Bigg Boss Kannada: ಮೊದಲ ಬಾರಿಗೆ ಕಿಚ್ಚನನ್ನೇ ನೇರವಾಗಿ ಪ್ರಶ್ನೆ ಮಾಡಿದ ಅನುಪಮಾ: ಬಿಗ್ ಬಾಸ್ ನಲ್ಲಿ ಬಹಿರಂಗವಾಗಿ ಅನುಪಮಾ ಹೇಳಿದ್ದೇನು ಗೊತ್ತೇ?
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 9 ಈಗ 8 ವಾರಗಳನ್ನು ಪೂರೈಸಿ, 9ನೇ ವಾರಕ್ಕೆ ಕಾಲಿಟ್ಟಿದೆ, ಮನೆಯ ಸ್ಪರ್ಧಿಗಳ ನಡುವೆ ಕಾಂಪಿಟೇಶನ್ ಸಹ ಹೆಚ್ಚಾಗಿದೆ. ಕಳೆದ ವಾರ ಬಹಳ ಸ್ಟ್ರಾಂಗ್ ಸ್ಪರ್ಧಿ ಎನ್ನಿಸಿಕೊಂಡಿದ್ದ ದೀಪಿಕಾ ದಾಸ್ ಅವರು ಎಲಿಮಿನೇಟ್ ಆಗಿದ್ದು ನಿಜಕ್ಕೂ ಶಾಕ್ ಆಗಿದೆ. ಈಗ ಕಾಂಪಿಟೇಶನ್ ಭಾರಿ ಟಫ್ ಆಗಿದೆ ಎನ್ನುವುದು ಸ್ಪರ್ಧಿಗಳಿಗೂ ಅರ್ಥವಾಗಿದೆ. ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಹೊಸ ಟಾಸ್ಕ್ ನೀಡಿದ್ದಾರೆ..
ಕಿಚ್ಚ ಸುದೀಪ್ ಅವರು ರೂಪೇಶ್ ರಾಜಣ್ಣ ಅವರಿಗೆ ವಿಶೇಷವಾದ ಟಾಸ್ಕ್ ನೀಡಿದರು. ಈ ಟಾಸ್ಕ್ ನ ಅನುಸಾರ ರೂಪೇಶ್ ರಾಜಣ್ಣ ಅವರು ಸೋಮವಾರದ ದಿನ ಅಡುಗೆ ಮಾಡಬೇಕಿತ್ತು. ಅವರಿಗೆ ಯಾರು ಕೂಡ ಅಡುಗೆ ಮಾಡಲು ಸಹಾಯ ಮಾಡುವ ಹಾಗಿರಲಿಲ್ಲ. ರೂಪೇಶ್ ರಾಜಣ್ಣ ಅವರಿಗೆ ಅಡುಗೆ ಮಾಡಲು ಬರದ ಕಾರಣ, ಇವರಿಗೆ ಅಡುಗೆ ಟಾಸ್ಕ್ ನೀಡಿರುವುದರಿಂದ ಬಿಗ್ ಬಾಸ್ ನ ಇತರ ಸ್ಪರ್ಧಿಗಳು ಶಾಕ್ ಆಗಿದ್ದರು. ಸೋಮವಾರ ಬೆಳಗ್ಗೆ ರಾಜಣ್ಣ ಅವರು ಕಾಫಿ ಮಾಡುವಾಗ ಸಕ್ಕರೆ ಹಾಕಿದ್ದನ್ನು ನೋಡಿಯೇ ಮನೆಯ ಸ್ಪರ್ಧಿಗಳು ಇಂದು ನಮಗೆ ಊಟ ತಿಂಡಿ ಸರಿಯಾಗಿ ಸಿಕ್ಕ ಹಾಗೆ ಎಂದುಕೊಂಡರು.
ಇನ್ನು ರೂಪೇಶ್ ರಾಜಣ್ಣ ಅವರು ಚಪಾತಿ ಮಾಡುವುದನ್ನು ನೋಡಿ ಮನೆಯವರು ಕಂಗಾಲಾಗಿದ್ದು ಖಂಡಿತ. ರೂಪೇಶ್ ರಾಜಣ್ಣ ಅವರು ಅಡುಗೆ ಮಾಡಲು ಪಡುತ್ತಿರುವ ಫಜೀತಿ ನೋಡಿ, ಅನುಪಮಾ ಗೌಡ ಅವರು, “ಸುದೀಪ್ ಸರ್ ಈ ಥರ ಟಾಸ್ಕ್ ಯಾಕೆ ಕೊಟ್ರಿ.. ಈಗ ನಾವು ಒದ್ದಾಡ್ತಾ ಇದ್ದೀವಿ..”ಎಂದು ಸುದೀಪ್ ಅವರಿಗೆ ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿ ಮನೆಯ ಕೆಲವು ಸ್ಫರ್ಧಿಗಳು ನಕ್ಕಿದ್ದಾರೆ. ಇನ್ನು ಕೆಲವು ಸ್ಪರ್ಧಿಗಳು ಈ ದಿನ ಪೂರ್ತಿ ಸರಿಯಾಗಿ ಊಟ ಸಿಕ್ಕ ಹಾಗೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸುದೀಪ್ ಅವರು ಕೊಟ್ಟ ಈ ಟಾಸ್ಕ್ ಇಂದ ರೂಪೇಶ್ ರಾಜಣ್ಣ ಅವರಿಗೆ ಫಜೀತಿ ಶುರು ಆಗಿರಿವುದಂತೂ ಖಂಡಿತ.