Kannada News: ಎರಡನೇ ಮದುವೆ ಬೇಡ ಎಂದು, ಮಿಂಚಲು ಆರಂಭಿಸಿದ ಮೀನಾ, ಈಗ ಮೀನಾ ಗೆ ಎಷ್ಟು ಸಂಭಾವನೆ ಕೊಡಬೇಕಂತೆ ಗೊತ್ತೇ??
Kannada News: ನಟಿ ಮೀನಾ ದಕ್ಷಿಣ ಭಾರತ ಚಿತ್ರರಂಗದಲ್ಲಿ 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸಕ್ರಿಯರಾಗಿರುವ ನಟಿ. ಇವರು ಮೊದಲಿಗೆ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಂತರದ ವರ್ಷಗಳಲ್ಲಿ ಹೀರೋಯಿನ್ ಆಗಿ ಬಂದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಮೀನಾ ಅವರಿಗೆ 46 ವರ್ಷ, ಆದರೆ ಈಗಲೂ ಅವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಆಗಿಲ್ಲ. ಅದರಿಂದಾಗಿ ಮೀನಾ ಅವರು ಈಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ನಟಿ ಮೀನಾ ಅವರು ಎಲ್ಲಾ ಭಾಷೆಗಳಲ್ಲೂ ಅಲ್ಲಿನ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸಿದ್ದಾರೆ. ತಮಿಳಿನಲ್ಲಿ ರಜನಿಕಾಂತ್, ಕಮಲ್ ಹಾಸನ್, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಅವರೊಡನೆ ಹಲವು ಸಿನಿಮಾ, ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸಾಹಸಸಿಂಹ ವಿಷ್ಣುವರ್ಧನ್ ಸೇರಿದಂತೆ ಸುದೀಪ್ ಅವರೊಡನೆ ಕೂಡ ನಟಿಸಿದ್ದಾರೆ. 90ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದಾರೆ. ಆದರೆ ಇತ್ತೀಚೆಗೆ ಮೀನಾ ಅವರು ಕೋವಿಡ್ ಕಾರಣದಿಂದ ತಮ್ಮ ಪತಿ, ಸಾಗರ್ ಅವರನ್ನು ಕಳೆದುಕೊಂಡರು. ಅದಾದ ನಂತರ ಮೀನ ಅವರು ಸಿನಿಮಾ ಇಂದ ದೂರವೇ ಉಳಿದಿದ್ದರು. ಇದನ್ನು ಓದಿ..Kannada News: ಅಸಲಿಗೆ ಬಂಧನ ಸಿನೆಮಾಗೆ ವಿಷ್ಣುವರ್ಧನ್ ಮೊದಲನೇ ಆಯ್ಕೆಯೇ ಅಲ್ಲ, ಮತ್ಯಾರು ಆಗಿದ್ದರು ಗೊತ್ತೇ??
ಮಾನಸಿಕ ನೊಂದಿದ್ದ ಮೀನಾ ಅವರು ಒಂದು ಬ್ರೇಕ್ ಪಡೆದು ಮತ್ತೆ ಈಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಕೂಡ ಇದೆ. ಹಾಗಾಗಿ ಮೀನಾ ಅವರು ಈಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೀನಾ ಅವರು ಈಗ ಒಂರು ಸಿನಿಮಾಗೆ ಬರೋಬ್ಬರಿ 20 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ತಮ್ಮ ಪರಿಸ್ಥಿತಿ ಬಗ್ಗೆ ಕಾಳಜಿ ವಹಿಸುತ್ತಿರುವ ಮೀನಾ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.. ಇದನ್ನು ಓದಿ.. Kannada News: 20 ವರ್ಷದ ನಟಿಯ ಮರಣೋತರ ಪರೀಕ್ಷೆಯಲ್ಲಿ ಬಯಲಾಯ್ತು ಕಹಿ ಸತ್ಯ: ಕಾರಣ ಏನು ಅಂತೇ ಗೊತ್ತೇ??