Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ಹಳೆಯ ವಸ್ತುಗಳನ್ನು ಇಡಬೇಡಿ, ವಸ್ತು ದೋಷ ಸೃಷ್ಟಿಯಾಗುತ್ತದೆ, ಯಾವ್ಯಾವು ಗೊತ್ತೇ??

32

Get real time updates directly on you device, subscribe now.

Kannada Astrology: ಕೆಲವು ಜನರು ತಮ್ಮ ಮನೆಗಳಲ್ಲಿ ಕೆಲವು ವಸ್ತುಗಳನ್ನು ಬಳಸದೆ ಇದ್ದರು ಕೂಡ, ಅವುಗಳನ್ನು ಹಾಗೆಯೇ ಇಟ್ಟಿರುತ್ತಾರೆ. ಅದರಿಂದ ಮನೆಯಲ್ಲಿ ವಾಸ್ತುದೋಷಗಳು ಉಂಟಾಗಬಹುದು, ಮನೆಯಲ್ಲಿ ನೆಗಟಿವ್ ಎನರ್ಜಿ ಶುರುವಾಗಬಹುದು. ಇದು ನಿಮ್ಮ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿಯನ್ನು ದೂರ ಮಾಡಬಹುದು. ಹಾಗಾಗಿ ಅಂಥ ಕೆಲವು ಮುರಿದು ಹೋಗಿರುವ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು :- ಮನೆಗಳಲ್ಲಿ ಉಪಯೋಗಿಸದೆ ಇಡುವ ಕಬ್ಬಿಣದ ವಸ್ತುಗಳನ್ನು ಸ್ಟೋರ್ ರೂಮ್ ನಲ್ಲಿ ಇಟ್ಟಿರುತ್ತಾರೆ, ಅವುಗಳನ್ನು ಬಳಸದೆ ಬಹಳ ಸಮಯ ಹಾಗೆಯೇ ಇಟ್ಟರೆ, ತುಕ್ಕು ಹಿಡಿಯುತ್ತದೆ. ಈ ರೀತಿ ತುಕ್ಕು ಹಿಡಿಯುವ ವಸ್ತುಗಳು ಮನೆಯಲ್ಲಿ ನೆಗಟಿವ್ ಎನರ್ಜಿ ತರುತ್ತದೆ. ಹಾಗಾಗಿ ಅವುಗಳನ್ನು ಮನೆಯಲ್ಲಿ ಇಡಬಾರದು. ಮೊದಲು ಅವುಗಳನ್ನು ಹೊರಗೆ ಇಡಿ.
ಹಿತ್ತಾಳೆ ಪಾತ್ರೆ :- ಹಿಂದಿನ ಕಾಲದಲ್ಲಿ ಹಿರಿಯರು ಹಿತ್ತಾಳೆ ಪಾತ್ರೆಗಳನ್ನು ಬಳಸುತ್ತಿದ್ದರು, ಕಿರಿಯರಿಗೆ ಗಿಫ್ಟ್ ಆಗಿ ಕೂಡ ನೀಡುತ್ತಿದ್ದರು, ಅವುಗಳನ್ನು ಹಿರಿಯರ ನೆನಪಿಗಾಗಿ ಬಳಸದೆ ಇದ್ದರು ಕೂಡ ಹಾಗೆಯೇ ಇಟ್ಟಿರುತ್ತಾರೆ. ಆದರೆ ತುಂಬಾ ದಿನಗಳ ಕಾಲ ಇವುಗಳನ್ನು ಇಟ್ಟರೆ, ಶನಿದೇವರು ಕತ್ತಲೆಯಲ್ಲಿರುವ ಹಿತ್ತಾಳೆ ಪಾತ್ರೆಗಳಲ್ಲಿ ನೆಲೆಸಿರುತ್ತಾನೆ. ಇದರಿಂದ ಶನಿದೋಷಕ್ಕೆ ಕಾರಣವಾಗಬಹುದು. ಹಾಗಾಗಿ ಹಿತ್ತಾಳೆ ಪಾತ್ರೆಗಳನ್ನು ಮನೆಯಲ್ಲಿ ಇಡಬೇಡಿ. ಇದನ್ನು ಓದಿ..Kannada Astrology: ಆಮೆಯ ಉಂಗುರ ಧರಿಸಿದರೆ ನಿಜಕ್ಕೂ ಒಳ್ಳೆಯದ?? ಧರಿಸುವುದರಿಂದ ನಿಜಕ್ಕೂ ಲಾಭ ಆಗುತ್ತದೆಯೇ?

ಹೊಲಿಗೆ ಯಂತ್ರ :- ಹೊಲಿಗೆ ಯಂತ್ರಗಳನ್ನು ಕಲಿಯಲು ಅಥವಾ ಬಟ್ಟೆ ಹೊಲೆಯುತ್ತಾರೆ. ಆದರೆ ಕೆಲ ಸಮಯದ ನಂತರ ಅವುಗಳನ್ನು ಹಾಗೆಯೇ ಇಟ್ಟಿರುತ್ತಾರೆ. ಆದರೆ ಇಂಥ ಯಂತ್ರಗಳನ್ನು ಹಾಗೆ ಇಡುವುದರಿಂದ ಮನೆಯಲ್ಲಿ ನೆಗಟಿವ್ ಎನರ್ಜಿ ಬರುತ್ತದೆ, ಇದರಿಂದ ರಾಹು ಮತ್ತು ಶನಿ ದೋಷ ಕೂಡ ಉಂಟಾಗಬಹುದು.
ಉಪಯೋಗಿಸದ ಹಾಸಿಗೆ :- ಮದುವೆ ಸಮಯದ ನೆನಪು ಅಥವಾ ಇನ್ನಿತರ ಕಾರಣಗಳಿಂದ ಹಾಸಿಗೆಯನ್ನು ಬಳಸದೆ ಇದ್ದರು ಕೂಡ ಹಾಗೆಯೇ ಇಟ್ಟಿರುತ್ತಾರೆ, ಈ ರೀತಿ ಹಾಸಿಗೆಯನ್ನು ಸುತ್ತಿ ಇಡುವುದರಿಂದ ಕ್ರಿಮಿ ಕೀಟಗಳು ಬಂದು ಮನೆಯವರ ಆರೋಗ್ಯಕ್ಕೆ ತೊಂದರೆ ಮಾಡುತ್ತದೆ, ಅಷ್ಟೇ ಅಲ್ಲದೆ ಬುಧ ಗ್ರಹದ ದೋಷ ಕೂಡ ಆಗುತ್ತದೆ. ಇದನ್ನು ಓದಿ.. Kannada Astrology: ಮನೆಯಲ್ಲಿರುವ ಸಕ್ಕರೆ ಬಳಸಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಮಾಡಿ ಬಿಡ್ತೀರಾ. ಏನಾಗುತ್ತದೆ ಗೊತ್ತೆ?

Get real time updates directly on you device, subscribe now.