Kannada Astrology: ಜೀವನದಲ್ಲಿ ಕೋಟಿಗಳ ಒಡೆಯ ಆಗಿ, ಯಶಸ್ಸು ಪಡೆಯಬೇಕು ಎಂದರೆ, ಮನೆಯಲ್ಲಿರುವ ಲವಂಗ ತೆಗೆದುಕೊಂಡು ಈ ಚಿಕ್ಕ ಕೆಲಸ ಮಾಡಿ ಸಾಕು
Kannada Astrology: ಸಾಮಾನ್ಯವಾಗಿ ಲವಂಗವನ್ನು ಅಡುಗೆಗೆ ಹೆಚ್ಚು ಬಳಕೆ ಮಾಡುತ್ತಾರೆ. ಮಸಾಲೆ ಪದಾರ್ಥವಾಗಿ ಲವಂಗ ಉಪಯೋಗಕ್ಕೆ ಬರುತ್ತದೆ. ಆದರೆ ಲವಂಗದ ಪ್ರಯೋಜನ ಅಷ್ಟಕ್ಕೇ ಸೀಮಿತವಾಗಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಲವಂಗಕ್ಕೆ ಬಹಳ ಪ್ರಯೋಜನವಿದೆ. ಪೂಜೆ ಮಾಡಲು ಹಾಗು ಗ್ರಹಗಳನ್ನು ಶಾಂತವಾಗಿ ಮಾಡಲು ಕೂಡ ಲವಂಗವನ್ನು ಬಳಸುತ್ತಾರೆ. ಸಂಪತ್ತು ಹೆಚ್ಚಿಸಿ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಕಾಪಾಡಲು ಲವಂಗವನ್ನು ಬಳಸಲಾಗುತ್ತದೆ. ಲವಂಗದಿಂದ ಆಗುವ ವಿಶೇಷವಾದ ಪ್ರಯೋಜನಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
*ಒಂದು ವೇಳೆ ನಿಮ್ಮ ಬದುಕಿನ ಮೇಲೆ ರಾಹು ಮತ್ತು ಕೇತುವಿನ ಪ್ರಭಾವ ಇದ್ದರೆ, ನೀವು ಶನಿವಾರದ ದಿವಸ ಲವಂಗವನ್ನು ದಾನ ನೀಡಬೇಕು. ಇದರಿಂದಾಗಿ ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವ ಪರಿಣಾಮಗಳನ್ನು ತಪ್ಪಿಸಬಹುದು.
*ಒಂದು ವೇಳೆ ಜೀವನದ ಪ್ರಮುಖ ಕೆಲಸವನ್ನು ಮಾಡಲು ಮನೆಯಿಂದ ಹೊರಡುತ್ತಿದ್ದರೆ, ಆಗ ನೀವು ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಹೊರಡಿ, ಇದರಿಂದ ನೀವು ಮಾಡಲು ಹೊರಟಿರುವ ಕೆಲಸದಲ್ಲಿ ಖಂಡಿತವಾಗಿ ಯಶಸ್ಸು ನಿಮ್ಮದಾಗುತ್ತದೆ.
*ಎಷ್ಟೇ ಪರಿಶ್ರಮ ಹಾಕಿದದು ಕೂಡ ನಿಮಗೆ ಶುಭವಾಗುತ್ತಿಲ್ಲ ಎನ್ನುವುದಾದರೆ, ಮಂಗಳವಾರ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ಸಾಸಿವೆ ಎಣ್ಣೆಗೆ ಎರಡು ಲವಂಗ ಹಾಕಿ ಆರತಿ ಮಾಡಿ. ಈ ರೀತಿ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ.
*ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಿದ್ದರೆ, ಮನೆಯಲ್ಲಿ ಲಕ್ಷ್ಮೀದೇವಿಯ ಮೂರ್ತಿಯ ಮೇಲೆ ಎರಡು ಲವಂಗಳನ್ನು ಹೂವುಗಳ ಜೊತೆಗೆ ಅರ್ಪಿಸಿ ಪೂಜೆ ಮಾಡಿ, ಇದರಿಂದ ನಿಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಕೆಟ್ಟ ಕೆಲಸಗಳು ದೂರವಾಗುತ್ತದೆ. ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಈ ರೀತಿಯಾಗಿ ಲವಂಗ ಕೇವಲ ಅಡುಗೆ ಮತ್ತು ಆರೋಗ್ಯಕ್ಕೆ ಮಾತ್ರವಲ್ಲದೆ, ಅದೃಷ್ಟ ಸಂಪತ್ತಿಗು ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳಬಹುದಾಗಿದೆ.