಗೆದ್ದ ಹಾರ್ಧಿಕ್: ಈ ವಿಚಾರದಲ್ಲಿ ಎಲ್ಲರೂ ಭೇಷ್ ಅಂದಿದ್ದು ಯಾಕೆ ಗೊತ್ತೇ?

28

Get real time updates directly on you device, subscribe now.

Cricket News: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ರನ್‌ಗಳ ಜಯ ಸಾಧಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ಆಟಗಾರರೊಂದಿಗೆ ಹೊಸ ಟಿ20 ತಂಡ ಶ್ರೀಲಂಕಾ ತಂಡವನ್ನು ಎದುರಿಸಿತು. ಶ್ರೀಲಂಕಾ ತಂಡವನ್ನು 160 ರನ್‌ ಗಳಿಗೆ ಆಲೌಟ್ ಮಾಡಿ ಹೊಸ ವರ್ಷದ ಮೊದಲ ಜಯ ಸಾಧಿಸಿತು. ಈ ಪಂದ್ಯದಲ್ಲಿ ದೀಪಕ್ ಹೂಡಾ, ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್ ನಲ್ಲಿ ಮಿಂಚಿದರೆ, ಯುವ ಬೌಲರ್ ಗಳಾದ ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ಅದ್ಭುತ ಬೌಲಿಂಗ್ ಮಾಡಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾದ ಬೌಲರ್ ಶಿವಂ ಮಾವಿ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಉರುಳಿಸಿದರು.

ಮೊದಲ ಕೆಲವು ಓವರ್ ಗಳಲ್ಲೇ ನಾಲ್ಕು ವಿಕೆಟ್‌ ಉರುಳಿಸಿದ್ದರು. ಉಮ್ರಾನ್ ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದು ಶಿವಂ ಅವರಿಗೆ ಸಾಥ್ ನೀಡಿದರು. ಆದರೆ ಈ ಪಂದ್ಯದಲ್ಲಿ ನಡೆದ ಕೆಲವು ವಿಚಾರ ಎಲ್ಲರಿಗೂ ಆಶ್ಚರ್ಯ ತಂದಿದೆ. ಅದೇನೆಂದರೆ, ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಉತ್ತಮ ರೆಕಾರ್ಡ್ಸ್ ಹೊಂದಿರುವ ಪಾಂಡ್ಯ ಅವರು, ಬೌಲಿಂಗ್ ಮಾಡದೇ ಅಕ್ಷರ್ ಪಟೇಲ್ ಅವರಿಗೆ ಆವಕಾಶ ನೀಡಿದರು. ಆದರೆ ಹೀಗೆ ಮಾಡಿದ್ದು ಯಾಕೆ ಎಂದು ಪಂದ್ಯ ಮುಗಿದ ನಂತರ ಹೇಳಿದ್ದಾರೆ. “ಟಫ್ ಆಗಿದ್ದಾಗ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂದು ನಮ್ಮ ಹುಡುಗರಿಗೆ ತಿಳಿದಿರಬೇಕು..” ಎಂದು ಹೇಳಿದ್ದಾರೆ ಪಾಂಡ್ಯ. “ಅಂತಹ ಸಂದರ್ಭಗಳಲ್ಲಿ ಸಿಗುವ ಅನುಭವ ವಿಶ್ವಕಪ್‌ ಅಂತಹ ಮೆಗಾ ಟೂರ್ನಮೆಂಟ್‌ ಗಳಲ್ಲಿ ಸಹಾಯವಾಗುತ್ತದೆ.

ದ್ವಿಪಕ್ಷೀಯ ಸರಣಿಗಳಲ್ಲಿ ಚೆನ್ನಾಗಿ ಆಡುತ್ತಾರೆ ಎಂದು ಗೊತ್ತಿದೆ.. ಇಂದು ನಮ್ಮ ಹುಡುಗರು ಆ ಒತ್ತಡವನ್ನು ಮೆಟ್ಟಿ ನಿಂತಿದ್ದಾರೆ..” ಎಂದು ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಹೊಗಳಿದ್ದಾರೆ. ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರ ಕ್ರೀಡಾ ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಅಕ್ಷರ್ ಪಟೇಲ್ 31 ರನ್ ಗಳಿಸಿದರು ಅಜೇಯರಾಗಿ ಉಳಿದರು. ಹಾರ್ದಿಕ್ ಪಾಂಡ್ಯ 29 ರನ್, ದೀಪಕ್ ಹೂಡಾ 41 ರನ್ ಹಾಗು ಇಶಾನ್ ಕಿಶನ್ 37 ರನ್ ಗಳಿಸಿದರು. ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಎರಡಂಕಿಯ ಸ್ಕೋರ್ ಅನ್ನು ಸಹ ದಾಟಲು ಸಾಧ್ಯವಾಗಲಿಲ್ಲ. ಎರಡನೇ ಟಿ20 ಪಂದ್ಯ ಗುರುವಾರ ಇಂದು ನಡೆಯಲಿದೆ.

Get real time updates directly on you device, subscribe now.