Kannada News: ದಿಡೀರ್ ಎಂದು ಕನ್ನಡಿಗ ರಿಷಬ್ ಶೆಟ್ಟಿ ಮೇಲೆ ಕಣ್ಣು ಹಾಕಿದ ಬಾಲಿವುಡ್ ಅಪ್ಸರೆ, ಜಾನ್ವಿ ಹೇಳಿದ್ದೇನು ಗೊತ್ತೇ??
Kannada News: ಬಾಲಿವುಡ್ ನಲ್ಲಿ ಸ್ಟಾರ್ ಗಳ ಸ್ಥಾನ ದಿನಕ್ಕೆ ಬದಲಾಗುತ್ತಾ ಹೋಗುತ್ತಿದೆ. ಇಂದು ಟಾಪ್ ನಲ್ಲಿರುವ ನಟರು ಹಾಗೂ ನಟಿಯರು ಪಾತಾಳ ಉರುಳುವುದನ್ನು ನಾವು ನೋಡಿದ್ದೇವೆ.ಹಾಗೆಯೇ ಕಲಾವಿದರ ಕುಟುಂಬದಿಂದಲೇ ಬಂದವರು ಕೂಡ ಸಾಕಷ್ಟು ಕಲಾವಿದರು ಇಂದು ಕಾಲಿ ಕೈಯಲ್ಲಿ ಕುಳಿತಿರುವ ಸಾಕಷ್ಟು ಉದಹರಣೆಗಳಿವೆ ನಮ್ಮ ಬಾಲಿವುಡ್ ಪ್ರಪಂಚದಲ್ಲಿ. ಇದೀಗ ಅಂತಹದ್ದೇ ಉದಾಹರಣೆ ನಟಿ ಎಂದರೆ “ಜಾನ್ವಿ ಕಪೂರ್” ಈ ನಟಿಯ ಪೋಷಕರು ಬಾಲಿವುಡ್ ನಲ್ಲಿ ಅಂದಿನಿಂದ ಇಂದಿನವರೆಗೂ ಟಾಪ್ ಸ್ಥಾನದಲ್ಲಿ ಇರುವವರು. ಈ ನಟಿ ಶುರುವಿನಲ್ಲಿ ಒಳ್ಳೆಯ ಪ್ರಾಜೆಕ್ಟ್ ಕೈ ಹಿಡಿದು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಸಕ್ಸಸ್ ಪಡೆಯುವಲ್ಲಿ ವಿಫಲರಾದರು.ಸಾಲು ಸಾಲು ಸಿನಿಮಾಗಳನ್ನು ನೀಡಿ ಈಗ ಕಾಲಿ ಕೈಯಲ್ಲಿ ಕುಳಿತಿದ್ದಾರೆ.
ಇತ್ತೀಚೆಗೆ ನಟಿ ಜಾನ್ವಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಮಾಲ್ಡೀವ್ಸ್ ನಲ್ಲಿ ತೆಗೆಸಿಕೊಂಡ ಹಾಟ್ ಫೋಟೋಸ್ ಹಾಕಿ ಇದರಲ್ಲಿ ಬರುವ ಹಣ ನನ್ನ ಇ ಎಂ ಐ ಗೆ ಸಾಕು ಎಂಬ ಟ್ಯಾಗ್ ಲೈನ್ ಎಲ್ಲರ ಉಬ್ಬೇರಿಸುವಂತೆ ಮಾಡಿತ್ತು.ಆ ನಂತರ ಈ ನಟಿ ಬಾಲಿವುಡ್ ಬಿಟ್ಟು ಸೌತ್ ಕಡೆ ಮುಖ ಮಾಡಲಿದ್ದಾರೆ ಹೆಚ್ಚಾಗಿ ಹೈದರಾಬಾದ್ ನಲ್ಲಿ ನೆಲಸಿರುವ ಜಾನ್ವಿ ಕಪೂರ್ ಸೌತ್ ಸಿನಿಮಾಗಳನ್ನು ಹೆಚ್ಚಾಗಿ ನೋ ಎಂಬ ಸುದ್ದಿ ಕೂಡ ಹೆಚ್ಚು ವೈರಲ್ ಆಗಿತ್ತು.ಆ ನಂತರ ಜಾನ್ವಿ ಅವರು “ಜೂನಿಯಾರ್ ಎನ್ ಟಿಆರ್” ಅವರ ಮುಂದಿನ ಸಿನಿಮಾಗೆ ನಾಯಕಿ ಆ ಎಂಬ ಸುದ್ದಿ ಹರಿದಾಡುತ್ತಿದೆ ಆದರೆ ಈ ವಿಚಾರದ ಕುರಿತು ಜೂನಿಯಾರ್ ಎನ್ ಟಿಆರ್ ಅವರ ಸಿನಿಮಾ ತಂಡವಾಗಲಿ ಅಥವಾ ಜಾನ್ವಿ ಅವರಾಗಲಿ ಅಧಿಕೃತವಾಗಿ ತಿಳಿಸಿಲ್ಲ.ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನಾವು ಕಾದುನೋಡಬೇಕಿದೆ.
ಇನ್ನು ಇತ್ತೀಚೆಗಷ್ಟೇ ಆಂಗ್ಲ ಮಾಧ್ಯಮದ ಮುಂದೆ ಬಂದು ಇಂಟರ್ವ್ಯೂ ನಲ್ಲಿ ಕೊಟ್ಟ ಹೇಳಿಕೆ ಇದೀಗ ಕನ್ನಡಿಗರ ಉಬ್ಬೇರಿಸುವಂತೆ ಮಾಡಿದೆ.ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು “ಕಾಂತಾರ”. ಈ ಸಿನಿಮಾ ವನ್ನು ನಮ್ಮ ಕನ್ನಡಿಗರು ಅಲ್ಲದೆ ಪರಭಾಷಿಗರು ಕೂಡ ಬಹಳ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಬಗ್ಗೆ ಪರಭಾಷಾ ಕಲಾವಿದರು ಕೂಡ ವೀಕ್ಷಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿದ್ದರೆ ಅದರಲ್ಲೂ ಈ ಸಿನಿಮಾದ ಕೊನೆಯ ೩೦ ಕ್ಷಣ ಎಲ್ಲರ ಮೈ ಜುಮ್ಮೆನಿಸುವಂತಿದೆ ಎಂದು ಎಲ್ಲರೂ ತಿಳಿಸಿದ್ದಾರೆ. ಇದೀಗ ಜಾನ್ವಿ ಅವರು ಕೂಡ ಈ ಸಿನಿಮಾ ವೀಕ್ಷಣೆ ಮಾಡಿ “ರಿಷಬ್” ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ಸೂಚಸಿದ್ದಾರೆ.ಅದರೊಟ್ಟಿಗೆ ಅವರ ನಿರ್ದೇಶನದಲ್ಲಿ ಕೆಲ್ಸ ಮಾಡುವ ಅವಕಾಶ ಸಿಕ್ಕರೆ ಬಹಳ ಸಂತೋಷವಾಗುತ್ತದೆ ಎಂಬ ಮಾತುಗಳನ್ನು ಕೂಡ ತಿಳಿಸಿದ್ದಾರೆ.ಸದ್ಯದಲ್ಲಿ ರಿಷಬ್ ಕಾಂತಾರ ಸಕ್ಸಸ್ ನಲ್ಲಿಯೇ ಇದ್ದು ಅವರ ಮುಂದಿನ ಚಿತ್ರದ ಸುದ್ದಿಯನ್ನು ಇದುವರೆಗೂ ತಿಳಿಸಿಲ್ಲ ಮುಂದೆ ಏನಾಗಬಹುದು ಎಂದು ನಾವೆಲ್ಲರೂ ಕಾದು ನೋಡಬೇಕಿದೆ.