Kannada News: ಗುಜರಾತ್ ನಲ್ಲಿ ಮೋದಿ ಗೆದ್ದು ಬೀಗಿದ ನಂತರ, ರಾಜ್ಯದಲ್ಲಿ ನಡುಕ ಆರಂಭ. ಕೂಡಲೇ HDK ಟೀಕೆ ಮಾಡಿದ್ದು ಹೇಗೆ ಗೊತ್ತೇ?
Kannada News: ಗುಜರಾತ್ (Gujarat) ನಲ್ಲಿ ಈಗ ಬಿಜೆಪಿ (BJP) ಪಕ್ಷ ಗೆದ್ದಿದ್ದು, ಮೋದಿಜಿ ಮೇಲುಗೈ ಸಾಧಿಸಿದ್ದಾರೆ. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ (HDK) ಅವರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಗೆಲ್ಲುತ್ತೆ ಅಂತ ನಿರೀಕ್ಷೆ ಮಾಡಿದ್ವಿ, ಕಾಂಗ್ರೆಸ್ (Congress) ಕೂಡ ಅದೇ ನಿರೀಕ್ಷೆಯಲ್ಲೇ ಇತ್ತು. ಗುಜರಾತ್ ನಲ್ಲಿ ಕಾಂಗ್ರೆಸ್ ಹಾಗು ಬೇರೆ ವಿರೋಧ ಪಕ್ಷಗಳ ಪವರ್ ಕಡಿಮೆ ಆಗಿದೆ. ಗುಜರಾತ್ ನಲ್ಲಿ ಗೆದ್ದಿರುವುದು ಬಿಜೆಪಿ ಮಾಡಿರುವ ದೊಡ್ಡ ಸಾಧನೆ ಅಲ್ಲ. ಇದು ನಮ್ಮ ರಾಜ್ಯಕ್ಕೆ ದಿಕ್ಸೂಚಿ ಆಗುವುದಿಲ್ಲ..ಎಂದಿದ್ದಾರೆ ಕುಮಾರಸ್ವಾಮಿ ಅವರು.
ನಂತರ ಎಲೆಕ್ಷನ್ ಬಗ್ಗೆ ಮಾತನಾಡಿ, ಗುಜರಾತ್ ಮತ್ತು ಕರ್ನಾಟಕಕ್ಕೂ ಎರಡಕ್ಕೂ ಬಹಳ ಅಂತರ ಇದೆ. ಗುಜರಾತ್ ಮತ್ತು ಇಲ್ಲಿನ ರಾಜಕಾರಣ ಎರಡು ಕೂಡ ಬೇರೆ ಬೇರೆಯಾಗಿದೆ. ಅಲ್ಲಿನ ರಿಸಲ್ಟ್ ನೋಡಿ ಕನ್ನಡದ ಜನ ವೋಟ್ ಮಾಡುವುದಿಲ್ಲ. ಕರ್ನಾಟಕದಲ್ಲಿ (Karnataka) ಮೋದಿ (Modi) ಮ್ಯಾಜಿಕ್ ಕೆಲಸ ಮಾಡೋದಿಲ್ಲ, ಅವರು ಬಾರಿ ಆಕಾಶ ತೋರ್ಸಿ ಹೋಗ್ತಾರೆ ಅಂತ ನಮ್ಮ ಜನರಿಗೆ ಗೊತ್ತು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ಹಸಿರು ಸೀರೆಯಲ್ಲಿ ಒಂದು ಕ್ಷಣ ಖುಷ್ಬೂ ನೆನಪು ಬರುವಂತೆ ಮೆಂಟಲ್ ಏರಿಸುವ ಲುಕ್ ನೀಡಿದ ನಿಷ್ವಿಕ. ಹೇಗಿದೆ ಗೊತ್ತೇ ಫೋಟೋಸ್??
ಹಿಮಾಚಲ ಪ್ರದೇಶದ ಎಲೆಕ್ಷನ್ ರಿಸಲ್ಟ್ ಕೂಡ ಹೊರಬಂದಿದ್ದು, ಅದರ ಬಗ್ಗೆ ಮಾತನಾಡಿ, ಅಲ್ಲಿನ ಜನರು ಒಂದು ಸಾರಿ ಕಾಂಗ್ರೆಸ್ ಗೆ ಮತ್ತು ಬಿಜೆಪಿಗೆ ಎರಡು ಪಕ್ಷಕ್ಕೂ ಒಂದೊಂದು ಸಾರಿ ಅಧಿಕಾರ ಕೊಡ್ತಾ ಬಂದಿದ್ದಾರೆ. ಅದೇ ಈಗಲೂ ಮುಂದುವರೆದಿದೆ ಎಂದು ಹೇಳಿದ್ದಾರೆ ಹೆಚ್.ಡಿ.ಕೆ..ಒಟ್ಟಿನಲ್ಲಿ ಬೇರೆ ರಾಜ್ಯಗಳ ಎಲೆಕ್ಷನ್ ರಿಸಲ್ಟ್ ಗಳು ನಮ್ಮ ರಾಜ್ಯದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವ ಬೀರಿದೆ. ಇದನ್ನು ಓದಿ.. Kannada News: ಚಿತ್ರರಂಗದ ಮತ್ತೊಂದು ಮುಖ ಕಾಸ್ಟಿಂಗ್ ಕೋಚ್ ಅನ್ನು ವೈಯಕ್ತಿಯವಾಗಿ ಎದುರಿಸಿದ ಟಾಪ್ ನಟಿಯರು ಯಾರ್ಯಾರು ಗೊತ್ತೆ??