Cricket News: ಶ್ರೀಲಂಕಾ ಸರಣಿಗೂ ಮುನ್ನವೇ ಭಾರತಕ್ಕೆ ಎರಡೆರಡು ಶಾಕ್: ಇವರು ಇಲ್ಲದೆ ಲಂಕವನ್ನು ಸೋಲಿಸಬಹುದೇ??

44

Get real time updates directly on you device, subscribe now.

Cricket News: ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಸಕ್ಸಸ್ ಫುಲ್ ಆಗಿ ಮುಗಿಸಿದೆ. ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಮುಂದಿನ ತಿಂಗಳು 3ನೇ ತಾರಿಕಿನಿಂದ ಇಂಡಿಯಾ ವರ್ಸಸ್ ಶ್ರೀಲಂಕಾ ವಿರುದ್ಧದ 3 ಏಕದಿನ ಮತ್ತು 3 ಟಿ20 ಸೀರೀಸ್ ಶುರುವಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಶ್ರೀಲಂಕಾ ಸೀರೀಸ್ ಗೆ ತಂಡವನ್ನು ಪ್ರಕಟ ಮಾಡಲಿದೆ ಮ್ಯಾನೇಜ್ಮೆಂಟ್.

ಇತ್ತೀಚೆಗೆ ವಜಾ ಆದ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯೇ ಶ್ರೀಲಂಕಾ ವಿರುದ್ಧದ ಸೀರೀಸ್ ಗೆ ತಂಡವನ್ನು ಆಯ್ಕೆ ಮಾಡಲಿದೆ. ಶ್ರೀಲಂಕಾ ವಿರುದ್ಧದ ಸೀರೀಸ್ ಇನ್ನು ಶುರುವಾಗಿಲ್ಲ, ಆದರೆ ಅದಕ್ಕಿಂತ ಮೊದಲೇ, ಭಾರತ ತಂಡಕ್ಕೆ ಎರಡು ದೊಡ್ಡ ಶಾಕ್ ಎದುರಾಗಿದೆ. ಸೀರೀಸ್ ಗೆ ಇಬ್ಬರು ಸ್ಟಾರ್ ಆಟಗಾರರು ಲಭ್ಯವಿರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Cricket News: ಕೊನೆಗೂ ಖಡಕ್ ಎಚ್ಚರಿಕೆ ಸಂದೇಶ ರವಾನೆ ಮಾಡಿದ ಬಿಸಿಸಿಐ: ಸ್ಟಾರ್ ಆಟಗಾರರಿಗೆ ಕೊಟ್ಟ ಸೂಚನೆ ಏನು ಗೊತ್ತೇ?? ಮೈದಾನಕ್ಕಿಳಿದ ಸಂಜು, ಚಾಹಲ್, ಸೂರ್ಯ.

ಇವರಿಬ್ಬರು ಪಂದ್ಯಕ್ಕೆ ಅಲಭ್ಯರಾಗಲು ಮುಖ್ಯವಾದ ಕಾರಣಗಳಿವೆ. ಈಗಾಗಲೇ ನಮಗೆ ಗೊತ್ತಿರುವ ಹಾಗೆ, ರೋಹಿತ್ ಶರ್ಮಾ ಅವರಿಗೆ ಬಾಂಗ್ಲಾದೇಶ್ ವಿರುದ್ಧದ ಎರಡನೇ ಪಂದ್ಯದ ನಡುವೆ ಅವರ ಕೈಬೆರಳಿಗೆ ಗಾಯ ಆಯಿತು. ಆ ಗಾಯ ಇನ್ನು ಪೂರ್ತಿಯಾಗಿ ವಾಸಿಯಾಗದ ಕಾರಣ, ಅವರು ಶ್ರೀಲಂಕಾ ವಿರುದ್ಧದ ಸೀರೀಸ್ ಗೆ ಅಲಭ್ಯರಾಗಲಿದ್ದಾರೆ. ಇನ್ನು ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ಮದುವೆ ಶ್ರೀಲಂಕಾ ವಿರುದ್ಧದ ಸೀರೀಸ್ ಸಮಯದಲ್ಲೇ ಇರುವುದರಿಂದ ಅವರು ಕೂಡ ಈ ಸೀರೀಸ್ ಗೆ ಲಭ್ಯವಿರುವುದಿಲ್ಲ. ಇದು ಟೀಮ್ ಇಂಡಿಯಾಗೆ ದೊಡ್ಡ ಶಾಕ್ ಆಗಿದ್ದು, ತಂಡದಲ್ಲಿ ಬೇರೆ ಯಾರೆಲ್ಲಾ ಇರುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Viral Video: ಕ್ಲಾಸ್ ರೂಮ್ ನಲ್ಲಿಯೇ ಮಸ್ತ್ ಡಾನ್ಸ್ ಮಾಡಿದ ಟೀಚರ್: ಡಾನ್ಸ್ ನೋಡಿದರೆ, ಇದೆ ಶಾಲೆಗೇ ಹೋಗ್ಬೇಕು ಅಂತೀರಾ.

Get real time updates directly on you device, subscribe now.