ಮತ್ತೊಮ್ಮೆ ಭಾರತವನ್ನು ಕೆಣಕಿದ ಪಾಕ್ ನ ಶೋಯೆಬ್ ಅಕ್ತರ್. ಪಂದ್ಯ ಸೋತ ಮೇಲೆ ಭಾರತದ ಕುರಿತು ಹೇಳಿದ್ದೇನು ಗೊತ್ತೆ??
ನಿನ್ನೆ ನಡೆದ ಟಿ20 ವಿಶ್ವಕಪ್ ನ್ ಎರಡನೇ ಸೆಮಿ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ ಗಳಲ್ಲಿ 6 ವಿಕೆಟ್ಸ್ ನಷ್ಟಕ್ಕೆ 168 ರನ್ಸ್ ಗಳಿಸಿತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 10 ವಿಕೆಟ್ ಗಳನ್ನು ಉಳಿಸಿಕೊಂಡಿದ್ದ ಇಂಗ್ಲೆಂಡ್ ತಂಡ, 16 ಓವರ್ ಗಳಲ್ಲಿ 170 ರನ್ಸ್ ಸಿಡಿಸಿ, ಪಂದ್ಯವನ್ನು ಗೆದ್ದಿತು.
ನಿನ್ನೆಯ ಪಂದ್ಯ ಗೆದ್ದು ಭಾರತ ತಂಡ ಫೈನಲ್ಸ್ ತಲುಪುತ್ತದೆ ಎನ್ನುವ ನಿರೀಕ್ಷೆಯನ್ನು ನಿರಾಸೆ ಮಾಡಿತು, ಭಾರತ ತಂಡ. ನಿನ್ನೆಯ ಪಂದ್ಯದಲ್ಲಿ ಸೋತ ನಂತರ ಭಾರತ ತಂಡದ ಬಗ್ಗೆ ಪಾಕಿಸ್ತಾನ್ ನ ಮಾಜಿ ಆಟಗಾಟ ಶೋಯೆಬ್ ಅಕ್ತರ್ ಮಾತನಾಡಿ ಕೆಣಕಿದ್ದಾರೆ.. “ಪ್ರೆಶರ್ ಇದ್ದೇ ಇತ್ತು, ಟೂರ್ನಿ ಇಂದ ಹೊರಹೋಗುತ್ತದೆ ಎಂದುಕೊಂಡಿದ್ದ ಒಂದು ತಂಡ ಫೈನಲ್ಸ್ ತಲುಪಿತು. ಎರಡನೆಯದಾಗಿ ಭಾರತ ತಂಡ ಕೆಟ್ಟದಾಗಿ ಆಡಿತು. ಬಟ್ಲರ್ ಅವರು ಒಂದೇ ಒಂದು ಚಾನ್ಸ್ ಕೂಡ ಕೊಡದೆ, ಭಾರತವನ್ನು ಸೋಲಿಸಿದರು. ಭಾರತ ತಂಡ ಎದುರಾಳಿಯಲ್ಲಿ ಪ್ರೆಶರ್ ತರಿಸಲು ಆಗಲೇ ಇಲ್ಲ..

ಭಾರತ ತಂಡ ಈಗ ತವರಿಗೆ ವಾಪಸ್ ಹೋಗಲಿದೆ, ಕೆಲವು ಆಟಗಾರರು ಭಾರತಕ್ಕೆ ಹೋದರೆ, ಇನ್ನು ಕೆಲವು ಆಟಗಾರರು, ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಸೀರಿಸ್ ಗೆ ನ್ಯೂಜಿಲೆಂಡ್ ಗೆ ಪಯಣ ಬೆಳೆಸಲಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಆರ್. ಅಶ್ವಿನ್ ಅವರಂತಹ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಿರಲಿದೆ. ಇನ್ನು ಕೆಲವು ಆಟಗಾರರು ಹೊಸಬರಿಗೆ ದಾರಿ ಮಾಡಿಕೊಟ್ಟು, ಅವಕಾಶ ಕೊಡಲು ಸಿದ್ಧರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ತಂಡದಲ್ಲಿ ಆಡುವ ಬಗ್ಗೆ ಕೂಡ ಪ್ರಶ್ನೆಗಳು ಶುರುವಾಗಿದೆ. ಇನ್ನುಮುಂದೆ ಬಿಸಿಸಿಐ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.