Astrology in Kannada: ಕರ್ಪೂರವನ್ನು ನಿಮ್ಮ ಜೇಬಿನಲ್ಲಿ ಈ ರೀತಿ ಮಾಡಿ ಇಟ್ಟುಕೊಂಡರೆ ಹಣದ ಜೊತೆ ಸಂತೋಷ ಕೂಡ ನಿಮ್ಮದೇ.

47

Get real time updates directly on you device, subscribe now.

Astrology in Kannada: ಹಿಂದು ಧರ್ಮದ ಪ್ರಕಾರ ಕರ್ಪೂರ (Camphor) ಬಹಳ ವಿಶೇಷ ಮಹತ್ವ ಇದೆ. ದೇವರಿಗೆ ಆರತಿ ಅರ್ಪಿಸುವ ಮೊದಲು ಕರ್ಪೂರವನ್ನು ಬಳಸುತ್ತಾರೆ. ಕರ್ಪೂರ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ದೇವರಿಗೆ ಆರತಿ ಮಾಡುವಾಗ ಬಳಸುವ ಹೊರತಾಗಿ ಆಯುರ್ವೇದ ಮತ್ತು ಔಷಧದಲ್ಲಿ ಕರ್ಪೂರವನ್ನು ಬಳಸುತ್ತಾರೆ, ಅದರಲ್ಲಿ ಉತ್ತಮ ಔಷಧೀಯ ಗುಣಗಳಿವೆ. ಕರ್ಪೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಕರ್ಪೂರದಿಂದ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆಗಳಿಂದಲು ಪಾರಾಗಬಹುದು ಎನ್ನುತ್ತಾರೆ ಹಿರಿಯರು. ಕರ್ಪೂರ ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ಕರ್ಪೂರ ನಮ್ಮ ಮನೆಯಲ್ಲಿರುವ ನೆಗಟಿವ್ ಎನರ್ಜಿ ಮತ್ತು ಕೆಟ್ಟ ವಿಚಾರಗಳನ್ನು ತೆಗೆದು ಹಾಕುತ್ತದೆ.

ಇದರ ಸುವಾಸನೆ ಮತ್ತು ಜ್ಯೋತಿಯ ಬೆಳಕು ನೆಗಟಿವ್ ಎನರ್ಜಿಯನ್ನು ಕೊನೆ ಮಾಡುವುದು ಮಾತ್ರವಲ್ಲದೆ, ಪಾಸಿಟಿವ್ ಶಕ್ತಿಯನ್ನು ಸೇರಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಕರ್ಪೂರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪೂಜಿಸುವುದು ಮಾತ್ರವಲ್ಲದೆ ಆರೋಗ್ಯವರ್ಧಕ ಔಷಧಿ (Medicianal) ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಕರ್ಪೂರ ಇದ್ದರೆ ನೆಗಟಿವ್ ಎನರ್ಜಿ ದೂರವಾಗುತ್ತದೆ. ಹಾಗಾಗಿ ಕರ್ಪೂರವನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಕರ್ಪೂರ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ದೂರ ಮಾಡುತ್ತದೆ. ನೀವು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮ್ಮ ಜಾತಕದ ಪ್ರಕಾರ ಶುಕ್ರ ಗ್ರಹವು ದುರ್ಬಲ ಸ್ಥಾನದಲ್ಲಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದನ್ನು ಓದಿ.. Alia Bhatt: ಆಲಿಯಾ ಭಟ್ ಮಗುವನ್ನು ನೋಡಲು ಹೋಗಬೇಕು ಎಂದರೇ, ಫಾಲೋ ಮಾಡಬೇಕಾದದ ರೂಲ್ಸ್ ಏನು ಗೊತ್ತೇ?? ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ??

ಆಗ ಕರ್ಪೂರವನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಹತ್ತಿರ ಇಟ್ಟುಕೊಳ್ಳಿ ಇದರಿಂದ ಎಲ್ಲವೂ ಸೆಟ್ ಆಗುತ್ತದೆ. ಅದೇ ರೀತಿ ನಿಮ್ಮ ಜಾತಕದಲ್ಲಿ ಸರ್ಪದೋಷ, ಪಿತೃದೋಷ ಅಥವಾ ರಾಹು ಕೇತು ದೋಷಗಳಿದ್ದರೆ ನಿಮ್ಮ ಜೊತೆಯಲ್ಲಿ ಕರ್ಪೂರವನ್ನು ಇಟ್ಟುಕೊಳ್ಳಬೇಕು. ಕರ್ಪೂರದ ಸಣ್ಣ ಪೀಸ್ ಅನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಆರ್ಥಿಕ ನಷ್ಟ ಉಂಟಾಗುವುದಿಲ್ಲ, ಹಾಗೆಯೇ ತಪ್ಪುಗಳು ಕಂಡು ಬರುವುದಿಲ್ಲ. ನಿಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಕ್ರಮೇಣ ಸುಧಾರಿಸುತ್ತದೆ. ಶುಕ್ರಾಚಾರ್ಯ ಎನ್ನುವವರು ರಾಕ್ಷಸರ ದೇವರು ಮತ್ತು ಶುಕ್ರನ ಅಧಿಪತಿ ಆಗಿದ್ದು, ರಾಕ್ಷಸರು ಚಂಚಲ ಸ್ವಭಾವದವರು. ಆಗ ಶುಕ್ರರನ್ನು ಸಂತೋಷವಾಗಸಲು ಶಾಂತವಾಗಿರಲು ಕರ್ಪೂರವನ್ನು ಬಳಸುವುದು ಒಳ್ಳೆಯದು ಎಂದು ಹೇಳುತ್ತಾರೆ. ಶುಕ್ರದೇವನು ಶಾಂತಿಯುತವಾಗಿದ್ದರೆ ನಿಮಗೆ ಯಶಸ್ಸು ಸಿಗುತ್ತದೆ ಎಂದು ಹೇಳುತ್ತಾರೆ. ಇದನ್ನು ಓದಿ.. Radhika Apte: ನನಗೆ ಚಾನ್ಸ್ ಸಿಕ್ಕಿಲ್ಲ, ಸಿಗದೇ ಇದ್ದರೂ ಅದಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ ಎಂದು ಎಲ್ಲಾ ಸತ್ಯ ಬಿಚ್ಚಿಟ್ಟ ರಾಧಿಕಾ. ಹೇಳಿದ್ದೇನು ಗೊತ್ತೇ?

Get real time updates directly on you device, subscribe now.