Cricket News: ಹೀನಾಯವಾಗಿ ಸರಣಿ ಸೋತರೂ ಕೂಡ ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮ: ವೈಯಕ್ತಿಕವಾಗಿ ಮಾಡಿದ ಸಾಧನೆ ಏನು ಗೊತ್ತೇ?

30

Get real time updates directly on you device, subscribe now.

Cricket News: ನಿನ್ನೆ ಡಿಸೆಂಬರ್ 7ರಂದು ಬಾಂಗ್ಲಾದೇಶದ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಎರಡನೇ ಓಡಿಐ ನಲ್ಲಿ ಟೀಮ್ ಇಂಡಿಯಾ ಸೋತು ಮುಖಭಂಗವಾಗಿದೆ. ಸತತವಾಗಿ ಎರಡು ಪಂದ್ಯಗಳನ್ನು ಸೋತ್ತಿದ್ದು, 2-0 ಅಂತರದಲ್ಲಿ ಬಾಂಗ್ಲಾದೇಶ್ ತಂಡ (India vs Bangladesh) ಈ ಸೀರೀಸ್ ಗೆದ್ದಿದೆ. ಬಾಂಗ್ಲಾದೇಶ್ ತಂಡ 272 ರನ್ ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿತು. ನಿನ್ನೆಯ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ (Shreyas Iyer) 82 ರನ್ಸ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಕೆ.ಎಲ್.ರಾಹುಲ್ (K L Rahul), ವಿರಾಟ್ ಕೊಹ್ಲಿ (Virat Kohli), ಅಕ್ಷರ್ ಪಟೇಲ್ (Axar Patel) ಕಳಪೆ ಪ್ರದರ್ಶನ ತೋರಿದರು.

ಪಂದ್ಯದ ಸೋಲು ಮತ್ತು ಗೆಲುವು ಒಂದು ಕಡೆ ಇದೆ, ಅದರ ಜೊತೆಗೆ ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಹೊಸ ಸಾಧನೆ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಕೈಗೆ ಇಂಜುರಿ ಆಗಿತ್ತು, ಸ್ಟಿಚಿ ಹಾಕಿಸಿ, ಇಂಜೆಕ್ಷನ್ ತೆಗೆದುಕೊಂಡೆ ಮೈದಾನಕ್ಕೆ ಬಂದಿದ್ದರು, ಅಂತಹ ಪರಿಸ್ಥಿತಿಯಲ್ಲೂ ಬಹಳ ಧೈರ್ಯವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅವರು 51 ರನ್ಸ್ ಭಾರಿಸಿದರು. ಮೂರು ಬೌಂಡರಿ ಮತ್ತು 5 ಸಿಕ್ಸರ್ ಚಚ್ಚಿದರು ರೋಹಿತ್ ಶರ್ಮ. ಈ ಮೂಲಕ ರೋಹಿತ್ ಅವರು ಹೊಸ ದಾಖಲೆ ಬರೆದಿದ್ದಾರೆ. ಇದನ್ನು ಓದಿ..Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಕಾಂತಾರ ನೋಡಿ ತೆಲುಗಿನ ಆಂಕರ್ ಅನುಸೂಯ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ಇದು ರೋಹಿತ್ ಶರ್ಮಾ ಅವರ 428ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇವುಗಳಲ್ಲಿ 502 ಸಿಕ್ಸರ್ ಗಳನ್ನು ಭರ್ಜರಿಯಾಗಿ ಭಾರಿಸಿದ್ದಾರೆ. ಭಾರತ ತಂಡದ ಆಟಗಾರರಲ್ಲಿ ಇವರ ಹಿಂದಿನ ಸ್ಥಾನದಲ್ಲಿ ಇರುವವರು ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ (M S Dhoni) ಅವರು 359 ಸಿಕ್ಸರ್ ಭಾರಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರು ಅವರಿಗಿಂತ ಮೊದಲ ಸ್ಥಾನದಲ್ಲಿ ಇದ್ದಾರೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಇರುವುದು ವೆಸ್ಟ್ ಇಂಡೀಸ್ ಆಟಗಾರ ಕ್ರೀಸ್ ಗೇಯ್ಲ್, ಇವರು 533 ಸಿಕ್ಸರ್ ಭಾರಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಇದನ್ನು ಓದಿ.. Biggboss Kannada: ಈ ಬಾರಿಯ ಬಿಗ್ ಬಾಸ್ 9 ರ ನಂಬರ್ 1 ಶ್ರೀಮಂತ ಸ್ಪರ್ಧಿ ಯಾರು ಗೊತ್ತೇ?? ನೀವು ಊಹೆ ಕೂಡ ಮಾಡಿರಲ್ಲ.

Get real time updates directly on you device, subscribe now.