Kannada Astrology: ಶನಿ ದೇವನಿಂದ ಕಷ್ಟ ಅಷ್ಟೇ ಅಲ್ಲ ಸುಖ ಕೂಡ ಸಿಗುತ್ತದೆ, ಇನ್ನು ಕೆಲವೇ ದಿನಗಳಲ್ಲಿ ಈ ರಾಶಿಗಳಿಗೆ ಶನಿ ದೇವನೇ ಅದೃಷ್ಟ ಕೊಡುತ್ತಾನೆ.

81

Get real time updates directly on you device, subscribe now.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷವಾದ ಸ್ಥಾನವಿದೆ. ಶನಿದೇವರನ್ನು ಕರ್ಮದ ಫಲ ನೀಡುವ ದೇವರು ಎನ್ನುತ್ತಾರೆ. ಇವರು ಯಾವಾಗಲೂ ಎಲ್ಲರಿಗೂ ಕಷ್ಟವನ್ನೇ ನೀಡುವುದಿಲ್ಲ. ಪ್ರಸ್ತುತ ಶನಿದೇವರು ಮಕರ ರಾಶಿಯಲ್ಲಿದ್ದು, 2023ರ ಜನವರಿ 17ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಜನವರಿ 17ರಿಂದ ಶನಿದೇವರ ಹಿಮ್ಮುಖ ಚಲನೆ ಶುರುವಾಗಲಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗಲಿದೆ. ಮುಂದಿನ ವರ್ಷದಿಂದ ಈ ಮೂರು ರಾಶಿಗಳಿಗೆ ಒಳ್ಳೆಯ ಫಲಗಳು ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸಿದ್ದೇವೆ ನೋಡಿ..

ಮೀನ ರಾಶಿ :- ಶನಿದೇವರ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ಕೆಲಸದ ಹೊಸ ಅವಕಾಶ ಸಿಗಬಹುದು. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಮತ್ತು ಹೊಸ ಜವಾಬ್ದಾರಿ ಸಿಗಬಹುದು. ಕೆಲಸ ಬದಲಾವಣೆ ಮಾಡಲು ಪ್ಲಾನ್ ಮಾಡಿರುವವರಿಗೆ ಇದು ಒಳ್ಳೆಯ ಅವಕಾಶ ಆಗಿರುತ್ತದೆ. ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭವಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸಹ ಶುರುವಾಗುತ್ತದೆ.

ಸಿಂಹ ರಾಶಿ :- ಈ ರಾಶಿಯವರಿಗೆ ಕುಟುಂಬಕ್ಕೆ ಸೇರಿದ ಹಾಗೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಅದರಲ್ಲು ಮಾಡುಬೆ ವಿಚಾರದಲ್ಲಿ ವಿಶೇಷವಾದ ಪ್ರಯೋಜನ ಸಿಗುತ್ತಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಎಲೆಕ್ಷನ್ ಗೆ ಟಿಕೆಟ್ ಸಿಗಬಹುದು. ಹೊಸ ಮನೆ ಮತ್ತು ವಾಹನ ಖರೀದಿ ಮಾಡಲು ಇದು ಒಳ್ಳೆಯ ಸಮಯ, ಹಾಗೆಯೇ ಹೂಡಿಕೆ ಮಾಡಲು ಕೂಡ ಇದು ಒಳ್ಳೆಯ ಸಮಯ ಆಗಿದೆ.

ವೃಷಭ ರಾಶಿ :- ಈ ರಾಶಿಯ ಕರ್ಮದ ಸ್ಥಾನದಲ್ಲಿ ಶನಿದೇವರು ಇದ್ದಾನೆ, ಮುಂದಿನ ವರ್ಷ ನಿಮಗೆ ಪ್ರಯೋಜನ ಸಿಗಲಿದೆ. ನಿಮ್ಮ ಬ್ಯುಸಿನೆಸ್ ನಲ್ಲಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ನಿಮಗೆ ಹೆಚ್ಚಿನ ಲಾಭ ಆಗಲಿದೆ. ಉದ್ಯೋಗದಲ್ಲಿ ಇರುವವರಿಗೆ ಸಂಬಳ ಹೆಚ್ಚಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುವುದರಿಂದ, ಹೊಸ ಜಾಗಕ್ಕೆ ಬದಲಾವಣೆ ಉಂಟಾಗಬಹುದು.

Get real time updates directly on you device, subscribe now.