Cricket News: ಮೂರನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸ್ಕೊಂಡ ಅಂಧರ ತಂಡ. ಈಗಲಾದರೂ ಮೆಚ್ಚುಗೆ ಸಿಗುವುದೇ?

68

Get real time updates directly on you device, subscribe now.

Cricket News: ನಮ್ಮ ಭಾರತ ದೇಶದಲ್ಲಿ ಕ್ರಿಕೆಟ್ ಎಂದರೆ ಪ್ರತಿಯೊಬ್ಬರಿಗೂ ಇಷ್ಟವೆ. ಎಲ್ಲರೂ ಬಹಳ ಇಷ್ಟಪಟ್ಟು ಕ್ರಿಕೆಟ್ ಆಡುತ್ತಾರೆ. ಈಗ ಕ್ರಿಕೆಟ್ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಕೂಡ ಇದೆ, ಅಂಧರಿಗೂ ಕೂಡ ಇದೆ. ಅಂಧರ ಕ್ರಿಕೆಟ್ ನಲ್ಲಿ ಈ ವರ್ಷ ನಡೆದ ಟಿ20 ವಿಶ್ವಕಪ್ (T20 World Cup for The Blind) ನಲ್ಲಿ ಭಾರತ ತಂಡವು ವರ್ಲ್ಡ್ ಕಪ್ ಗೆದ್ದಿದೆ. ಈ ಮೂಲಕ ಟೀಮ್ ಇಂಡಿಯಾ ಅಂಧರ ತಂಡವು ಮೂರನೇ ಸಾರಿ ಟಿ20 ವಿಶ್ವಕಪ್ ಗೆದ್ದಿದೆ.

ಈ ಮೊದಲು ಅಂಧರ ತಂಡವು 2012 ರಲ್ಲಿ ಮತ್ತು 2017 ವರ್ಲ್ಡ್ ಕಪ್ ಟ್ರೋಫಿ ಗೆದ್ದಿತ್ತು. ಈ ವರ್ಷ ಅಂಧರ ವರ್ಲ್ಡ್ ಕಪ್ ನಲ್ಲಿ ಫಿನಾಲೆಯಲ್ಲಿ ಭಾರತ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯ ನಡೆಯಿತು, ಇದರಲ್ಲಿ ನಮ್ಮ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ, 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 277 ರನ್ಸ್ ಗಳಿಸಿತು. ಟೀಮ್ ಇಂಡಿಯಾದಲ್ಲಿ ಅತ್ಯುತ್ತಮವಾಗಿ ಆಡಿದ್ದು ರಮೇಶ್ (Ramesh) ಮತ್ತು ಅಜಯ್ ಕುಮಾರ್ ರೆಡ್ಡಿ (Ajay Kumar Reddy) ಅವರು, ಇವರಿಬ್ಬರು ಕೂಡ ಸೆಂಚುರಿ ಭಾರಿಸಿದರು. ರಮೇಶ್ ಅವರು ಬರೋಬ್ಬರಿ 137 ರನ್ಸ್ ಗಳಿಸಿದರು. ಇದನ್ನು ಓದಿ..Jio Plans Kannada: ಕಡಿಮೆ ಬೆಳೆಗೆ ಮತ್ತೊಂದು ಆಫರ್ ಕೊಟ್ಟ ಜಿಯೋ: ಕೇವಲ 100 ರುಪಾಯಿಗೆ ನೀಡುತ್ತಿರುವ ಯೋಜನೆ ಯಾವುದು ಗೊತ್ತೇ??

ಅಜಯ್ ಕುಮಾರ್ ಅವರು 50 ಎಸೆತಗಳಲ್ಲಿ 100 ರನ್ಸ್ ಗಳಿಸಿದರು. ಈ ಮೂಲಕ ಹೆಚ್ಚು ಸ್ಕೋರ್ ಮಾಡಿದರು. ಬಾಂಗ್ಲಾದೇಶ್ ತಂಡ 3 ವಿಕೆಟ್ಸ್ ನಷ್ಟಕ್ಕೆ ಕೇವಲ 157 ರನ್ಸ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇದರಿಂದ ಭಾರತ ತಂಡ ಗೆದ್ದಿತ್ತು, ರಮೇಶ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ನೀಡಲಾಯಿತು. ಮೂಲಕ ಭಾರತ ಅಂಧರ ತಂಡ ವರ್ಲ್ಡ್ ಕಪ್ ಟ್ರೋಫಿ ಗೆದ್ದಿರುವುದು ಎಲ್ಲರಿಗೂ ಬಹಳ ಸಂತೋಷ ತಂದಿದೆ. ನೆಟ್ಟಿಗರು ಕೂಡ ಈ ತಂಡದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಓದಿ.. Kannada News: ಇದಪ್ಪ ಅದೃಷ್ಟ ಅಂದ್ರೆ, ಕೊಹ್ಲಿ ಜೊತೆ ರೋಹಿತ್ ಗೂ ಸಂಭಾವನೆ ಹೆಚ್ಚು ಮಾಡಲು ಮುಂದಾದ ಬಿಸಿಸಿಐ. ಈ ಬಾರಿ ಅದೆಷ್ಟು ಕೋತಿ ಗೊತ್ತೇ?

Get real time updates directly on you device, subscribe now.