ನಿನ್ನೆ ತಾನೇ ನೇರವಾಗಿ ಬೌಲರ್ ಗಳೇ ಕಾರಣ ಎಂಬಂತೆ ಮಾತನಾಡಿದ್ದ ರೋಹಿತ್, ಇಂದು ಆಟಗಾರರ ಬಗ್ಗೆ ಹೇಳಿದ್ದೇನು ಗೊತ್ತೇ??
ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಹಂತದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತು. ಭಾರತ ತಂಡ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಕಾರಣ, ಎಲ್ಲರಿಗೂ ಭಾರತ ತಂಡದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಈಗ ಸುಳ್ಳಾಗಿದೆ. ಈ ಸೋಲಿನ ನಿರಾಶೆಯಿಂದ ಅಭಿಮಾನಿಗಳು ಭಾರತ ತಂಡದ ಆಟಗಾರರನ್ನು ಟ್ರೋಲ್ ಮಾಡುತ್ತಿದ್ದಾರೆ. ನಿನ್ನೆಯ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಈ ಸೋಲಿಗೆ ಬೌಲರ್ ಗಳೇ ಕಾರಣ ಎನ್ನುವ ಹಾಗೆ ಮಾತನಾಡಿದ್ದರು. ಇದೀಗ ಬೇರೆ ರೀತಿಯಲ್ಲೇ ಮಾತನಾಡುತ್ತಿದ್ದಾರೆ.
“ನಾಕೌಟ್ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಿಗುವುದು ಒಂದೇ ಒಂದು ಅವಕಾಶ. ಆದರೆ ಆಟಗಾರರ ಕೆರಿಯರ್ ಅನ್ನು ಒಂದು ಆಟದಿಂದ ಜಡ್ಜ್ ಮಾಡಲು ಆಗುವುದಿಲ್ಲ. ಇಡೀ ವರ್ಷ ಉತ್ತಮ ಪ್ರದರ್ಶನ ನೀಡುವುದಕ್ಕಾಗಿ ಶ್ರಮ ಹಾಕುತ್ತೀರಾ, ಯಾವ ಫಾರ್ಮೇಟ್ ನಲ್ಲಿ ಅಡುತ್ತೀರೋ ಆ ಫಾರ್ಮೇಟ್ ನಲ್ಲಿ ಉತ್ತಮ ಪ್ರದರ್ಶನ ಕೊಡುತ್ತೀರಿ. ಅದನ್ನು ಒಂದು ಗೇಮ್ ಡಿಸೈಡ್ ಮಾಡುವುದಿಲ್ಲ. ನೀವು ಆತ್ಮವಿಶ್ವಾಸದಿಂದ ಚೆನ್ನಾಗಿ ಆಡಿದರೆ, ನಾಕೌಟ್ ಗೇಮ್ ಗಳು ಬಹಳ ಮುಖ್ಯವಾಗುತ್ತದೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.
ಭಾರತ ತಂಡ ಫೈನಲ್ಸ್ ಗೆ ಸೆಲೆಕ್ಟ್ ಆಗಿ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಅವರಿಂದ ಮತ್ತೊಂದು ಅತ್ಯುತ್ತಮ ಪ್ರದರ್ಶನ ನೋಡಲು ಅವಕಶ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಲಿದ್ದರು, ಆದರೆ ಈಗ ಅದೆಲ್ಲವು ನಿರಾಸೆಯಾಗಿದೆ. ಇಂಗ್ಲೆಂಡ್ ತಂಡ ಡಾಮಿನೇಟ್ ಮಾಡಿ, ಪಂದ್ಯ ಗೆದ್ದು ಫೈನಲ್ಸ್ ಆಡಲಿದೆ. ಭಾರತ ತಂಡ ಈಗ ಇದೇ ತಿಂಗಳು ನಡೆಯುವ ನ್ಯೂಜಿಲೆಂಡ್ ಸೀರೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ತಯಾರಿ ಶುರು ಮಾಡಿಕೊಳ್ಳಲಿದೆ.