Kannada News: ಬೆಳಗಾವಿ ತಂಟೆಗೆ ಕರ್ನಾಟಕದ ಕಡೆಯಿಂದ ಖಡಕ್ ಉತ್ತರ: ಕನ್ನಡಿಗರು ಮೇಲುಗೈ ಸಾದಿಸಿದ ಮೇಲೆ ಮಹಾರಾಷ್ಟ್ರ ಸಿಎಂ ಮಾಡಿದ್ದೇನು ಗೊತ್ತೇ??

30

Get real time updates directly on you device, subscribe now.

Kannada News: ಮಹಾರಾಷ್ಟ್ರ (Maharashtra) ಮತ್ತು ಕರ್ನಾಟಕದ (Karnataka) ಗಡಿ ಸಮಸ್ಯೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಪ್ರಸ್ತುತ ಗಡಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕರ್ನಾಟಕದಲ್ಲಿ ಕನ್ನಡಿಗರು ಮಹಾರಾಷ್ಟ್ರದವರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇಲ್ಲಿ ರಣಕಹಳೆ ಮತ್ತು ಸಮರ ಶುರುವಾಗುತ್ತಿದ್ದ ಹಾಗೆಯೇ, ಮಹಾರಾಷ್ಟ್ರದಲ್ಲಿ ಬಿಸಿ ಮುತ್ತಿದ್ದು, ಅಲ್ಲಿನ ಸಿಎಂ ಏಕನಾಥ್ ಶಿಂದೆ (Ekanath Shinde) ಅವರು ಕರ್ನಾಟಕದ ಸಿಎಂ ಬಸವರಾರ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ..

ಎರಡು ರಾಜ್ಯಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ, ಇಂಥಹ ಸಮಯದಲ್ಲಿ ಶಾಂತಿ ಮತ್ತು ಕಾನೂನಿನ ಸೌಹಾರ್ದತೆ ಕಾಪಾಡುವುದು ಮುಖ್ಯ, ಎರಡು ರಾಜ್ಯಗಳಲ್ಲಿ ಶಾಂತಿ ಇರಲಿ ಎಂದು ಮಹಾರಾಷ್ಟ್ರ ಸಿಎಂ ಮನವಿ ಮಾಡಿದ್ದು, ಅದಕ್ಕೆ ನಮ್ಮ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೂಡ ಒಪ್ಪಿಗೆ ನೀಡಿದ್ದು, ಈ ವಿಷಯದ ಬಗ್ಗೆ ಟ್ವೀಟ್ ಮಾಡಿ, “ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ನನ್ನ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದರು, ಎರಡು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಾವಿಬ್ಬರು ಒಪ್ಪಿದ್ದೇವೆ. ರಾಜ್ಯಗಳಲ್ಲಿ ಸೌಹಾರ್ದತೆ ಇರುತ್ತದೆ, ಆದರೆ ಗಡಿ ವಿಚಾರದಲ್ಲಿ ನಮ್ಮ ನಿಲುವು ಬದಲಾಗುವುದಿಲ್ಲ. ಕಾನೂನಿನ ಹೋರಾಟ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತದೆ..” ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.. ಇದನ್ನು ಓದಿ..Biggboss Kannada: ಈ ಬಾರಿಯ ಬಿಗ್ ಬಾಸ್ 9 ರ ನಂಬರ್ 1 ಶ್ರೀಮಂತ ಸ್ಪರ್ಧಿ ಯಾರು ಗೊತ್ತೇ?? ನೀವು ಊಹೆ ಕೂಡ ಮಾಡಿರಲ್ಲ.

ಗಡಿ ವಿವಾದಗಳು ಹೆಚ್ಚಾಗುತ್ತಿದ್ದ ಹಾಗೆ, ಇಲ್ಲಿ ಕರ್ನಾಟಕದಲ್ಲಿ ಕನ್ನಡಿಗರು ಮಹಾರಾಷ್ಟ್ರದ ವಿರುದ್ಧ ಸಿಡಿದೆದ್ದಿದ್ದಾರೆ, ಅತ್ತ ಮಹಾರಾಷ್ಟ್ರದಲ್ಲಿ ಎಂ.ಇ.ಎಸ್ ಕರ್ಣಾಟಕದ ವಿರುದ್ಧ ರೊಚ್ಚಿಗೆದ್ದಿದೆ. ಕರ್ನಾಟಕದಲ್ಲಿ ಗಡಿ ವಿವಾದ ಶುರುವಾಗುತ್ತಿದ್ದ ಹಾಗೆಯೇ, ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂದೆ ಅವರು, ಇದ್ದಕ್ಕಿದ್ದ ಹಾಗೆ ಸರ್ವಪಕ್ಷ ಸಭೆ ಕರೆದು, ಗಡಿಗೆ ಸಂಬಂಧಿಸಿದ ವಿಚಾರದಲ್ಲಿ, ಕಾನೂನು ಹೋರಾಟದ ವಿಷಯವನ್ನು ನೋಡಿಕೊಳ್ಳಲು ಇಬ್ಬರು ಸಚಿವರನ್ನು ನೇಮಿಸಿದ್ದರು. ಹೀಗೆ ಮಹಾರಾಷ್ಟ್ರ ಒಂದಲ್ಲ ಒಂದು ವಿಚಾರಗಳನ್ನು ಮಾಡುತ್ತಲೇ ಬಂದಿದ್ದು, ಮುಂದಿನ ದಿನಗಳಲ್ಲಿ ಇದರ ತಿರುವು ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada Astrology: ಮನೆಯಲ್ಲಿರುವ ಸಕ್ಕರೆ ಬಳಸಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಮಾಡಿ ಬಿಡ್ತೀರಾ. ಏನಾಗುತ್ತದೆ ಗೊತ್ತೆ?

Get real time updates directly on you device, subscribe now.