Biggboss Kannada: ಇಷ್ಟು ದಿನ ತಾಳ್ಮೆ ಇಂದ ಇದ್ದು, ರನ್ನರ್ ಅಪ್ ಆದ ನಿಜವಾದ ವಿನ್ನರ್ ರಾಕೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ? ಇದು ನಿಜಕ್ಕೂ ಮೋಸ ಎಂದ ಫ್ಯಾನ್ಸ್.

111

Get real time updates directly on you device, subscribe now.

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಬಿಗ್ ಬಾಸ್ ಮನೆಗೆ 18 ಸ್ಪರ್ಧಿಗಳು ಎಂಟ್ರಿ ಕೊಟ್ಟರು, ಅವರಲ್ಲಿ 9 ಪ್ರವೀಣರು ಮತ್ತು 9 ನವೀನ ಸ್ಪರ್ಧಿಗಳು ಇದ್ದರು. ಓಟಿಟಿ ಸೀಸನ್ ಇಂದ ಬಂದವರಲ್ಲಿ ರಾಕೇಶ್ ಅಡಿಗ ಬಹಳ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡರು ಎಂದು ಹೇಳಬಹುದು. ರಾಕೇಶ್ ಅವರು ಓಟಿಟಿ ಸೀಸನ್ ಇಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಟಾಸ್ಕ್ ಗಳಲ್ಲಿ ರಾಕೇಶ್ ಯಾವಾಗಲೂ ಮುಂದೆ ಇರುತ್ತಿದ್ದರು. ಅಷ್ಟೇ ಅಲ್ಲದೆ, ಮನರಂಜನೆಯಲ್ಲಿ ಸಹ ಮುಂದಿದ್ದರು ರಾಕೇಶ್. ಮನೆಯಲ್ಲಿ ಹೊಸ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದರು.

ಈ ಹಾಡುಗಳನ್ನು ಮನೆಯ ಸ್ಪರ್ಧಿಗಳು ಸಹ ಎಂಜಾಯ್ ಮಾಡುತ್ತಿದ್ದರು. ರಾಕೇಶ್ ಅಡಿಗ ಅವರು ತಮ್ಮ ಫ್ರೆಂಡ್ಶಿಪ್ ಮತ್ತು ತಾಳ್ಮೆ ಇಂದ ಕೂಡ ಹೆಚ್ಚು ಗುರುತಿಸಿಕೊಂಡಿದ್ದರು. ಯಾರೊಂದಿಗು ಗಲಾಟೆ ಮಾಡಿಕೊಳ್ಳದೆ, ಎಲ್ಲವನ್ನು ತಾಳ್ಮೆಯಿಂದಲೇ ಎದುರಿಸುತ್ತಿದ್ದ ರಾಕೇಶ್ ಅವರು ಓಟಿಟಿ ಸೀಸನ್ ಇಂದ ಟಿವಿ ಸೀಸನ್ ಗೆ ಬಂದು, ಇಲ್ಲಿಯೂ ಅದೇ ರೀತಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದರು. ರಾಕೇಶ್ ಅವರು ಎಲ್ಲದರಲ್ಲೂ ಮುಂದೆ ಇದ್ದಿದ್ದು ನೋಡಿ ಇವರೇ ವಿನ್ನರ್ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ರಾಕೇಶ್ ಅವರು ರನ್ನರ್ ಅಪ್ ಆದರು. ಹಲವರು ವಿನ್ನರ್ ಯಾರಾಗಬೇಕು ಎಂದು ಕೇಳಿದ್ದಕ್ಕೆ ರಾಕೇಶ್ ಅವರ ಹೆಸರನ್ನೇ ಹೇಳಿದ್ದರು. ಹೊರಗಿನ ಜನರು ಕೂಡ ರಾಕೇಶ್ ಅವರನ್ನು ತುಂಬಾ ಇಷ್ಟಪಟ್ಟಿದ್ದರು. ಆದರೆ ರಾಕೇಶ್ ಅವರು ಫಿನಾಲೆವರೆಗು ತಲುಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ರಾಕೇಶ್ ಅವರು 15 ವಾರ ಬಿಗ್ ಮನೆಯಲ್ಲಿದ್ದರು, ಇವರಿಗೆ ನೀಡಿರುವ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದ್ದು, ವಾರಕ್ಕೆ 20 ಸಾವಿರದ ಹಾಗೆ, 15 ವಾರಕ್ಕೆ 3 ಲಕ್ಷ ರೂಪಾಯಿ ಸಂಭಾವನೆಯನ್ನು ರಾಕೇಶ್ ಅವರಿಗೆ ನೀಡಲಾಗಿದೆ.

Get real time updates directly on you device, subscribe now.