Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಕಾಂತಾರ ನೋಡಿ ತೆಲುಗಿನ ಆಂಕರ್ ಅನುಸೂಯ ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

48

Get real time updates directly on you device, subscribe now.

Kannada News: ಕಾಂತಾರ (Kantara), ಈ ಸಿನಿಮಾ ದಿನದಿಂದ ಬೆಳೆಯುತ್ತಲೇ ಹೋಗುತ್ತಿದೆ ಹೊರತು, ಕಾಂತಾರ ಸಿನಿಮಾದ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಬಿಡುಗಡೆ ಆದ ದಿನದಿಂದ ಇಂದಿನವರೆಗೂ ಕಾಂತಾರ ಕ್ರೇಜ್ ಹೆಚ್ಚುತ್ತಲೆ ಇದೆ. ದಿನದಿಂದ ಸಿನಿಮಾ ನೋಡುವ ಸಿನಿಪ್ರಿಯರು ಜಾಸ್ತಿ ಆಗುತ್ತಲೇ ಇದ್ದಾರೆ. ನಮ್ಮ ಕನ್ನಡ ಸಿನಿಮಾಗೆ ವರ್ಲ್ಡ್ ವೈಡ್ ರೆಕಗ್ನಿಶನ್ ಸಿಗುತ್ತಿರುವುದು ಕನ್ನಡಿಗರಾಗಿ ನಮಗೆ ಹೆಮ್ಮೆ ತರುವ ವಿಷಯ ಆಗಿದೆ. ಕನ್ನಡದ ಕಾಂತಾರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ ಡಬ್ ಆಗಿ, ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಾಣುತ್ತಿದೆ. 50 ದಿನ ಪೂರೈಸಿದರು, ಕಾಂತಾರ ಸಿನಿಮಾ ಹವಾ ಮಾತ್ರ ಕಡಿಮೆ ಆಗುತ್ತಿಲ್ಲ.

ಸ್ಟಾರ್ ಕಲಾವಿದರೆಲ್ಲರು ಕಾಂತಾರ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿರುವವುದು ಸಂತೋಷದ ವಿಷಯ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ (Prabhas) ಅವರು ಎರಡು ಸಾರಿ ಕಾಂತಾರ ಸಿನಿಮಾ ನೋಡಿ, ಮತ್ತೊಮ್ಮೆ ನೋಡಲು ಸಿದ್ಧ ಎಂದಿದ್ದರು. ತಮಿಳು ನಟರಾದ ಧನುಷ್ (Dhanush), ಕಾರ್ತಿ (Karthi) ಅವರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಸಹ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ, ಸೂಪರ್ ಸ್ಟಾರ್ ಅವರು ತಮ್ಮ ಬಾಬಾ ಸಿನಿಮಾ ಡೈಲಾಗ್ ಮೂಲಕ ಕಾಂತಾರ ಸಿನಿಮಾಗೆ ಮೆಚ್ಚುಗೆ ನೀಡಿದ್ದರು. ಹಾಗೆಯೇ ರಿಷಬ್ ಅವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿ, ಚಿನ್ನದ ಚೈನ್ ಅನ್ನು ಗಿಫ್ಟ್ ಆಗಿ ನೀಡಿದ್ದರು. ಇದನ್ನು ಓದಿ..Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ಚೇತನ್, ಭಾರತ ತಂಡಕ್ಕೆ ಮೀಸಲಾತಿ ಯಾಕೆ ಬೇಕು ಎಂಬುದಕ್ಕೆ ಹೇಳಿದ್ದೇನು ಗೊತ್ತೇ?

ಇದೀಗ ತೆಲುಗಿನ ಖ್ಯಾತ ನಿರೂಪಕಿ ಅನಸೂಯ ಭಾರದ್ವಾಜ್ (Anasuya Bharadwaj) ಅವರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿ, ಹಾಡಿ ಹೊಗಳಿದ್ದಾರೆ, “ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ (Rishab Shetty) ಅವರು ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ನೋಡಿದ ನಂತರ ಬಹಳ ಸಮಯ ನನಗೆ ಅದರಿಂದ ಹೊರಬರಲು ಆಗಲಿಲ್ಲ..ಕಾಂತಾರ ಸಿನಿಮಾದಲ್ಲಿ ಬಳಸಿರುವ ಶಬ್ಧ ಥಿಯೇಟರ್ ಇಂದ ಹೊರಬಂದಮೇಲು ಕೂಡ ನಮ್ಮನ್ನು ಕಾಡುತ್ತದೆ, ಅಷ್ಟರ ಮಟ್ಟಿಗೆ ಪ್ರಭಾವ ಬೀರಿದೆ..” ಎಂದು ಹೇಳಿಕೊಂಡಿದ್ದಾರೆ ನಿರೂಪಕಿ ಅನಸೂಯ ಭಾರದ್ವಾಜ್. ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾವನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಿರುವುದು ಒಂದು ರೀತಿ ಸಂತೋಷದ ವಿಷಯವೇ ಆಗಿದೆ. ಇದನ್ನು ಓದಿ.. Kannada Astrology: ಆಮೆಯ ಉಂಗುರ ಧರಿಸಿದರೆ ನಿಜಕ್ಕೂ ಒಳ್ಳೆಯದ?? ಧರಿಸುವುದರಿಂದ ನಿಜಕ್ಕೂ ಲಾಭ ಆಗುತ್ತದೆಯೇ?

Get real time updates directly on you device, subscribe now.