ಕ್ರಾಂತಿ ಸಿನಿಮಾ ಸಂದರ್ಶನದ ವೇಳೆ ರೊಚ್ಚಿಗೆದ್ದ ದರ್ಶನ್ ಮಾಡಿದ್ದೇನು ಗೊತ್ತೇ?? ಎಲ್ಲರಿಗೂ ಶಾಕ್ ಕೊಟ್ಟ ಡಿ ಬಾಸ್.

25

Get real time updates directly on you device, subscribe now.

ನಟ ದರ್ಶನ್ ಅವರು ಅಭಿಮಾನಿಗಳ ಆರಾಧ್ಯ ದೈವ, ಕರ್ನಾಟಕಾದ್ಯಂತ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಹೊಂದಿರುವ ನಟ ಎಂದರೆ ದರ್ಶನ್ ಅವರು ಎಂದು ಹೇಳಬಹುದು. ಅವರಿಗೆ ಇರುವಂತಹ ಫ್ಯಾನ್ ಬೇಸ್ ಮತ್ತೊಬ್ಬ ನಟನಿಗೆ ಇರಲು ಸಾಧ್ಯವಿಲ್ಲ. ಇದೀಗ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಒಂದು ವಾರದಿಂದಲು ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ ಡಿಬಾಸ್ ದರ್ಶನ್.

ಹಾಗೆಯೇ ಕ್ರಾಂತಿ ಸಿನಿಮಾದ ರಥ ಎಲ್ಲಾ ಊರುಗಳಲ್ಲಿ ಹಳ್ಳಿ, ಹಳ್ಳಿಗಳಲ್ಲಿ, ನಮ್ಮ ರಾಜ್ಯದ ಮೂಲೆ ಮೂಲಗೆಳಲ್ಲಿ ನಡೆಯುತ್ತಿದೆ. ಅಭಿಮಾನಿಗಳು ಎಲ್ಲಾ ಕಡೆಗಳಲ್ಲಿ ಭರ್ಜರಿಯಾಗಿ ಕ್ರಾಂತಿ ಸಿನಿಮಾ ಪ್ರೊಮೋಷನ್ ಮಾಡುತ್ತಿದ್ದಾರೆ. ಅಭಿಮಾನಿಗಳನ್ನು ಡಿಬಾಸ್ ಅವರು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಇತ್ತೀಚಿನ ಸಂದರ್ಶನದಲ್ಲಿ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ. “ಹಾಳು ಮಾಡೋದಕ್ಕೆ ನೂರು ಜನ ಇದ್ರೆ, ಕಾಯೋದಕ್ಕೆ ಒಬ್ಬ ಇರ್ತಾನೆ, ನನ್ನ ಸೆಲೆಬ್ರಿಟಿಗಳು ದೇವರುಗಳು..ಅವರಿಂದಲೇ ನಾನು. ಕ್ರಾಂತಿ ಅವರ ಸಿನಿಮಾ. ಅದರಿಂದಲೇ ಅವರು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

ಕಾಲೆಳೆಯೋದಕ್ಕೆ 100 ಜನ ಇರ್ತಾರೆ, ಆದರೆ ನಮ್ಮ ಸೆಲೆಬ್ರಿಟಿಗಳು ಇರೋವರೆಗೂ ಯಾರು ಏನು ಮಾಡೋದಕ್ಕೆ ಆಗಲ್ಲ..” ಎಂದು ಖಡಕ್ ಆಗಿ ಹೇಳಿದ್ದಾರೆ ಡಿಬಾಸ್ ದರ್ಶನ್. “ಅವರಿಂದ ನಾವು ಹೊರತು ನಮ್ಮಿಂದ ಅವರಲ್ಲ. ಅವರ ಕೈಗೆ ಯಾವಾಗ ಸಿನಿಮಾ ಹೋಗುತ್ತದೆ ಆಗಿನಿಂದ ಅದು ಅವರ ಸಿನಿಮಾ ನಮ್ಮ ಸಿನಿಮಾ ಅಲ್ಲ. ಅವರು ಈಗ ನಮ್ಮನ್ನ ಎಷ್ಟು ಮೆರೆಸುತ್ತಿದ್ದಾರೋ, ಅದಕ್ಕೆ 10 ಪೈಸೆಯಷ್ಟು ಕೂಡ ಚ್ಯುತಿ ಬರಲ್ಲ, ಅದಕ್ಕೆ ನಾನು ಗ್ಯಾರಂಟಿ..”ಎಂದು ಹೇಳುವ ಮೂಲಕ ದರ್ಶನ್ ಅವರು ಕ್ರಾಂತಿ ಸಿನಿಮಾ ಬಗ್ಗೆ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

Get real time updates directly on you device, subscribe now.