Big News: ಟಿ 20 ICC Ranking ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿ ಭದ್ರಪಡಿಸಿಕೊಂಡ ಸೂರ್ಯ ಕುಮಾರ್ ಯಾದವ್.

8

Get real time updates directly on you device, subscribe now.

Big News: ಟಿ20 ವಿಶ್ವಕಪ್ (T20 World Cup) ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಐಸಿಸಿ (ICC) ಟಿ20 ರಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿದ್ದರು. ಈಗಲೂ ಅದೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎನ್ನುವುದು ಒಳ್ಳೆಯ ವಿಚಾರ ಆಗಿದೆ. ಸೂರ್ಯಕುಮಾರ್ ಯಾದವ್ ಅವರು ಈ ವರ್ಷ 189.68 ಸ್ಟ್ರೈಕ್ ರೇಟ್ ನಲ್ಲಿ 239 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಸೂರ್ಯಕುಮಾರ್ ಯಾದವ್. ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು..

ಐಸಿಸಿ ರಾಂಕಿಂಗ್ (ICC T20 Ranking) ನಲ್ಲಿ 869 ರೇಟಿಂಗ್ ಪಡೆದ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದರು. ಬಳಿಕ, ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರ 10 ರೇಟಿಂಗ್ಸ್ ಕಡಿಮೆ ಆಯಿತು, ಆದರೆ ಸೂರ್ಯಕುಮಾರ್ ಯಾದವ್ ಅವರ ಮೊದಲ ಸ್ಥಾನ ಹಾಗೆಯೇ ಭದ್ರವಾಗಿದೆ. ವಿಶ್ವಕಪ್ ಬಳಿಕ ಇಂಗ್ಲೆಂಡ್ ನ ಅಲೆಕ್ಸ್ ಹೇಲ್ಸ್ ಅವರು 12ನೇ ಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನ್ ನಾಯಕ ಬಾಬರ್ ಅಜಂ (Babar Azam) ಈಗ 3ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ರಿಲೆ ರುಸ್ಸೋ (Rilee Russouw) 7ನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ನ ಗ್ಲೆನ್ ಫಿಲಿಪ್ಸ್ (Glenn Philips) ಅವರು 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನು ಓದಿ.. ನೀವು ಪೂಜೆ ಮಾಡಿ, ಆದರೆ ಈ ಹೂವುಗಳನ್ನು ಮಾತ್ರ ಯಾವುದೇ ಕಾರಣಕ್ಕೂ ದೇವರಿಗೆ ಇಡಬೇಡಿ. ಯಾಕೆ ಗೊತ್ತೇ?? ಏನಾಗುತ್ತದೆ ಗೊತ್ತೆ??

ಇನ್ನು ಪಾಕಿಸ್ತಾನ್ ತಂಡದ ಮೊಹಮ್ಮದ್ ರಿಜ್ವಾನ್ (Mohammad Rizwan) ಎರಡನೇ ಸ್ಥಾನದಲ್ಲಿದ್ದಾರೆ. ಹಾಗೂ ದಕ್ಷಿಣ ಆಫ್ರಿಕಾ ತಂಡದ ಏಡನ್ ಮಾರ್ಕ್ರಮ್ (Eden Markram) ಅವರು ಐದನೇ ಸ್ಥಾನವನ್ನು ಕಾಯ್ದಕೊಂಡಿದ್ದಾರೆ. ಬೌಲರ್ ಗಳ ಬಗ್ಗೆ ಹೇಳುವುದಾದರೆ, ರಶೀದ್ ಖಾನ್ (Rasheed Khan) ಅವರು ಐದು ಸ್ಥಾನಕ್ಕೆ ಮೇಲೇರಿ, ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ವಿಶ್ವಕಪ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್ ಕರನ್ (Sam Curran) ಅವರು ಐದನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಲಂಕಾ ತಂಡದ ವನಿಂದು ಹೆಸರಂಗ (Vanindu Hasaranga) ಮೊದಲ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳಲ್ಲಿ ಭಾರತದ ಹಾರ್ದಿಕ್ ಪಾಂಡ್ಯ (Hardik Pandya) ಮೂರನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ್ ತಂಡದ ಶಕೀಬ್ ಅಲ್ ಹಡನ್. ಇದನ್ನು ಓದಿ.. Cricket News: ಹಾರ್ಧಿಕ್ ಪಾಂಡ್ಯ ಎಂಟ್ರಿ ಯಾಗಿದ್ದೆ ತಡ ಭರವಸೆಯ ಯುವ ಆಟಗಾರನ ಕ್ರಿಕೆಟ್ ಜೀವನವೇ ಅಂತ್ಯವಾಯಿತೇ?? ವಾಪಸ್ಸು ಬರುವುದಿಲ್ಲವೇ ಸ್ಟಾರ್??

Get real time updates directly on you device, subscribe now.