Cricket News: ಟೀಮ್ ಇಂಡಿಯಾ ಅದೃಷ್ಟ ಬದಲಾಗಬೇಕು ಎಂದರೆ, ಆತನೊಬ್ಬ ಎಂಟ್ರಿ ಕೊಡಲೇಬೇಕೆ?? 130 ಕೋಟಿ ಜನರಲ್ಲಿ ಆತನೊಬ್ಬನೇ ಕಿಂಗ್??

33

Get real time updates directly on you device, subscribe now.

Cricket News: ಭಾರತ ತಂಡ ಪ್ರಪಂಚದ ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಒಂದಾಗಿತ್ತು. ಎಲ್ಲರು ಬಹಳ ಇಷ್ಟಪಡುವ ತಂಡವಾಗಿತ್ತು. ವಿರಾಟ್ ಕೊಹ್ಲಿ ಅವರ ನಂತರ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡ ಹಲವು ಸೀರೀಸ್ ಗಳನ್ನು ಮತ್ತು ಟ್ರೋಫಿಗಳನ್ನು ಗೆದ್ದಿದೆ. ಎಲ್ಲವೂ ಸಕ್ಸಸ್ ಫುಲ್ ಆಗಿಯೇ ನಡೆಯುತ್ತಿರುವಾಗ, ಈ ವರ್ಷ ನಡೆದ ಏಷ್ಯಾಕಪ್ ಟೂರ್ನಿ ಇಂದ ಭಾರತ ತಂಡ ಸರಣಿ ಸೋಲುಗಳನ್ನು ಅನುಭವಿಸುವ ಹಾಗೆ ಆಗಿದೆ. ಏಷ್ಯಾಕಪ್ ನಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತು. ಬಳಿಕ ಟಿ20 ವಿಶ್ವಕಪ್ ನಲ್ಲಿ ಸಹ ಭಾರತ ತಂಡ ಸೋಲು ಕಂಡಿತು.

ಏಷ್ಯಾಕಪ್ ನಲ್ಲಿ ತಂಡದ ಕಳಪೆ ಬೌಲಿಂಗ್ ಇಂದ ಸೋಲು ಕಂಡಿತು. ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರ ಅವರಂತಹ ಬೌಲರ್ ಗಳು ತಂಡದಿಂದ ಹೊರಗಿದ್ದ ಕಾರಣ ಸೋಲಿಗೆ ಕಾರಣವಾಯಿತು ಎನ್ನುವ ಮಾತೊಂದು ಶುರುವಾಯಿತು, ಮುಂದಿನ ದಿನಗಳಲ್ಲಿ ಜಸ್ಪ್ರೀತ್ ಬುಮ್ರ ಅವರು ಕಂಬ್ಯಾಕ್ ಮಾಡಿದರು ಸಹ, ಎರಡೇ ಪಂದ್ಯಕ್ಕೆ ಮತ್ತೆ ಅವರಿಗೆ ನೋವು ಶುರುವಾಗಿ, ತಂಡದಿಂದ ಹೊರಗೆ ಮರಳಿದರು. ಇವರ ಅನುಪಸ್ಥಿತಿಯಲ್ಲೇ ಭಾರತ ತಂಡ ವಿಶ್ವಕಪ್ ಗೆ ಪ್ರವೇಶ ಮಾಡಿತು. ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ಸ್ ನಲ್ಲಿ ಸೋತು ಟೂರ್ನಿಯಿಂದ ಹೊರಬಂದಿತು ಭಾರತ ತಂಡ.

ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ, ಯುಜವೇಂದ್ರ ಚಾಹಲ್ ಅವರಂತಹ ಆಟಗಾರರು ಇದ್ದರು ಕೂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ಎಲ್ಲರಲ್ಲೂ ವ್ಯಕ್ತವಾಗುತ್ತಿರುವ ಒಂದೇ ಪ್ರಶ್ನೆ ಎಂದರೆ, ಭಾರತ ತಂಡದಲ್ಲಿ ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡಲು ಬೌಲರ್ ಗಳ ಸಮಸ್ಯೆ ಇದೆ, ಹಾಗಾಗಿ ಜಸ್ಪ್ರೀತ್ ಬುಮ್ರ ಅವರು ತಂಡಕ್ಕೆ ಮರಳಿ ಬಂದರೆ, ಈ ಬೌಲಿಂಗ್ ಸಮಸ್ಯೆ ಎಲ್ಲವೂ ಸರಿಹೋಗುತ್ತದೆ. ಹಾಗಾಗಿ ಬುಮ್ರ ಅವರು ಪೂರ್ತಿಯಾಗಿ ಹುಷಾರಾಗಿ ತಂಡಕ್ಕೆ ಬರುವುದು ಯಾವಾಗ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.

Get real time updates directly on you device, subscribe now.