Kannada News: ಸಮಂತಾ ಗೆ ಭರ್ಜರಿ ಶಾಕ್ ಕೊಟ್ಟು: ರಶ್ಮಿಕಾ ರವರನ್ನು ಅಖಾಡಕ್ಕೆ ಇಳಿಸಿದ ನಾಗ ಚೈತನ್ಯ: ರಶ್ಮಿಕಾ – ನಾಗ ಸೇರಿ ಮಾಡುತ್ತಿರುವುದೇನು ಗೊತ್ತೇ??

23

Get real time updates directly on you device, subscribe now.

Kannada News: ಗೌತಮ್ ಮೆನನ್ ಅವರು ನಿರ್ದೇಶನ ಮಾಡಿದ ಯೇ ಮಾಯ ಚೇಸಾವೆ ಸಿನಿಮಾ ನಾಗಚೈತನ್ಯ ಮತ್ತು ಸಮಂತಾ ಅವರ ಆರಂಭದ ದಿನಗಳಲ್ಲಿ ತೆರೆಕಂಡ ಸಿನಿಮಾ, ಈ ಜೋಡಿ ಮೊದಲ ಸಾರಿ ಜೊತೆಯಾಗಿ ನಟಿಸಿದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಯೇ ಮಾಯ ಚೇಸಾವೆ ಚಿತ್ರೀಕರಣ ಸಮಯದಲ್ಲಿ ಇಬ್ಬರಿಗು ಪರಿಚಯವಾಗಿ, ಸ್ನೇಹ, ಪ್ರೀತಿಯಾಗಿ, ಇಬ್ಬರು ಗಾಢವಾಗಿ ಪ್ರೀತಿಸಿ ಮದುವೆಯಾದರು. ಆದರೆ ಮದುವೆಯಾದ ನಾಲ್ಕೇ ವರ್ಷಕ್ಕೆ ಈ ಜೋಡಿ ದಿಢೀರ್ ವಿಚ್ಛೇದನ ಪಡೆದು, ಎಲ್ಲರಿಗೂ ಶಾಕ್ ನೀಡಿದರು. ವಿಚ್ಛೇದನ ಪಡೆದ ನಂತರ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ.. ಇದೀಗ ಸಿಕ್ಕಿರುವ ಹೊಸ ಸುದ್ದಿ ಏನೆಂದರೆ, ಗೌತಮ್ ಮೆನನ್ ಅವರು ಯೇ ಮಾಯ ಚೇಸಾವೆ ಸಿನಿಮಾದ ಸೀಕ್ವೆಲ್ ಮಾಡಲು ಯೋಚಿಸಿದ್ದಾರೆ.

ನಾಗಚೈತನ್ಯ ಅವರ ಜೊತೆ ಆ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಸಿನಿಮಾ ಮಾಡಬೇಕು ಎಂದರೆ ನಟಿ ಸಮಂತಾ ಮತ್ತು ನಾಗಚೈತನ್ಯ ಜೊತೆಯಾಗಿ ನಟಿಸಬೇಕು. ಆದರೆ ಈಗ ಇವರಿಬ್ಬರು ಜೊತೆಯಾಗಿ ನಟಿಸುವುದಿಲ್ಲ ಎನ್ನುವುದು ಗೊತ್ತಿರುವ ವಿಷಯ. ಈ ಕಾರಣಕ್ಕಾಗಿ, ಸಮಂತಾ ಅವರ ಜಾಗಕ್ಕೆ ಮತ್ತೊಬ್ಬ ನಾಯಕಿಯನ್ನು ಫಿಕ್ಸ್ ಮಾಡಲಾಗಿದೆಯಂತೆ. ಯೇ ಮಾಯ ಚೇಸಾವೆ 2 ಸಿನಿಮಾದಲ್ಲಿ ಸಮಂತಾ ಅವರು ನಟಿಸಿದ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನುವ ಹೊಸ ಸುದ್ದಿ ಈಗ ವೈರಲ್ ಆಗಿದೆ. ಸಿನಿಮಾದಲ್ಲಿ, ಜೆಸ್ಸಿ ಮತ್ತು ಕಾರ್ತಿಕ್ ಮದುವೆಯ ನಂತರ ಏನೆಲ್ಲಾ ಘಟನೆಗಳು ನಡೆಯುತ್ತದೆ ಎನ್ನುವುದನ್ನುಈ ಸಿನಿಮಾದಲ್ಲಿ ತೋರಿಸಲಾಗುತ್ತದೆಯಂತೆ. ಆದರೆ ತೆರೆಮೇಲೆ ಸಮಂತಾ ಅವರ ಬದಲು ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಇದನ್ನು ಓದಿ.. Biggboss Kannada: ಇದಪ್ಪ ವರಸೆ ಅಂದ್ರೆ: ಮನೆಯಲ್ಲಿ ದಿವ್ಯ – ಅರವಿಂದ್ ಒಟ್ಟಾಗಿ ನೋಡಿದವರು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?

ಪ್ರಸ್ತುತ, ನಟಿ ಸಮಂತಾ ಅವರು ಮೈಯೋಸಿಟಿಸ್ ಸಮಸ್ಯೆಯಿಂದ ಚಿಕಿತ್ಸೆ ಪಡೆದು, ಆರೋಗ್ಯ ಸರಿಪಡಿಸಿಕೊಳ್ಳುತ್ತಿದ್ದಾರೆ. ಆ ಕೆಲಸದಲ್ಲೇ ನಿರತರಾಗಿದ್ದಾರೆ. ಹಾಗಾಗಿ ಈಗ ಹೊಸ ಸಿನಿಮಾಗಳನ್ನು ಸಮಂತಾ ಅವರು ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಒಪ್ಪಿಕೊಂಡಿರುವ ಖುಷಿ ಸಿನಿಮಾ ಶೂಟಿಂಗ್ ಮುಗಿದ ಮೇಲೆ ಕಂಪ್ಲೀಟ್ ರೆಸ್ಟ್ ತೆಗೆದುಕೊಳ್ಳಲು ಪ್ಲಾನ್ ಮಾಡಿದ್ದಾರೆ ಸಮಂತಾ. ಹಾಗಾಗಿ ಸಮಂತಾ ಹೊಸ ಸಿನಿಮಾ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಈಗ ಇಲ್ಲ.. ಈ ಕಾರಣದಿಂದ ಅವರ ಸ್ಥಾನ ಈಗ ರಶ್ಮಿಕಾ ಅವರಿಗೆ ಸಿಕ್ಕಿದೆ. ನಾಗಚೈತನ್ಯ ಮತ್ತು ರಶ್ಮಿಕಾ ಜೋಡಿಯಾದರೆ ಈ ಸಿನಿಮಾ ಕ್ರೇಜ್ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು..ವಾರಿಸು ನಂತರ ರಶ್ಮಿಕಾ ಅವರು ನಾಗಚೈತನ್ಯ ಅವರ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇದನ್ನು ಓದಿ..Kannada News: ನನ್ನ ಬಿಟ್ಟುಹೋದಳು, ಆರೋಗ್ಯ ಜೊತೆ ಜೀವನ ಕೂಡ ಹೋಯ್ತು ಎಂದುಕೊಂಡಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ. ಏನಾಗಿದೆ ಗೊತ್ತೇ??

Get real time updates directly on you device, subscribe now.