Rashmika Mandanna: ಕನ್ನಡದಲ್ಲಿ ಅಷ್ಟೇ ಅಲ್ಲ, ರಶ್ಮಿಕ ವಿರುದ್ಧ ಹಿಂದಿಯಲ್ಲಿ ಕೂಡ ಆಕ್ರೋಶ. ಅಲ್ಲೂ ಕೂಡ ಬ್ಯಾನ್ ಆಗ್ತಾರಾ?

25

Get real time updates directly on you device, subscribe now.

ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಗಿಂತ ಹೆಚ್ಚಾಗಿ ಟ್ರೋಲ್ ಆಗಿದ್ದೆ ಜಾಸ್ತಿ. ಕನ್ನಡಿಗರಿಗಂತು ರಶ್ಮಿಕಾ ಅವರಿಗೆ ಕನ್ನಡದ ಬಗ್ಗೆ ಪ್ರೀತಿ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಕಂಡರೆ ಆಗುವುದಿಲ್ಲ ಎಂದೇ ಹೇಳಬಹುದು. ರಶ್ಮಿಕಾ ಅವರು ಕೂಡ ಕನ್ನಡದ ವಿಚಾರ ಬಂದಾಗ, ಆ ರೀತಿಯ ಹೇಳಿಕೆಗಳನ್ನು ನೀಡಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಇವರು ನೀಡಿದ ಆ ಒಂದು ಹೇಳಿಕೆ, ರಶ್ಮಿಕಾ ಅವರನ್ನು ಬ್ಯಾನ್ ಮಾಡಿ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ರಶ್ಮಿಕಾ ಅವರು ಸಂದರ್ಶನ ಒಂದರಲ್ಲಿ ತಮಗೆ ಮೊದಲ ಅವಕಾಶ ಕೊಟ್ಟ ವ್ಯಕ್ತಿಯ ಬಗ್ಗೆ ಮಾತನಾಡಲು ಹಿಂಜರಿದರು..

ರಶ್ಮಿಕಾ ಅವರಿಗೆ ಮೊದಲ ಅವಕಾಶ ಕೊಟ್ಟಿದ್ದು, ರಿಷಬ್ ಶೆಟ್ಟಿ ಅವರು ಮತ್ತು ರಕ್ಷಿತ್ ಶೆಟ್ಟಿ ಅವರು, ಆದರೆ ಆ ಸಿನಿಮಾ ಹೆಸರು ಅಥವಾ ಪ್ರೊಡಕ್ಷನ್ ಹೌಸ್ ನ ಹೆಸರು ಹೇಳುವುದಕ್ಕೂ ಸಹ ರಶ್ಮಿಕಾ ಹಿಂದೆ ಮುಂದೆ ನೋಡಿದ್ದು ಕನ್ನಡಿಗರ ಕೋಪಕ್ಕೆ ಮಾತ್ರವಲ್ಲ ತೆಲುಗು ಮತ್ತು ಹಿಂದಿ ಸಿನಿಪ್ರಿಯರ ಕೋಪಕ್ಕೆ ಕಾರಣವಾಗಿದೆ. ಏಕೆಂದರೇ ಕಾಂತಾರ ಸಕ್ಸಸ್ ಇಂದ ರಿಷಬ್ ಶೆಟ್ಟಿ ಅವರಿಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ ರಿಷಬ್ ಅವರೇ ರಶ್ಮಿಕಾ ಅವರಿಗೆ ಅವಕಾಶ ಕೊಟ್ಟದ್ದು ಎಂದು ಗೊತ್ತಿರುವ ಕಾರಣ, ರಶ್ಮಿಕಾ ಅವರ ಮೇಲೆ ಹಿಂದಿ ಅಭಿಮಾನಿಗಳು ಕೋಪ ಮಾಡಿಕೊಂಡು, ಅವರನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿದ್ದಾರೆ.

ಇದರಿಂದ ರಶ್ಮಿಕಾ ಅವರಿಗೆ ಈಗಾಗಲೇ ಎರಡು ಮೂರು ಜಾಹೀರಾತುಗಳು ಕೈತಪ್ಪಿ ಹೋಗಿದೆಯಂತೆ, ಏಕೆಂದರೆ ರಶ್ಮಿಕಾ ಅವರು ಜಾಹೀರಾತಿನಲ್ಲಿ ಬಳಸುವ ಪ್ರಾಡಕ್ಟ್ ಅನ್ನು ನಾವು ಬಳಸುವುದಿಲ್ಲ ಎಂದು ಕರ್ನಾಟಕದ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ, ಹಿಂದಿ ಅಭಿಮಾನಿಗಳದ್ದು ಕೂಡ ಒಂದೇ ಅಭಿಪ್ರಾಯ ಆಗಿದೆ. ರಶ್ಮಿಕಾ ಅವರ ಬಗ್ಗೆ ಇರುವ ಈ ಆಕ್ರೋಶವೆಲ್ಲಾ ಇದೇ ರೀತಿ ಮುಂದುವರೆದರೆ, ಅವರು ಜಾಹೀರಾತಿನಲ್ಲಿ ಬ್ಯಾನ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ, ಜಾಹೀರಾತುಗಳಲ್ಲಿ ಬ್ಯಾನ್ ಆಗುವುದು ಮುಂದುವರೆದರೆ, ಹಿಂದಿ ಚಿತ್ರರಂಗದಲ್ಲಿ ಸಹ ರಶ್ಮಿಕಾ ಅವರು ಬ್ಯಾನ್ ಆಗಬಹುದು ಎಂದು ಹೇಳಲಾಗುತ್ತಿದೆ.

Get real time updates directly on you device, subscribe now.